Need help? Call +91 9535015489

📖 Print books shipping available only in India. ✈ Flat rate shipping

Global Purandara Festival – 2021

ನೇರ ಪ್ರಸಾರ VIVIDLIPI ಯೂಟ್ಯೂಬ್ ಚಾನೆಲ್ ಮತ್ತು ಫೇಸ್ಬುಕ್ ಪುಟದಲ್ಲಿ

Facebook Live: https://www.facebook.com/vividlipi/live
Youtube Live: https://www.youtube.com/vividlipi/live

ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರಾದ ಪುರಂದರದಾಸರ ಸಾಧನೆಯನ್ನು ಕಂಡ ಸರ್ವರೂ ‘ದಾಸರೆಂದರೆ ಪುರಂದರದಾಸರಯ್ಯಾ..!’ ಎಂದು ಕೊಂಡಾಡಿದ್ದಾರೆ. ಇವರ ಎಲ್ಲ ಕೀರ್ತನೆಗಳೂ ಕನ್ನಡ ಭಾಷೆಯಲ್ಲಿದ್ದು, ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ. ಹರಿಭಕ್ತಿ ಹಾಗೂ ಸಂಗೀತದಲ್ಲಿನ ಪಾಂಡಿತ್ಯ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಸ್ಥಾನವನ್ನು ಪಡೆದು ದಾಸ ಸಾಹಿತ್ಯವನ್ನು ಶ್ರೀಮಂತವಾಗಿಸಿವೆ.
ದೇಶ ವಿದೇಶದ ದಾಸ ಸಾಹಿತ್ಯಾಸಕ್ತರನ್ನು ಒಂದು ವೇದಿಕೆಯಲ್ಲಿ ತಂದು ಪುರಂದರ ದಾಸರ ಹಾಡುಗಳನ್ನು ನಮ್ಮ ಕಲಾವಿದರ ಸುಮಧುರವಾದ ಕಂಠದಲ್ಲಿ ಕೇಳುವ, ನೃತ್ಯ ನೋಡುವ, ನಾಟಕ ನೋಡುವ ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರ ವಿಚಾರ ಕೇಳುವ ಒಂದು ಚಿಕ್ಕ ಪ್ರಯತ್ನ ಜಾಗತಿಕ ಪುರಂದರ ಉತ್ಸವದ ಉದ್ದೇಶ.

Purandara Dasa was a Composer-Performer, Musicologist, and the founder of Musical Pedagogy. Musicologists call him the Sangeeta Pitamaha of Carnatic music. Purandara Dasa tried to reform existing social practices and preached through devotional songs in the local Kannada language. Most of his Keertanas deal with social reform and pinpoint the defects in society. The philosophy of Purandara Dasa is harmonious with the concept of Bhakti in Hinduism.
The intent of the “Global Purandara Festival” is to bring worldwide artists to perform on the VIVIDLIPI platform; present Purandara Dasara songs in their melodious voice, with their vivid style of dance, theatrical show, the release of Dasara ebook & audiobooks and lecture by International Celebrity Dr. Aralumallige Parthasarathy.

Play Video

WHY NEED EVENT

About the Concert

Classes & Workshops

Save time by accepting online registrations through a class and workshop registration website

Classes & Workshops

Save time by accepting online registrations through a class and workshop registration website

Classes & Workshops

Save time by accepting online registrations through a class and workshop registration website

Classes & Workshops

Save time by accepting online registrations through a class and workshop registration website

Classes & Workshops

Save time by accepting online registrations through a class and workshop registration website

Count Every Second Until The Event Start.

