ತತ್ವ ಪದ ಸಾಹಿತ್ಯದ ಸ್ವರೂಪ

Virtual Event

ಈ ಕಾರ್ಯಕ್ರಮದ ಉದ್ದೇಶ ಒಂದು ವಿಶಿಷ್ಟ ಸಾಹಿತ್ಯದ ಪರಿಚಯ ಮಾಡುವುದು,
ತತ್ವ ಪದ ಸಾಹಿತ್ಯ - ' ತತ್ವ ' ಎಂದರೆ ಸಿದ್ಧಾಂತ , ಪರಮಾತ್ಮ , ನಿಜಸ್ಥಿತಿ ಎಂದರ್ಥವಾಗುತ್ತದೆ . ತತ್ವಜ್ಞಾನವನ್ನು ಬ್ರಹ್ಮಜ್ಞಾನವೆಂದು ಕರೆಯಲಾಗಿದೆ . ' ಪದ ' ಎಂಬುದನ್ನು ' ಹಾಡು ' ' ಹದಗೊಂಡ ಶಬ್ದ " ಎಂದು ಕರೆಯಲಾಗಿದೆ . ಪರಮಾತ್ಮನಿಗೆ ಸಂಬಂಧಿಸಿದ , ಸಿದ್ಧಾಂತವನ್ನು ಹಾಡಿನ ಮೂಲಕ ಅಭಿವ್ಯಕ್ತಿಸುವ ಕ್ರಿಯೆಗೆ ತತ್ವಪದ ಎನ್ನುತ್ತಾರೆ .
ವಿವಿಡ್ಲಿಪಿ ನೇರ ಪ್ರಸಾರದಲ್ಲಿ ಡಾ. ಬಸವರಾಜ ಸಬರದ ಅವರಿಂದ ತತ್ವ ಪದ ಸಾಹಿತ್ಯದ ಬಗ್ಗೆ ಹೆಚ್ಚಿನ ವಿವರಣೆ ಕೇಳೋಣ ಬನ್ನಿ

ಜಗದ್ವಂದ್ಯ ಭಾರತಂ – ಪ್ರಕ್ಷುಬ್ದ ಭಾರತದೊಲ್ಲೊಂದು ಸುತ್ತು

ಪ್ರತೀ ಭಾರತೀಯನಿಗೂ ಈಗ ನಿಂತ ನೆಲದಲ್ಲಿ ನೆಮ್ಮದಿಯಿಲ್ಲ. ಹೋರಾಟ ದಾರಿಗೆ ಭರವಸೆ ಇಲ್ಲ: ಒಟ್ಟಾರೆ ಇದು ೭೩ ವರ್ಷಗಳ ಹಿಂದೆ ಭಾರತ ಸ್ವತಂತ್ರವಾಗುತ್ತಿದ್ದ ಸಂದರ್ಭವನ್ನು ನೆನಪಿಸುತ್ತಿದೆ. ಹೀಗೆ ತಲ್ಲಣಗೊಂಡ ಭಾರತದಲ್ಲಿ ಒಂದು ಸುತ್ತು ಬಾವುಟದೊಂದಿಗೆ !?

ಜೀವಿಸಿದರೆ ಸಾಕಾ? ವಿಕಸಿಸಬೇಕಾ?

ಉದ್ಯೋಗ, ಮನೆ, ಮಕ್ಕಳು ಒಂದು ಹಂತದ ಯಶಸ್ಸು ಇಷ್ಟೆಲ್ಲ ಸಿಕ್ಕನಂತರವೂ ಮನಸ್ಸಿನಲ್ಲಿ ಏನೋ ಅತೃಪ್ತಿ, ಹೇಳಿಕೊಳ್ಳದ ಖಾಲಿತನ " ಲೈಫು ಇಷ್ಟೇನಾ" ಎಂದು ಅನ್ನಿಸುವುದೂ ಇದೆ. ಅಷ್ಟೇ ಏಕೆ ಎಲ್ಲ ಇದ್ದೂ ಸಂತೋಷದಿಂದ ಇದ್ದೀವಾ, ಯವಾಗಲೂ, ಉತ್ಸಾಹದ ಲವಲವಿಕೆಯ, ಉತ್ಕಟವೆನ್ನಿಸುವ ಹಾಗೆ ನಮ್ಮ ಬದುಕಿದೆಯಾ? ಸಾಹಿತ್ಯ, ಕಲೆ, ಸಂಗೀತವೂ ಸೇರಿದಂತೆ ಎಲ್ಲ ಸೃಜನಶೀಲಕೃತಿಗಳೂ ಬದುಕನ್ನು ವಿಕಸನದೆಡೆಗೆ ನಡೆಸುವುದಕ್ಕೆ ನೆರವಾಗುವ ಸಂಗತಿಗಳು. ಕೇವಲ ಜೀವಿಸಿದರೆ ಸಾಕಾ? ವಿಕಸಿಸಬೇಕಾ? ಎಲ್ಲಕ್ಕಿಂತ ಮುಖ್ಯವಾಗಿ ವಿಕಸನ ನಮ್ಮದೇ ಆಯ್ಕೆ. ಹಾಗಾದರೆ ನಾವೇಕೆ ವಿಕಸಿಸಬೇಕು? ಸಾಹಿತ್ಯ, ಆಧ್ಯಾತ್ಮ, ವಿಜ್ಞಾನದ ಮೂಲಕ ವಿಕಸನದ ಅನಂತ ಸಾಧ್ಯತೆಗಳನ್ನು, ನಮ್ಮೆಲ್ಲರ ಜೀವನಕ್ಕಿರುವ ಬಹುದೊಡ್ಡ ಘನತೆಯನ್ನು ಎಲ್ಲರೂ ಒಟ್ಟಾಗಿ ಅರಿಯುವ ಕಾರ್ಯಕ್ರಮ " ಜೀವಿಸಿದರೆ
ಸಾಕಾ ? ವಿಕಸಿಸಬೇಕಾ? "

ಡಿ ವಿ ಜಿ ಅವರ ಜ್ಞಾಪಕ ಚಿತ್ರಶಾಲೆ – ೧

ಸಮಾಜದ ಒಳಿತನ್ನು ಬಯಸಿ ಅದಕ್ಕಾಗಿ ದುಡಿಯುವ ಸಜ್ಜನರು ಪ್ರತಿ ಕಾಲಮಾನಗಳಲ್ಲಿಯೂ ಬಂದು ಹೋಗಿದ್ದಾರೆ. ತಮ್ಮ ಜೀವಿತದ ಅವಧಿಯಲ್ಲಿ ತಮಗೆ ಪ್ರೇರಣಾದಾಯಕವೆನಿಸಿದ ವ್ಯಕ್ತಿಚಿತ್ರಣಗಳನ್ನು ಸನ್ಮಾನ್ಯ ಡಿವಿಜಿ ಅವರು ತಮ್ಮ ಜ್ಞಾಪಕ ಚಿತ್ರಶಾಲೆ ಎಂಬ ಎಂಟು ಸಂಪುಟಗಳ ಬೃಹತ್ ಗ್ರಂಥದಲ್ಲಿ ದಾಖಲಿಸಿದ್ದಾರೆ. ಇದನ್ನು ಪರಿಚಯಿಸುವ ಒಂದು ಪುಟ್ಟ ಪ್ರಯತ್ನವೇ ಈ ಉಪನ್ಯಾಸದ ಉದ್ದೇಶ.

Download VIVIDLIPI mobile app.
Download App