
ಸಾಹಿತ್ಯ ಮತ್ತು ಮಾಹಿತಿ ತಂತ್ರಜ್ಞಾನ
July 26, 2020 @ 6:00 pm - 7:30 pm IST

ವಿವಿಡ್ಲಿಪಿ ಕಾರ್ಯಕ್ರಮ : ಸಾಹಿತ್ಯ ಮತ್ತು ಮಾಹಿತಿ ತಂತ್ರಜ್ಞಾನ
ನಮ್ಮೊಡನೆ: ಟಿ. ಜಿ. ಶ್ರೀನಿಧಿ
ಸಮಯ: ಸಾಯಂಕಾಲ ೬ – ೭.೩೦ ಭಾರತೀಯ ಸಮಯ
ಮಧ್ಯಾಹ್ನ ೧.೩೦ – ೩.೦೦ ಯು ಕೆ ಸಮಯ
ಸಹಯೋಗ: ಯಾಜಿ ಪ್ರಕಾಶನ ಮತ್ತು ಮನೋಹರ ಗ್ರಂಥ ಮಾಲಾ
ಮಾಹಿತಿ ತಂತ್ರಜ್ಞಾನ ಜಗತ್ತಿನ ರೂಪರೇಖೆ ಬದಲಿಸಿದೆ, ಗಡಿ/ ಸೀಮೆಗಳನ್ನು ಅಳಸಿಹಾಕಿದೆ. ಮಾಹಿತಿ ತಂತ್ರಜ್ಞಾನ ಎಲ್ಲ ಕ್ಷೇತ್ರದಲ್ಲಿ ಬದಲಾವಣೆ ತಂದಂತೆ ಸಾಹಿತ್ಯ ಕ್ಷೇತ್ರದಲ್ಲೂ ಬದಲಾವಣೆ ತಂದಿದೆ. ಸಾಹಿತ್ಯ ಕ್ಷೇತ್ರ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ತಮ್ಮನ್ನು ತೊಡಗಿಸಿಕೊಂಡ್ಡಿರುವ ಟಿ. ಜಿ. ಶ್ರೀನಿಧಿ, ಸಾಹಿತ್ಯ ಮತ್ತು ಮಾಹಿತಿ ತಂತ್ರಜ್ಞಾನ ವಿಷಯದ ಕುರಿತಾಗಿ ಮಾತನಾಡಲು ನಮ್ಮೊಡನೆ ವಿವಿಡ್ಲಿಪಿ ನೇರ ಪ್ರಸಾರದಲ್ಲಿ ಬರಲಿದ್ದಾರೆ.
ಟಿ. ಜಿ. ಶ್ರೀನಿಧಿ ಮಾಹಿತಿ ತಂತ್ರಜ್ಞಾನ ಲೇಖಕ ಮತ್ತು ಅಂಕಣಕಾರ. ೨೦೦೦ಕ್ಕೂ ಹೆಚ್ಚು ಲೇಖನ, ಬ್ಲಾಗ್ಬರಹ, ೧೬ ಪುಸ್ತಕ ಬರೆದಿದ್ದಾರೆ. ತಂತ್ರಜ್ಞಾನ ಕುರಿತು ಕನ್ನಡದ ವೀಡಿಯೋಗಳನ್ನು ಮಾಡುವುದು, ಮಕ್ಕಳ ಕತೆಗಳನ್ನು ಕನ್ನಡಕ್ಕೆ ಅನುವಾದಿಸುವುದು ಹವ್ಯಾಸಗಳು. ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ, ವಿಜ್ಞಾನ-ತಂತ್ರಜ್ಞಾನಕ್ಕೆ ಮೀಸಲಾದ ejnana.com ಜಾಲತಾಣದ ಸಂಪಾದಕರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ೧೫ ವರ್ಷ ಅನುಭವವಿರುವ ಶ್ರೀನಿಧಿ, ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕೆಲಸಮಾಡುತ್ತಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ವೇದಿಕೆಗಳಲ್ಲಿ ವಿಚಾರಮಂಡನೆ ಮಾಡಿದ್ದಾರೆ. ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡಮಿಯ ‘ಶ್ರೇಷ್ಠ ಲೇಖಕ’ ಪ್ರಶಸ್ತಿ, ೨೦೧೭ರ ಇಂಡಿಯನ್ ಬ್ಲಾಗರ್ ಅವಾರ್ಡ್ಸ್ನಲ್ಲಿ ‘ಅತ್ಯುತ್ತಮ ಕನ್ನಡ ಬ್ಲಾಗ್’ ಗೌರವ, ೨೦೧೮ರಲ್ಲಿ ವಿಜಯ ಕರ್ನಾಟಕದ ‘ಟಾಪ್ ೧೦ ಕನ್ನಡಿಗರು’ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವಿಶ್ವವಿದ್ಯಾನಿಲಯದ ಪಠ್ಯಪುಸ್ತಕಗಳಲ್ಲಿ, ಇತರ ಸಂಕಲನಗಳಲ್ಲಿ ಇವರ ಲೇಖನಗಳಿವೆ.
Facebook Live: https://www.facebook.com/vividlipi/live
Youtube Live: https://www.youtube.com/vividlipi/live
Air meet: https://airmeet.com/e/e9910420-cc70-11ea-9473-0bcf122adec3
Airmeet is new virtual meeting software that is best experienced in Laptop/Desktop. Video chat with the presenter using Laptop/Desktop using the feature “Raise your hand”. Users joining through mobile has to type the questions.
Use Guest Login if you don’t prefer to login through Email or Social media login.