Days
Hours
Minutes
Seconds

Latest Past Events

Event schedule

FEB 22 2021

Featured February 22, 2021 @ 6:00pm – 7:30pm IST

ಉದ್ಘಾಟನೆ/Inauguration

ಜಾಗತಿಕ ಪುರಂದರ ಉತ್ಸವ- ೨೦೨೧/Global Purandara Festival – 2021 1) Inaugural address – By International celebrity Dr. Aralumallige Parthasarathy 2) Global Launch of Audiobook – Lectures of Dr. Aralumallige Parthasarathy 3) Global Launch of Ebook -“The Sage of Uttanur” Novel on Sri. Gopaldasaru (Renowned Haridasa, Saint, Philosopher, Poet and Social Reformer) Authored by Dr. Jayateertha Mudakavi 4) Dance – National Youth Talent Shri. Nidhaga Karunadu

FEB 23 2021

Featured February 23, 2021 @ 9:30am – 11:00am IST

ಯು ಎಸ್ ಎ ಸಂಗೀತ ಗೋಷ್ಠಿ – ಶ್ರೀ. ವ್ಯಾಸ ಭಜನಾ ಮಂಡಳಿ (SVBM) – ಸತೀಶ್ ಜಮಖಂಡಿ ಮತ್ತು ಸರಸ್ವತಿ ವಟ್ಟಂ

ಪುರಂದರ ದಾಸರ ಸಂಗೀತ ಗೋಷ್ಠಿ – ಶ್ರೀ. ವ್ಯಾಸ ಭಜನಾ ಮಂಡಳಿ (SVBM), ಯು ಎಸ್ ಎ Purandara Dasara Musical Concert by Shri. Vyasa Bhajana Mandali (SVBM), U S A

FEB 24 2021

Featured February 24, 2021 @ 4:30pm – 6:00pm IST

ಪುರಂದರ ದಾಸರ ಸಂಗೀತ ಸುಧೆ – ಶ್ರೀಮತಿ. ಡಾ. ಜಯಶ್ರೀ ಅರವಿಂದ್ ಮತ್ತು ಶ್ರೀಮತಿ. ಶ್ರೀರಕ್ಷಾ ಪ್ರಿಯರಾಮ್

ಶ್ರೀಮತಿ. ಡಾ. ಜಯಶ್ರೀ ಅರವಿಂದ್ ಅವರ ಸಂಗೀತ ನಿರ್ದೇಶನದಲ್ಲಿ, ಶ್ರೀಮತಿ. ಶ್ರೀರಕ್ಷಾ ಪ್ರಿಯರಾಮ್ ಅವರ ಮಧುರ ಕಂಠದಲ್ಲಿ ಪುರಂದರ ದಾಸರ ಸಂಗೀತ ಸುಧೆ. The musical program of Purandara Dasara songs – Direction by Smt. Dr. Jayashree Aravind and songs by Smt. Shriraksha Priyaram

FEB 25 2021

Featured February 25, 2021 @ 4:30pm – 6:00pm IST

ಪುರಂದರ ಉತ್ಸವದಲ್ಲಿ ಪಂಡಿತ್ ಶ್ರೀ. ಅನಂತ ಭಾಗವತ್

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಹಿಂದೂಸ್ತಾನಿ ಗಾಯಕರು ಆದ ಪಂಡಿತ್ ಶ್ರೀ. ಅನಂತ ಭಾಗವತ್ ರು ಕಿರಾಣಾ ಘರಾಣಾ ಪರಂಪರೆಯವರು. ಇವರು ಎಂ ಎಸ್ ಐ ಎಲ್ ಮತ್ತು ಇತರ ಅನೇಕ ಧ್ವನಿ ಸುರಳಿಗಳಿಗೆ ಸಂಗೀತ- ಸಂಯೋಜನೆ – ಗಾಯನ ಮಾಡಿದ್ದಾರೆ. ಭಾರತೀಯ ಭಕ್ತಿಪೀಠ ಪ್ರಶಸ್ತಿ ಪುರಸ್ಕೃತ ಡಾ. ಶ್ರೀ. ಅರಳುಮಲ್ಲಿಗೆ ಪಾರ್ಥಸಾರಥಿ ಅವರ ದಾಸ ಪದಗಳಿಗೆ ೬೨ ರಾಗಗಳನ್ನು ಅಳವಡಿಸಿ, ಸಂಯೋಜಿಸಿ ವಿದ್ಯಾರ್ಥಿಗಳಿಂದ ಹಾಡಿಸಿದ ಹೆಗ್ಗಳಿಕೆ ಇವರದು. ಇವರು ದೇಶದ ಪ್ರಮುಖ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮ ಕೊಟ್ಟಿದ್ದಾರೆ. ಇವರಿಗೆ “ಸಂಗೀತ ಕಲಾಶ್ವ”, “ಕನಕ ಪ್ರಭೆ”, “ಸಂಗೀತ ಸಾಧಕ” ಇಂತಹ ಹಲವು ಗರಿಮೆಗಳು ವಿವಿಧ ಸಂಸ್ಥೆಗಳಿಂದ ದೊರೆತಿವೆ. ಇವರು ಪುರಂದರ ಉತ್ಸವದಲ್ಲಿ ಪುರಂದರ ವಿಠ್ಠಲರ ಗೀತೆಗಳನ್ನು ಪ್ರಸ್ತುತಗೊಳಿಸಲಿದ್ದಾರೆ.

