Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

Virtual Virtual Event
  • This event has passed.

ತತ್ವ ಪದ ಸಾಹಿತ್ಯದ ಸ್ವರೂಪ

June 28, 2020 @ 6:00 pm - 7:30 pm IST

Virtual Virtual Event

ಈ ಕಾರ್ಯಕ್ರಮದ ಉದ್ದೇಶ ಒಂದು ವಿಶಿಷ್ಟ ಸಾಹಿತ್ಯದ ಪರಿಚಯ ಮಾಡುವುದು,
ತತ್ವ ಪದ ಸಾಹಿತ್ಯ – ‘ ತತ್ವ ‘ ಎಂದರೆ ಸಿದ್ಧಾಂತ , ಪರಮಾತ್ಮ , ನಿಜಸ್ಥಿತಿ ಎಂದರ್ಥವಾಗುತ್ತದೆ . ತತ್ವಜ್ಞಾನವನ್ನು ಬ್ರಹ್ಮಜ್ಞಾನವೆಂದು ಕರೆಯಲಾಗಿದೆ . ‘ ಪದ ‘ ಎಂಬುದನ್ನು ‘ ಹಾಡು ‘ ‘ ಹದಗೊಂಡ ಶಬ್ದ ” ಎಂದು ಕರೆಯಲಾಗಿದೆ . ಪರಮಾತ್ಮನಿಗೆ ಸಂಬಂಧಿಸಿದ , ಸಿದ್ಧಾಂತವನ್ನು ಹಾಡಿನ ಮೂಲಕ ಅಭಿವ್ಯಕ್ತಿಸುವ ಕ್ರಿಯೆಗೆ ತತ್ವಪದ ಎನ್ನುತ್ತಾರೆ . “ ತತ್ವಪದ’ದಲ್ಲಿ ತತ್ವ ಮತ್ತು ಪದ ಇವೆರಡಕ್ಕೂ ಅರ್ಥಪೂರ್ಣವಾದ ಸಂಬಂಧವಿದೆ , ” ತತ್ವ ‘ ವಸ್ತುವಾದರೆ , ‘ ಪದ ‘ ಅಭಿವ್ಯಕ್ತಿ ಮಾಧ್ಯಮ . ವಸ್ತು ಮತ್ತು ಅಭಿವ್ಯಕ್ತಿ ಇವೆರಡನ್ನೂ ಸಮನ್ವಯಗೊಳಿಸಿಕೊಂಡಿರುವ ‘ ತತ್ವಪದ ‘ ಕನ್ನಡ ಸಾಹಿತ್ಯದ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರವಾಗಿರುವುದರ ಜೊತೆಗೆ ಸಂಸ್ಕೃತಿಯೊಂದರ ಪ್ರತೀಕವೂ ಆಗಿದೆ . ತತ್ವಪದಗಳು ಬಹುಸಂಸ್ಕೃತಿಯನ್ನು ಪ್ರತಿಪಾದನೆ ಮಾಡಿವೆ . ತತ್ವಪದಗಳನ್ನು ಭಜನೆ ಪದಗಳೆಂದೂ , ಅನುಭಾವ ಪದಗಳೆಂದೂ ಕರೆಯುತ್ತಾರೆ . ಈ ಪದಗಳನ್ನು ಭಜನೆಗಳ ಮೂಲಕ ಅಭಿವ್ಯಕ್ತಿಸಲು ಪ್ರಾರಂಭಿಸಿದಾಗ ಇವುಗಳಿಗೆ ಭಜನೆ ಪದಗಳೆಂದು ಹೆಸರು ಬಂದಂತೆ ಕಾಣುತ್ತದೆ .
ವಿವಿಡ್ಲಿಪಿ ನೇರ ಪ್ರಸಾರದಲ್ಲಿ ಡಾ. ಬಸವರಾಜ ಸಬರದ ಅವರಿಂದ ತತ್ವ ಪದ ಸಾಹಿತ್ಯದ ಬಗ್ಗೆ ಹೆಚ್ಚಿನ ವಿವರಣೆ ಕೇಳೋಣ ಬನ್ನಿ

ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಜನಿಸಿದ ಡಾ. ಬಸವರಾಜ ಸಬರದವರು, ಸ್ನಾತಕ-ಸ್ನಾತಕೋತ್ತರ ಪದವಿಗಳನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ವಿವಿಧ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ-ಪ್ರಾಚಾರ್ಯರಾಗಿ ಕೆಲಸ ಮಾಡಿದ್ದಾರೆ. ಮೂರು ದಶಕಗಳ ಕಾಲ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರವಾಚಕರಾಗಿ-ಪ್ರಾಧ್ಯಾಪಕರಾಗಿಮುಖ್ಯಸ್ಥವಾಗಿ-ಡೀನ್‍ರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನಿವೃತ್ತಿಯ ನಂತರವೂ ಜಾನಪದ ವಿಶ್ವವಿದ್ಯಾಲಯ, ಮಹಿಳಾ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸಾರಾಂಗದ ನಿರ್ದೇಶಕರಾಗಿ, ಶರಣ ಸಾಹಿತ್ಯ ಪೀಠಗಳ ನಿರ್ದೇಶಕರಾಗಿ, ಸಿಂಡಿಕೇಟ್ ಸದಸ್ಯರಾಗಿ ಕೆಲಸ ಮಾಡಿದ ಇವರು ಶಿಕ್ಷಣ ಕ್ಷೇತ್ರಕ್ಕೆ
ಮಹತ್ವದ ಕೊಡುಗೆ ನೀಡಿದ್ದಾರೆ.
ಡಾ. ಬಸವರಾಜ ಸಬರದವರು ಕನ್ನಡದ ಮಹತ್ವದ ಸಾಹಿತಿ. ಕಾವ್ಯ, ನಾಟಕ, ವಿಚಾರಸಾಹಿತ್ಯ, ವಿಮರ್ಶೆ, ಸಂಶೋಧನೆ, ಸಂಪಾದನೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಎರಡು ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಕೃತಿಗಳಿಗೆ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಜಾನಪದ ಅಕಾಡೆಮಿಗಳಿಂದ ಪುಸ್ತಕ ಬಹುಮಾನಗಳು ಲಭಿಸಿವೆ. ಸಂಘ-ಸಂಸ್ಥೆಗಳು ಅನೇಕ ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ ಪಡೆದಿರುವ ಡಾ. ಸಬರದವರ ಸಾಹಿತ್ಯ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

Watch event in Airmeet (interact with the speakers) and in VIVIDLIPI Facebook/YouTube Live.

Join Airmeet to get a chance to interact with speaker(s) in the live event.

https://airmeet.com/e/0df98ac0-b73c-11ea-bc30-8fd9b946836d

Login to Airmeet link above using your laptop/desktop and “raise hand” for interaction, chat or share your questions using the chat/questions option from the screen.

The event can also be viewed on Youtube Live and Facebook Live

Youtube Live – https://www.youtube.com/c/VIVIDLIPI/live
Facebook Live – https://www.facebook.com/vividlipi/live

 

Organiser

Mooka Trust
Phone:
+91 9535015489
Email:
support@vividlipi.com