
ಲೋಕಾಂತದ ಕಾವು
November 7, 2020 @ 6:00 pm - 7:00 pm IST

ದಿನಾಂಕ: ನವೆಂಬರ್ ೭, ೨೦೨೦(November 7, 2020)
ಭಾರತೀಯ ಸಮಯ ಸಾಯಂಕಾಲ 6: PM ಗಂಟೆಗೆ ಪ್ರಾರಂಭ
ಯು ಕೆ ಸಮಯ: 12.30 PM ಪ್ರಾರಂಭ
ಆಧುನಿಕ ಕನ್ನಡ ಕಾವ್ಯಲೋಕದಲ್ಲಿ ಎಷ್ಟೋ ಹೊಸ ಕವನಗಳ ಪ್ರಯೋಗಗಳು ಕಾಣಿಸಿಕೊಂಡರೂ ಕಾವ್ಯ ಜಗತ್ತನ್ನು ಆತ್ಮೀಯವಾಗಿಸುವಲ್ಲಿ ನಾಡಿನ ಹಿರಿಯ ಕವಿಗಳ ರಚನೆಗಳು ಮನದಾಳದಲ್ಲಿ ಮರುಜೀವ ಪಡೆಯುತ್ತವೆ. ಕವಿಗಳು ಸಮಾಜದ ಒಳಗಿದ್ದೆ ಕವನಗಳಿಗೆ ಜೀವ ತುಂಬಿರುತ್ತಾರೆ. ಸಮಾಜದ ಒಳ ಬೇಗುದಿಗಳಿಗೆ ಬೆಳಕಾಗುತ್ತಾರೆ. ಸಹೃದಯರನ್ನು ನೇರವಾಗಿ ಸಮಾಜದ ಸಮಸ್ಯೆಗಳತ್ತ ತಳ್ಳಬೇಕೆಂದೇನೂ ಇಲ್ಲ. ಸಮಾಜದ ಸಂವೇದನೆಗಳು ಅಭಿವ್ಯಕ್ತಗೊಳ್ಳುವಾಗ ಆತ್ಮೀಯವಾಗಿ ಸೆಳೆದು ಬುದ್ಧಿ, ಭಾವಗಳನ್ನು ಸ್ಪರ್ಶಿಸುವ ಗುಣವನ್ನು ಹೊಂದಿರುವುದು ಮುಖ್ಯ.
“ಆಟದಲ್ಲಿ ಕೂಟದಲ್ಲಿ
ಬೇಟದಲ್ಲಿ ನೋಟದಲ್ಲಿ
ಹೊಸೆದ ಭಾವದಾಟದಲ್ಲಿ ಮೆರೆಯುತಿತ್ತು ಕವಿತೆ;
ಲೋಕಾಂತದ ಕಾವಿನಲ್ಲಿ
ಏಕಾಂತದ ಧ್ಯಾನದಲ್ಲಿ
ಭಾವ ಭಾರದೊಜ್ಜೆಯಲ್ಲಿ ತಿಣುಕುತಿತ್ತು ಕವಿತೆ”
– ಮೋಹನ ಕುಂಟಾರ್ (ಲೋಕಾಂತದ ಕಾವು)
ಮೋಹನ ಕುಂಟಾರ್ ಅವರ “ಲೋಕಾಂತದ ಕಾವು” ಕವಿತೆಗಳ ಕುರಿತು ಅವಲೋಕನ ಕಾರ್ಯಕ್ರಮ.
ಪಾಲ್ಗೊಳ್ಳುತ್ತಿರುವವರು:
ಡಾ. ವೆಂಕಟಗಿರಿ ದಳವಾಯಿ
ಡಾ. ಸುಬ್ರಾವ ಎಂಟೆತ್ತಿನವರು
ಈ ಕಾರ್ಯಕ್ರಮದ ನೇರಪ್ರಾಸಾರವನ್ನು ನಮ್ಮ ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವೀಕ್ಷಿಸಬಹುದು.
Facebook Live: https://www.facebook.com/vividlipi/live
YouTube live link: https://www.youtube.com/vividlipi/live