FEB 26 2021

Featured February 26, 2021 @ 5:00pm – 6:30pm IST

ಯು ಕೆ ತಂಡದಿಂದ ಪುರಂದರ ಸಂಗೀತ ಕಾರ್ಯಕ್ರಮ

ಯು ಕೆ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಸಿರಿ ತಂಡದ ಕನ್ನಡಿಗರಿಂದ ಪುರಂದರ ದಾಸರ ಹಾಡುಗಳ ಸಂಗೀತ ಸಂಭ್ರಮ, ಹಾಡುಗಳನ್ನು ಪ್ರಸ್ತುತ ಪಡಿಸುತ್ತಿರುವವರು ಅಮಿತ ರವಿಕಿರಣ್, ಸುಮನಾ ಧ್ರುವ, ಪೂಜಾ ತಾಯೂರ್, ಸ್ನೇಹ ತಾಯೂರ್, ಸಂಧ್ಯಾ ಪ್ರಮೋದ, ಅಂಜನಾ ಎಸ ಟಕ್ಕಳಕಿ, ಕಾರ್ಯಕ್ರಮ ಪ್ರಸ್ತುತಿ ಮತ್ತು ವಿವರಣೆ – ಗೌರಿ ಪ್ರಸನ್ನ

FEB 27 2021

Featured February 27, 2021 @ 7:00pm – 9:00pm IST

ಮಕ್ಕಳು ಮತ್ತು ಯುವ ಪ್ರತಿಭೆಗಳಿಂದ ಹಾಡು, ನಾಟಕ

ದೇಶ ವಿದೇಶದ ಮಕ್ಕಳು ಮತ್ತು ಯುವ ಪ್ರತಿಭೆಗಳಿಂದ ಪುರಂದರ ದಾಸರ ಹಾಡುಗಳು, ನಾಟಕ ನಾಟಕ – ದಾಸರೆಂದರೆ ಪುರಂದರ ದಾಸರಯ್ಯ, ಗಿಳಿವಿಂಡು ತಂಡದ ಪಾತ್ರ ಪರಿಚಯ: ಕೃಷ್ಣ – ನಿನಾದ್ ಲಕ್ಕುಂಡಿ, ಪುರಂದರದಾಸರು – ಅಕ್ಷತಾ ಲಕ್ಕುಂಡಿ, ಪುರಂದರದಾಸರು – ವಿದುಲಾ ನಟರಾಜನ್, ಸರಸ್ವತಿಬಾಯಿ – ಚಿನ್ಮಯಿ ಲಕ್ಕುಂಡಿ, ಬ್ರಾಹ್ಮಣ – ಸುರಭಿ ಪುರೋಹಿತ, ಆಳು – ಸಂಪದಾ ಪುರೋಹಿತ, ಗಾಯನ- ಸಂಧ್ಯಾಪ್ರಮೋದ್ ಹಾಗೂ ಸಂಪದಾ, ನೃತ್ಯಸಂಯೋಜನೆ ಹಾಗೂ ವಸ್ತ್ರವಿನ್ಯಾಸ – ಸಂಧ್ಯಾ ಪುರೋಹಿತ, ನಿದೇ೯ಶನ ಹಾಗೂ ನಿರೂಪಣೆ – ಗೌರಿ ಪ್ರಸನ್ನ, ಪುರಂದರ ದಾಸರ ಹಾಡು: ಅದಿತಿ ರಾಘವೇಂದ್ರನ್, ಮೇಘನಾ ಬೊಗರಾಜು, ಅದಿತಿ ಜಂಭ, ಸಂಪದ ಪುರೋಹಿತ್, ಅಭಿಜ್ಞಾ ಗೋಪಾಲಕೃಷ್ಣ

