
ಕೀರ್ತಿ ನೆನಪು
July 31, 2020 @ 2:30 pm - 3:30 pm IST

ಕೀರ್ತಿನಾಥ ಕುರ್ತಕೋಟಿ ಇವರು ಕವಿ, ನಾಟಕಕಾರ, ವಿಮರ್ಶಕ, ಅನುವಾದಕ, ಅಂಕಣಕಾರ. ಗುಜರಾತಿನಲ್ಲಿ ಕಾಲೇಜು ಉಪನ್ಯಾಸಕರಾಗಿ ವೃತ್ತಿಯನ್ನು ಕೈಗೊಂಡು, ನಿವೃತ್ತಿಯನ್ನು ಪಡೆದ ನಂತರವೇ ಧಾರವಾಡಕ್ಕೆ ಮರಳಿ ಅಲ್ಲಿಯೇ ನೆಲಸಿದರು. ಕುರ್ತಕೋಟಿಯವರು ಜಿ.ಬಿ.ಜೋಶಿಯವರ ಮನೋಹರ ಗ್ರಂಥಮಾಲೆಗೆ ಸಾಹಿತ್ಯ ಸಲಹಾಕಾರರಾಗಿ ಕೆಲಸ ಮಾಡಿದರು.ಇವರ “ಉರಿಯ ನಾಲಗೆ” ಎಂಬ ಅಂಕಣ ಬಹಳ ಜನಪ್ರಿಯ, ಈ ಅಂಕಣ ಪ್ರಜಾವಾಣಿಯಲ್ಲಿ ವಾರವಾರವೂ ಪ್ರಕಟವಾಗುತ್ತಿತ್ತು . ೧೯೫೯ರಲ್ಲಿ ಮನೋಹರ ಗ್ರಂಥಮಾಲೆ ಹೊರತಂದ ತನ್ನ ರಜತ ವರ್ಷದ ಹೊತ್ತಿಗೆ “ನಡೆದು ಬಂದ ದಾರಿ” ಯಲ್ಲಿ ಇವರು ಬರೆದ ಸಾಹಿತ್ಯವಿಮರ್ಶೆ ಕನ್ನಡ ವಿಮರ್ಶಾಲೋಕದಲ್ಲಿ ಒಂದು ಹೊಸ ಆಯಾಮವನ್ನು ಸೃಷ್ಟಿಸಿತು.
ಇಂದು ಇವರ ನೆನಪಿನಲ್ಲಿ ಅಭಿನಯ ಭಾರತಿ, ಜಿ,ಬಿ ಮೆಮೋರಿಯಲ್ ಟ್ರಸ್ಟ್,, ಕೂತುಕೋಟಿ ಮೆಮೋರಿಯಲ್ ಟ್ರಸ್ಟ್ ಮತ್ತು ಮೂಕ ಟ್ರಸ್ಟ್, ಇವರ ಸಂಯುಕ್ತಾಶ್ರಯದಲ್ಲಿ “ಕೀರ್ತಿ ನೆನಪು” ನೇರ ಪ್ರಸಾರ ಕಾರ್ಯಕ್ರಮ ವಿವಿಡ್ಲಿಪಿಯಲ್ಲಿ ನೋಡಬಹುದು.
Airmeet Live: https://airmeet.com/e/4fa76460-d30c-11ea-b6ae-1b5ef082bc66
Facebook Live: https://www.facebook.com/vividlipi/live
Youtube Live: https://www.youtube.com/vividlipi/live
ಮೂಕ ಟ್ರಸ್ಟ್ , ವಿವಿಡ್ಲಿಪಿ, ಯಾಜಿ ಪ್ರಕಾಶನ, ಮನೋಹರ ಗ್ರಂಥ ಮಾಲಾ ಮತ್ತು ರೇಡಿಯೋ ಗಿರ್ಮಿಟ್ ಕಾರ್ಯಕ್ರಮ