ಡಾ. ಭಾಗ್ಯ ಮೂರ್ತಿ ಮತ್ತು ಸಿಂಗಾಪುರ್ ಸಂಗೀತಗಾರರಿಂದ ಪುರಂದರ ದಾಸರ ಗೀತೆಗಳು
ಡಾ. ಭಾಗ್ಯ ಮೂರ್ತಿ, ಅವರ ಶಿಷ್ಯ ವೃಂದ "ಅಷ್ಟಲಕ್ಷ್ಮೀ" ತಂಡ ಮತ್ತು ಸಿಂಗಾಪುರ್ ಸಂಗೀತಗಾರರಿಂದ ಪುರಂದರ ದಾಸರ ಗೀತೆಗಳು
ವಿಧುಷಿ ಡಾ. ಭಾಗ್ಯ ಮೂರ್ತಿ ಅವರು ಸಂಗೀತದ ಕುಟುಂಬದಿಂದ ಬಂದವರು, ಕರ್ನಾಟಕ ಶಾಸ್ತ್ರೀಯ ಸಂಗೀತ ಹೆಸರಾಂತ ಸಂಗೀತ ಗುರುಗಳಾದ ಶ್ರೀ ಎಂ ಪ್ರಭಾಕರ್ ಅವರಿಂದ ಕಲಿತಿದ್ದಾರೆ. ಆಲ್ ಇಂಡಿಯಾ ರೇಡಿಯೋ ಕಲಾವಿದೆಯಾಗಿ ಕೂಡ ಕಾರ್ಯಕ್ರಮ ಕೊಟ್ಟಿದ್ದಾರೆ. ನಂತರ ಶ್ರೀ ಕಾರೈಕುಡಿ ಕೃಷ್ಣ ಮೂರ್ತಿ ಅವರು ಪ್ರೋತ್ಸಾಹ ನೀಡಿ ಸಿಂಗಾಪುರ್ ಸಮುದಾಯಕ್ಕೆ ಪರಿಚಯಿಸಿದರು.
ಸಿಂಗಾಪುರ್ ನಲ್ಲಿ ಸಂಗೀತ ಪಯಣ ಮುಂದುವರೆಸಿದ್ದಾರೆ. ಶಾಸ್ತ್ರೀಯ, ಅರೆ-ಶಾಸ್ತ್ರೀಯ ಮತ್ತು ಸುಗಮ ಸಂಗೀತ ಬಹುಮುಖ ಪ್ರತಿಭೆಯ ಡಾ. ಭಾಗ್ಯ ಮೂರ್ತಿ ಭಾರತ, ಸಿಂಗಾಪುರ್, ಮಲೇಶಿಯಾ, ಆಸ್ಟ್ರೇಲಿಯಾ, ಹಾಂಗ್ ಕಾಂಗ್, ಚೀನಾ, ಜಪಾನ್ , ಕಾಂಬೋಡಿಯಾ , ಯು ಕೆ ಮತ್ತು ಯು ಎಸ್ ಎ ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. 'ಗೀತಾ ಕಲಾ ನಿಪುಣ', 'ಗಾನ ಕೋಗಿಲೆ', ‘ಸಂಗೀತ ಸರಸ್ವತಿ‘ ಡಾ.ಭಾಗ್ಯ ಮೂರ್ತಿ ಅವರಿಗೆ ಸಂದ ಪ್ರಶಸ್ತಿಗಳಲ್ಲಿ ಕೆಲವು.
ಕಾರ್ಯಕ್ರಮದಲ್ಲಿ ಪುರಂದರ ದಾಸರ ಹಾಡುಗಳನ್ನು ಪ್ರಸ್ತುತ ಪಡಿಸುತ್ತಿರುವವರು ಡಾ.ಭಾಗ್ಯ ಮೂರ್ತಿ , ಅವರ ಶಿಷ್ಯ ವೃಂದ "ಅಷ್ಟಲಕ್ಷ್ಮೀ" ತಂಡ ಮತ್ತು ಸಿಂಗಾಪುರ್ ದೇಶದಲ್ಲಿ ನೆಲೆಸಿರುವ ಪ್ರತಿಭಾನ್ವಿತ ಸಂಗೀತಗಾರರಾದ ರಾಧಾ ನಾರಾಯಣನ್, ರಾಜಿ ಮಹೇಶ್, ಶೋಭಾ ರಘು, ಶ್ರುತಿ ಆನಂದ್, ಶ್ರುತಿ ರಾಜ್, ಶ್ರೀವಿದ್ಯಾ ಶ್ರೀರಾಂ, ವೈಷ್ಣವಿ ಆನಂದ್
ವಿಡಿಯೋ ಒಂದುಗೂಡಿಸಿ, ಎಡಿಟ್ ಮಾಡಿದ್ದು
ಸುಮನಾ ಹೆಬ್ಬಾರ್