FEB 28 2021

Featured February 28, 2021 @ 2:00pm – 3:30pm IST

ವಿಧುಷಿ ಪುಷ್ಪಾ ಜಗದೀಶ್ ಮತ್ತು ಆಸ್ಟ್ರೇಲಿಯಾದ ಗಾಯಕರಿಂದ ಪುರಂದರ ಸಂಗೀತ.

ವಿಧುಷಿ ಪುಷ್ಪಾ ಜಗದೀಶ್ ಮತ್ತು ಆಸ್ಟ್ರೇಲಿಯಾದ ಪ್ರತಿಭಾವಂತ ಗಾಯಕರಿಂದ ಪುರಂದರ ಸಂಗೀತ. ವಿಧುಷಿ ಪುಷ್ಪಾ ಜಗದೀಶ್ ಅವರು ಒಳ್ಳೆಯ ಸುಗಮಸಂಗೀತ ಕಲಾವಿದೆ. ಇವರ ಭಾವಪೂರ್ಣ ಗಾಯನವೇ ಇವರ ಪರಿಚಯ. ಆಸ್ಥಾನ ವಿದ್ವಾನ್ ಶ್ರೀ ಎಲ್ ರಾಜಾ ರಾವ್ ಅವರಿಂದ ಶಾಸ್ತ್ರೀಯ ಸಂಗೀತ, ಮೈಸೂರ್ ಅನಂತಸ್ವಾಮಿ ಅವರ ಬಳಿ ಭಾವಗೀತೆ ಶಿಕ್ಷಣ ಪಡೆದಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾದ ಇವರು ಅನೇಕ ಕಾರ್ಯಕ್ರಮ ಕೊಟ್ಟಿದ್ದಾರೆ, ಕನ್ನಡ ಅಲ್ಲದೆ ಹಿಂದಿ ಭಾಷೆಯ ಗೀತೆಗಳು ಭಜನ್ ಉತ್ಯಾದಿಗಳನ್ನು ಪ್ರಸ್ತುತ ಪಡಿಸಿ ಜನಪ್ರಿಯತೆ ಹೊಂದಿದ್ದಾರೆ. ಶ್ರೀ ಚಿನ್ಮಯ ಮಿಷನ್ನಿನ ಸ್ವಾಮಿ ಸ್ವರೂಪಾನಂದ ಅವರ ರಾಮಾಯಣ ಪ್ರವಚನಗಳಿಗೆ ಹಾಡನ್ನು ಹಾಡಿದ್ದು , ಖ್ಯಾತ ಗಾಯಕ ಮನ್ನಾ ಡೇ ಅವರೊಂದಿಗೆ ಹಾಡಿದ್ದು ಮತ್ತು ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸಿಡ್ನಿ (rally) ಕೂಟದಲ್ಲಿ ಹಾಡಿದ ಘಳಿಗೆ ಅವರಿಗೆ ಹೆಮ್ಮೆಯ ವಿಷಯವಾಗಿವೆ. ಜಾಗತಿಕ ಪುರಂದರ ಉತ್ಸವದಲ್ಲಿ ವಿಧುಷಿ ಪುಷ್ಪಾ ಜಗದೀಶ್, ಸಿಡ್ನಿಯಲ್ಲಿ ನೆಲೆಸಿರುವ ಪ್ರತಿಭಾವಂತ ಗಾಯಕರು, ಅವರ ಶಿಷ್ಯವೃಂದ ಮತ್ತು ಸ್ನೇಹಿತರು. ಕಳೆದ ಇಪ್ಪತ್ತು ವರ್ಷದಿಂದ ಸಿಡ್ನಿಯಲ್ಲಿ ನಡೆಯುತ್ತಿರುವ ಪುರಂದರ ಆರಾಧನೆಯಲ್ಲಿ ಈ ಕಲಾವಿದರು ಸತತವಾಗಿ ಪಾಲ್ಗೊಳ್ಳುತ್ತಿದ್ದಾರೆ.

