
- This event has passed.
ಮಂಡ್ಯ ರಮೇಶ “ಒಂದು ರಂಗ ಪಯಣ” – ಸಮನ್ವಯ: ಅನಂತ ಚಿನಿವಾರ್
June 21, 2020 @ 6:00 pm - 7:30 pm IST

ಪ್ರಖ್ಯಾತ ‘ನಟನ’ ತಂಡದ ಸಂಸ್ಥಾಪಕರಾಗಿ, ಚಲನಚಿತ್ರ ರಂಗದಲ್ಲಿ ನೂರಾರು ಚಿತ್ರಗಳ ಯಶಸ್ವೀ ಕಲಾವಿದರಾಗಿ ಹೀಗೆ ಮಹತ್ವದ ಸಾಧನೆಗಳ ಕ್ರಿಯಾಶೀಲ ಕಲಾವಿದ ಶ್ರೀ. ಮಂಡ್ಯ ರಮೇಶ. ರಂಗಭೂಮಿ ತಜ್ಞ, ನಟ, ನಿರ್ದೇಶಕ, ಅದ್ಭುತ ಕಲಾವಿದ, ಕಲಾಸಂಘಟಕ, ಅತ್ಯುತ್ತಮ ರಂಗಶಿಕ್ಷಕ ಮಂಡ್ಯ ರಮೇಶ್ ಅವರೊಂದಿಗೆ ಅವರ ರಂಗ ಪಯಣದ ಅನುಭವ ಕೇಳುವ ಅವಕಾಶ ಪಡೆಯಿರಿ ಈ ಭಾನುವಾರ ೨೧ ಜೂನ್ ೨೦೨೦ ರಂದು ವಿವಿಡ್ಲಿಪಿಯ ನೇರ ಪ್ರಸಾರ ಕಾರ್ಯಕ್ರಮದಲ್ಲಿ.
ಈ ಕಾರ್ಯಕ್ರಮದ ಸಮನ್ವಯ ಮಾಡಿಕೊಡುತ್ತಿರುವವರು ಶ್ರೀ. ಅನಂತ ಚಿನಿವಾರ್. ಇವರು ಜನಶ್ರೀ, ಪಬ್ಲಿಕ್ ಟಿ ವಿ, ಸುವರ್ಣ ನ್ಯೂಸ್ ಹಾಗೂ ನ್ಯೂಸ್18 ಚಾನಲ್ಲುಗಳ ಪ್ರಧಾನ ಸಂಪಾದಕನಾಗಿ ದುಡಿದವರು. “ಓ ಮನಸೇ” ಪತ್ರಿಕೆಯ ಸಂಪಾದಕರಾಗಿದ್ದವರು. ಅದಕ್ಕೂ ಮುನ್ನ ‘ಇಂಡಿಯಾ ಟುಡೇ’ ಹಾಗೂ ‘ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಗಳಲ್ಲಿ ಅನುಭವ ಪಡೆದುಕೊಂಡಿದ್ದವರು. “ಅತ್ತ ಇತ್ತಗಳ ಸುತ್ತ”, “ಗೇಮ್, ಹಾಗೂ “ಹೋರಾಟದ ಬದುಕು” ಎಂಬ ಅಂಕಣಗಳಿಂದ, ಮತ್ತು ‘ಹೇ ರಾಮ್’ ಎಂಬ ನಾಟಕದಿಂದ ಬರಹಗಾರರಾಗಿಯೂ ಗುರುತಿಸಿಕೊಂಡವರು.
ಮಾತನಾಡುವವರು – ಮಂಡ್ಯ ರಮೇಶ, ಜೊತೆಗೆ ಅನಂತ ಚಿನಿವಾರ್
ದಿನಾಂಕ: ೨೧ ಜೂನ್ ೨೦೨೦,ಭಾನುವಾರ
ಯು ಕೆ ಸಮಯ ಮಧ್ಯಾಹ್ನ – ೧.೩೦ ರಿಂದ ೩.೦೦ ರ ವರೆಗೆ
ಭಾರತೀಯ ಸಮಯ ಸಾಯಂಕಾಲ – ೬ – ೭.೩೦ ಯ ವರೆಗೆ
ಸಹಯೋಗ: ಯಾಜಿ ಪ್ರಕಾಶನ, ಹೊಸಪೇಟೆ ಮತ್ತು ಮನೋಹರ ಗ್ರಂಥ ಮಾಲಾ, ಧಾರವಾಡ
Airmeet link to join: https://airmeet.com/e/ddaf8840-b1ca-11ea-a750-ebd279cae988
YouTube Live: https://youtu.be/3UULsZidDOw
Facebook Live: https://www.facebook.com/vividlipi/live/