
ಗೈರ ಸಮಜೂತಿ – ಕಾದಂಬರಿಯ ಕುರಿತು ಸಹೃದಯ ಸಂವಾದ
November 12, 2020 @ 6:00 pm - 7:00 pm IST

ಗೈರ ಸಮಜೂತಿ – ಕಾದಂಬರಿಯ ಕುರಿತು ಸಹೃದಯ ಸಂವಾದ
ದಿನಾಂಕ: ನವೆಂಬರ್ ೧೨, ೨೦೨೦(November 12, 2020)
ಭಾರತೀಯ ಸಮಯ ಸಾಯಂಕಾಲ 6: PM ಗಂಟೆಗೆ ಪ್ರಾರಂಭ
ಯು ಕೆ ಸಮಯ: 12.30 PM ಪ್ರಾರಂಭ
ರಾಘವೇಂದ್ರ ಪಾಟೀಲರ ಹೊಸ ಕಾದಂಬರಿ `ಗೈರ ಸಮಜೂತಿ’ಯು ಒಂದು ಸಶಕ್ತ ಸಂಕಥನವಾಗಿದೆ.
ಗೈರ ಸಮಝೂತಿ ಎಂದರೆ ತಪ್ಪು ಕಲ್ಪನೆ, ಭ್ರಾನ್ತಿ. ಈ ಶಬ್ದದ ಅರ್ಥದ ಪದರುಗಳು ವಿಸ್ತಾರವಾದ ಅರ್ಥವ್ಯಾಪ್ತಿಯುಳ್ಳ ಶಕ್ತಿ ಉಳ್ಳವುಗಳಾಗಿವೆ. ಸಂಸಾರದ ಸಂಚಾರಿ ಸ್ತರಗಳಲ್ಲಿ ನಾವು ನಿತ್ಯ ಅನುಭವಿಸುವ ಭವದ ನೆಲೆಗಳಲ್ಲೇ ಹಲವಾರು ಗೈರ ಸಮಜೂತಿಗಳು ನಮ್ಮ ತಿಳಿವಿನ ಹಣೆ ಬರಹಗಳನ್ನು ನಿತ್ಯವೂ ಬರೆಯುತ್ತಲೇ ಇರುತ್ತವೆ. ಇರುವದು ಒಂದು, ಆದರೆ ನಾವು ತಿಳಿಯುವದು ಇನ್ನೊಂದು – ಈ ವ್ಯೂಹವನ್ನು ಭೇದಿಸಿಕೊಂಡು ಹೋಗಿ ಇಹವನ್ನು ಗೆಲ್ಲುವದು ತೀರ ಕಷ್ಟದ ಕ್ರಿಯೆ.
ದ್ವಂದ್ವಗಳ ಸಂಘರ್ಷಗಳು ಹಾಗು ಸಂಕಟಗಳು ಈ ಕಾದಂಬರಿಯ ಸ್ಥಾಯಿ ನೆಲೆಯ ಧ್ಯಾನ ಕೇಂದ್ರವಾಗಿವೆ. ಆದರೆ ಅನುದಿನದ ಬದುಕಿನ ಸಂಚಾರಿ ನೆಲೆಯ ಹಾಸಿನಲ್ಲೇ ಈ ಎಲ್ಲ ಸಂಕಟ ಹಾಗೂ ಸಂಘರ್ಷಗಳು ಹೊಕ್ಕಾಗಿ ಹೆಣೆದುಕೊಂಡಿವೆ.
ಪಾಲ್ಗೊಳ್ಳುತ್ತಿರುವ ವರು:
ಡಾ. ರಾಘವೇಂದ್ರ ಪಾಟೀಲ
ಶ್ರೀ. ಆನಂದ ಜುಂಝರವಾಡ್
ಶ್ರೀ. ಹರ್ಷ ಡಂಬಳ
ನೇರಪ್ರಸಾರವನ್ನು ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವೀಕ್ಷಿಸಬಹುದು.
Facebook Live: https://www.facebook.com/vividlipi/live
YouTube live link: https://www.youtube.com/vividlipi/live
ಕನ್ನಡ ರಾಜ್ಯೋತ್ಸವದ ಪ್ರಯುಕ್ತ
ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ
ಮೂಕ ಟ್ರಸ್ಟ್, ವಿವಿಡ್ಲಿಪಿ ಮತ್ತು ರೇಡಿಯೋ ಗಿರ್ಮಿಟ್ ಕಾರ್ಯಕ್ರಮ