
- This event has passed.
ಉಪನ್ಯಾಸ: ಕಡಲೆಂಬ ಮರುಭೂಮಿ
January 10 @ 6:00 pm - 7:00 pm IST

ಉಪನ್ಯಾಸ: ಕಡಲೆಂಬ ಮರುಭೂಮಿ (ಮಧ್ಯಕಾಲೀನ ಸಮುದ್ರ ನಾವಿಕರ ಬದುಕು)
ನಮ್ಮೊಡನೆ: ಶ್ರೀ. ವಸುಧೇಂದ್ರ
ದಿನಾಂಕ: ೧೦ ಜನೆವರಿ ೨೦೨೧ – 10 Jan 2021
ಸಮಯ: ಭಾರತೀಯ ಸಮಯ – ಸಾಯಂಕಾಲ ೬.೦೦ ಗಂಟೆಗೆ (6.00 PM IST)
ಮಧ್ಯಾಹ್ನ ೧೨.೩೦ ಗಂಟೆ ಯು ಕೆ ಸಮಯ (12.30 PM GMT)
ಪ್ರಶ್ನೋತ್ತರ ಸಮಯ – ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರಕ್ಕೆ ಸಮಯವಿದೆ.
ಏರ್ಮೀಟ್ ನಲ್ಲಿ ಭಾಗವಹಿಸಿದ ಎಲ್ಲರೂ ವಿಡಿಯೋ / ಆಡಿಯೋ ಕರೆ ಮೂಲಕ ಪ್ರಶ್ನೆ ಕೇಳಬಹುದು, ಮತ್ತು ಫೇಸ್ಬುಕ್ / ಯುಟ್ಯೂಬ್ ಇಂದ ವೀಕ್ಷಿಸುವವರು ಪ್ರಶ್ನೆ (comment) “ಕಮೆಂಟ್ನಲ್ಲಿ” ಬರೆದು ಕಳುಹಿಸಬಹುದು.
ಕಾರ್ಯಕ್ರಮದ ವಿವರ:
೧೫ನೇ ಶತಮಾನದ ಆರಂಭದಿಂದಲೇ ಭಾರತಕ್ಕೆ ಜಲಮಾರ್ಗವನ್ನು ಶೋಧಿಸುವ ಉತ್ಸಾಹ ಪೋರ್ಚ್ಗೀಸ್ ಮತ್ತು ಸ್ಪೇನ್ ದೇಶಗಳಲ್ಲಿ ಪ್ರಾರಂಭವಾಯಿತು. ಸುಮಾರು ನೂರು ವರ್ಷಗಳ ನಂತರ ಕೊಲಂಬಸ್ ಮತ್ತು ವಾಸ್ಕೋ ಡ ಗಾಮಾ ಕ್ರಮವಾಗಿ ಅಮೆರಿಕಾ ಮತ್ತು ಭಾರತಕ್ಕೆ ಜಲಮಾರ್ಗ ಕಂಡು ಹಿಡಿದರು. ಎರಡೂ ಕಡೆಯಿಂದಲೂ ಸಂಪತ್ತು ಹೇರಳವಾಗಿ ಸಿಗುತ್ತಿತ್ತು. ಆ ಕಾರಣದಿಂದ ನಾವಿಕರ ದೊಡ್ಡ ಪಡೆಯೇ ಈ ದೇಶಗಳಲ್ಲಿ ಸೃಷ್ಟಿಯಾಯಿತು. ವರ್ಷದ ಒಂಬತ್ತು ತಿಂಗಳು ಸಮುದ್ರದ ಮೇಲೇ ಬದುಕು ಮಾಡುವ ವಿಲಕ್ಷಣ ಜೀವನ ಕ್ರಮವನ್ನು ಇವರು ಅಳವಡಿಸಿಕೊಳ್ಳಬೇಕಾಯಿತು. ಈ ನಾವಿಕರ ಬದುಕಿನ ಕಷ್ಟ-ನಷ್ಟಗಳ ಕುರಿತು ಒಂದು ಅವಲೋಕನ ಮಾಡುವುದು ಉಪನ್ಯಾಸದ ಉದ್ದೇಶವಾಗಿದೆ.
Links to join the event:
Facebook Live: https://www.facebook.com/vividlipi/live
Youtube Live: https://www.youtube.com/vividlipi/live