MAR 01 2021

Featured March 01, 2021 @ 4:00pm – 6:00pm IST

ಡಾ. ಭಾಗ್ಯ ಮೂರ್ತಿ ಮತ್ತು ಸಿಂಗಾಪುರ್ ಸಂಗೀತಗಾರರಿಂದ ಪುರಂದರ ದಾಸರ ಗೀತೆಗಳು

ಡಾ. ಭಾಗ್ಯ ಮೂರ್ತಿ, ಅವರ ಶಿಷ್ಯ ವೃಂದ “ಅಷ್ಟಲಕ್ಷ್ಮೀ” ತಂಡ ಮತ್ತು ಸಿಂಗಾಪುರ್ ಸಂಗೀತಗಾರರಿಂದ ಪುರಂದರ ದಾಸರ ಗೀತೆಗಳು ವಿಧುಷಿ ಡಾ. ಭಾಗ್ಯ ಮೂರ್ತಿ ಅವರು ಸಂಗೀತದ ಕುಟುಂಬದಿಂದ ಬಂದವರು, ಕರ್ನಾಟಕ ಶಾಸ್ತ್ರೀಯ ಸಂಗೀತ ಹೆಸರಾಂತ ಸಂಗೀತ ಗುರುಗಳಾದ ಶ್ರೀ ಎಂ ಪ್ರಭಾಕರ್ ಅವರಿಂದ ಕಲಿತಿದ್ದಾರೆ. ಆಲ್ ಇಂಡಿಯಾ ರೇಡಿಯೋ ಕಲಾವಿದೆಯಾಗಿ ಕೂಡ ಕಾರ್ಯಕ್ರಮ ಕೊಟ್ಟಿದ್ದಾರೆ. ನಂತರ ಶ್ರೀ ಕಾರೈಕುಡಿ ಕೃಷ್ಣ ಮೂರ್ತಿ ಅವರು ಪ್ರೋತ್ಸಾಹ ನೀಡಿ ಸಿಂಗಾಪುರ್ ಸಮುದಾಯಕ್ಕೆ ಪರಿಚಯಿಸಿದರು. ಸಿಂಗಾಪುರ್ ನಲ್ಲಿ ಸಂಗೀತ ಪಯಣ ಮುಂದುವರೆಸಿದ್ದಾರೆ. ಶಾಸ್ತ್ರೀಯ, ಅರೆ-ಶಾಸ್ತ್ರೀಯ ಮತ್ತು ಸುಗಮ ಸಂಗೀತ ಬಹುಮುಖ ಪ್ರತಿಭೆಯ ಡಾ. ಭಾಗ್ಯ ಮೂರ್ತಿ ಭಾರತ, ಸಿಂಗಾಪುರ್, ಮಲೇಶಿಯಾ, ಆಸ್ಟ್ರೇಲಿಯಾ, ಹಾಂಗ್ ಕಾಂಗ್, ಚೀನಾ, ಜಪಾನ್ , ಕಾಂಬೋಡಿಯಾ , ಯು ಕೆ ಮತ್ತು ಯು ಎಸ್ ಎ ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ‘ಗೀತಾ ಕಲಾ ನಿಪುಣ’, ‘ಗಾನ ಕೋಗಿಲೆ’, ‘ಸಂಗೀತ ಸರಸ್ವತಿ‘ ಡಾ.ಭಾಗ್ಯ ಮೂರ್ತಿ ಅವರಿಗೆ ಸಂದ ಪ್ರಶಸ್ತಿಗಳಲ್ಲಿ ಕೆಲವು. ಕಾರ್ಯಕ್ರಮದಲ್ಲಿ ಪುರಂದರ ದಾಸರ ಹಾಡುಗಳನ್ನು ಪ್ರಸ್ತುತ ಪಡಿಸುತ್ತಿರುವವರು ಡಾ.ಭಾಗ್ಯ ಮೂರ್ತಿ , ಅವರ ಶಿಷ್ಯ ವೃಂದ “ಅಷ್ಟಲಕ್ಷ್ಮೀ” ತಂಡ ಮತ್ತು ಸಿಂಗಾಪುರ್ ದೇಶದಲ್ಲಿ ನೆಲೆಸಿರುವ ಪ್ರತಿಭಾನ್ವಿತ ಸಂಗೀತಗಾರರಾದ ರಾಧಾ ನಾರಾಯಣನ್, ರಾಜಿ ಮಹೇಶ್, ಶೋಭಾ ರಘು, ಶ್ರುತಿ ಆನಂದ್, ಶ್ರುತಿ ರಾಜ್, ಶ್ರೀವಿದ್ಯಾ ಶ್ರೀರಾಂ, ವೈಷ್ಣವಿ ಆನಂದ್ ವಿಡಿಯೋ ಒಂದುಗೂಡಿಸಿ, ಎಡಿಟ್ ಮಾಡಿದ್ದು ಸುಮನಾ ಹೆಬ್ಬಾರ್

