
- This event has passed.
ಸಂವಾದ ಕಾರ್ಯಕ್ರಮ: ಬದುಕು ಬದಲಾಗಲು, ನೆನಪು ಬದಲಾಗಲೇ ಬೇಕು
March 6 @ 4:00 pm - 5:30 pm IST

ಸಂವಾದ ಕಾರ್ಯಕ್ರಮ: ಬದುಕು ಬದಲಾಗಲು, ನೆನಪು ಬದಲಾಗಲೇ ಬೇಕು
Date: 06 Mar 2021
Time: 4.00 PM IST/ 10.30 AM GMT
ನಮ್ಮೊಡನೆ:
ಮಾತನಾಡುವವರು ಡಾ.ಉಷಾ ವಸ್ತಾರೆ, ನ್ಯೂರೋ ಸೈಂಟಿಸ್ಟ್, ಯೋಗಕ್ಷೇಮದ ಸಂಸ್ಥಾಪಕರು.
ನಡೆಸಿಕೊಡುವವರು ಸುಧಾ ಶಮಾ೯, ಸಂಪಾದಕರು ಪ್ರಾಫಿಟ್ ಪ್ಲಸ್.
ಹೊಸದಾದ ಸಂವಾದ ಕಾರ್ಯಕ್ರಮ ವೀಕ್ಷಕರನ್ನು ಕಾರ್ಯಕ್ರಮದ ಭಾಗಿಯಾಗಿ ಮಾಡುವ ಉದ್ದೇಶದಿಂದ ಪ್ರಾರಂಭ ಮಾಡಿದ್ದು. ವೀಕ್ಷಕರು ತಮ್ಮ ಪ್ರಶ್ನೆ ಯು ಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ ಸಂದೇಶದ ಮಾದರಿಯಲ್ಲಿ ಕಳಿಸಬಹುದು ಅಥವಾ Airmeetನಲ್ಲಿ ಭಾಗಿಯಾಗಿ ನೇರವಾಗಿ ವಿಡಿಯೋ ಅಥವಾ ಆಡಿಯೋ ಮೂಲಕ ನಮ್ಮ ಅತಿಥಿಯೊಂದಿಗೆ ಮಾತನಾಡಬಹುದು.
ಕಿರು ವಿವರ
ಡಾ. ಉಷಾ ವಸ್ತಾರೆ
ನ್ಯೂರೋ ಸೈಂಟಿಸ್ಟ್, ಮೂವತ್ತು ವರ್ಷಗಳ ಕಾಲ ಅಮೇರಿಕದಲ್ಲಿದ್ದರು. ಅಲ್ಲಿನ ಟೆಂಪಲ್ ವಿಶ್ವವಿದ್ಯಾಲಯದಲ್ಲಿ ಫ್ಯಾಕಲ್ಟಿ ಆಗಿದ್ದರು. Center for Parkinson’s Disease and Movement Disroder ಅಲ್ಲಿ ಪಾರ್ಕಿನ್ ಸನ್ ಕಾಯಿಲೆ ಬಗೆಗೆ ಕ್ಲಿನಿಕಲ್ ರಿಸರ್ಚ್, ಇವರ ಸಂಶೋಧನೆ ಮುಖ್ಯವಾಗಿ ಸ್ಟ್ರೋಕ್ ಮತ್ತು ಪಾರ್ಕಿನ್ಸನ್ ಕಾಯಿಲೆ ಬಗೆಗೆ ವಿಶೇಷ ಬೆಳಕು ಚೆಲ್ಲುತ್ತದೆ. ಎಪ್ಪತ್ತಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಇವರ ಪಿ.ಎಚ್.ಡಿ ಪ್ರಬಂಧ ರಾಷ್ಟ್ರಪತಿಗಳ ವಿಶೇಷ ಪುರಸ್ಕಾರಕ್ಕೆ ನಾಮನಿರ್ದೆಶನ ಪಡೆದಿತ್ತು. ಹನ್ನೆರಡು ವರ್ಷಗಳ ಹಿಂದೆ ಭಾರತಕ್ಕೆ ಬಂದು ಯೋಗಕ್ಷೇಮ ಸಂಸ್ಥೆಯನ್ನು ಡಾ. ಅಖಿಲಮಾಲಿನಿ ವಸ್ತಾರೆ ಅವರ ಜೊತೆ ಸೇರಿ ಸ್ಥಾಪಿಸಿದರು. ಪಾಸಿಟೀವ್ ಸೈಕಾಲಜಿಗೆ ಸಂಬಂಧಿಸಿದ ಕನ್ನಡದ ಮೊಟ್ಟಮೊದಲ ಪತ್ರಿಕೆ ಪ್ರಾಫಿಟ್ ಪ್ಲಸ್ ಮೂಲಕ ಇವರು ಮನಸ್ಸಿಗೆ ಸಂಬಂಧಿಸಿದ ಇತ್ತೀಚಿನ ಸಂಶೋಧನೆಗಳನ್ನು, ಮನಸ್ಸನ್ನು ಪಳಗಿಸುವ ಅಗತ್ಯ ಮತ್ತು ಹೇಗೆ ಪಳಗಿಸಬಹುದು ಎನ್ನುವುದನ್ನು ಹೇಳುತ್ತ ಬಂದಿದ್ದಾರೆ. ಭರವಸೆ ಎನ್ನುವ ಇವರೊಂದಿಗಿನ ಪ್ರಶ್ನೋತ್ತರದ ಅಂಕಣ ಬಹಳ ಮೆಚ್ಚುಗೆ ಗಳಿಸಿದೆ. ಆಕಾಶವಾಣಿ, ದೂರದರ್ಶನಗಳಲ್ಲಿ ಇವರ ಅನೇಕ ಕಾರ್ಯಕ್ರಮಗಳು ಪ್ರಸಾರವಾಗಿವೆ.
ವಿವಿಡ್ಲಿಪಿಯಲ್ಲಿ ಪ್ರಾಫಿಟ್ ಪ್ಲಸ್ ಓದಬಹುದು, ಆಡಿಯೋ ಮ್ಯಾಗಜಿನ್ ಕೇಳಲೂಬಹುದು
ಸುಧಾ ಶರ್ಮಾ ಚವತ್ತಿ
ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲೂ ಸಮೃದ್ಧ ಅನುಭವ ಇರುವ ಇವರು ಕಳೆದ ಎರಡು ವರ್ಷಗಳ ಹಿಂದೆ ಕನ್ನಡದಲ್ಲಿಯೇ ವಿಶಿಷ್ಟವಾದ, ಸಕಾರಾತ್ಮಕ ಚಿಂತನೆಯ, ಭರವಸೆಯ ಬದುಕಿಗಾಗಿಯೇ ರೂಪತಳೆದ ” ಪ್ರಾಫಿಟ್ ಪ್ಲಸ್ ” ಪತ್ರಿಕೆ ಆರಂಭಿಸಿದರು. ಹೆಸರು ನೋಡಿದರೆ ಇದು ಉದ್ಯಮಕ್ಕೆ ಸಂಬಂಧಿಸಿದ ಪತ್ರಿಕೆ ಅನ್ನಿಸಬಹುದು, ಆದರೆ ಸಂತೋಷವೇ ಸಂಪತ್ತು ಎಂದು ನಂಬಿರುವ ಪತ್ರಿಕೆ. ಪ್ರಾಫಿಟ್ ಪ್ಲಸ್ ಕೇವಲ ಪತ್ರಿಕೆ ಅಲ್ಲ ಸದುದ್ದೇಶದ ವೇದಿಕೆ. “ಪ್ರೆಸ್ ರೀಡರ್” ಆ್ಯಪ್ ಅಲ್ಲಿ ಇರುವ ಕನ್ನಡದ ಮೊದಲ ಮಾಸಪತ್ರಿಕೆ ಇದು. ವಿವಿಡ ಲಿಪಿಯಲ್ಲಿಯೂ ಪ್ರಾಫಿಟ್ ಪ್ಲಸ್ಇದೆ.
ಕವಯಿತ್ರಿ, ಲೇಖಕಿ ಸುಧಾ ಶರ್ಮಾ ಅವರಿಗೆ ಗೌರೀಶ ಕಾಯ್ಕಿಣಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಬೇಂದ್ರೆ ಅಡಿಗ ಕಾವ್ಯ ಪ್ರಶಸ್ತಿ, ಹವ್ಯಕಶ್ರೀ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಯೋಗಕ್ಷೇಮದ ಪ್ಯಾಕಲ್ಟಿಯಾಗಿಯೂ ಇವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ನೇರ ಪ್ರಸಾರ
Airmeet Live:
Facebook Live: https://www.facebook.com/vividlipi/live
Youtube Live: https://www.youtube.com/vividlipi/live
Download VIVIDLIPI APP: www.vividlipi.com/app