MAR 02 2021

Featured March 02, 2021 @ 4:30pm – 6:30pm IST

ಡಾ. ಸುವರ್ಣ ಮೋಹನ್ ಮತ್ತು ತಂಡ- ಪುರಂದರ ದಾಸರ ಹಾಡುಗಳ ಸುಮಧುರ ಕಾರ್ಯಕ್ರಮ

ಡಾ. ಸುವರ್ಣ ಮೋಹನ್ ಮತ್ತು ತಂಡದವರು ಪುರಂದರ ದಾಸರ ಹಾಡುಗಳ ಸುಮಧುರ ಕಾರ್ಯಕ್ರಮ ಡಾ. ಸುವರ್ಣ ಮೋಹನ್ ಕಲಾವಿದರ ಕುಟುಂಬದಿಂದ ಬಂದವರು. ಅವರ ತಂದೆ ಶ್ರೀ ನಂಜುಂಡಯ್ಯ ರಂಗಭೂಮಿ ಮತ್ತು ಹಾರ್ಮೋನಿಯಂ ಕಲಾವಿದರು, ತಾಯಿ ಶ್ರೀಮತಿ. ವಿನೋದಮ್ಮ ಹಿರಿಯ ಶಾಸ್ತ್ರೀಯ ಸಂಗೀತ ಗಾಯಕರು. ಸುಗಮ ಸಂಗೀತ ಕಲಿತಿದ್ದು ಪ್ರಖ್ಯಾತ ಗಾಯಕರಾದ ಶ್ರೀ. ಎಚ್ ಕೆ ನಾರಾಯಣ, ಶ್ರೀ. ಗೀತಪ್ರಿಯ ಮತ್ತು ಶ್ರೀ, ರಾಜಾರಾಮ್ ಅವರಿಂದ. ಕೆಂಪೇಗೌಡ ಪ್ರಶಸ್ತಿ, ಕನ್ನಡ ಸೇವಾರತ್ನ ಪ್ರಶಸ್ತಿ ಮತ್ತು ಹಲವಾರು ಪ್ರಶಸ್ತಿ ಇವರಿಗೆ ದೊರೆತಿವೆ. ಕಳೆದ ೨೨ ವರ್ಷಗಳಿಂದ ದಾಸ ಸಾಹಿತ್ಯದಲ್ಲಿ ಇವರ ಮತ್ತು ಇವರ ಕುಟುಂಬದವರ ಸೇವೆ ಅಪಾರ. ಶ್ರೀ ಪುರಂದರ ಇಂಟರ್ನ್ಯಾಷನಲ್ ಟ್ರಸ್ಟ್  ಇಂದ ಡಾ. ಸುವರ್ಣ ಮೋಹನ್ ಮತ್ತು ತಂಡದವರು ಪುರಂದರ ದಾಸರ ಹಾಡುಗಳ ಸುಮಧುರ ಕಾರ್ಯಕ್ರಮ ಕೊಡುತ್ತಿದ್ದಾರೆ.

MAR 03 2021

Featured March 03, 2021 @ 4:30pm – 6:30pm IST

ಡಾ. ಅರ್ಚನಾ ಕುಲಕರ್ಣಿ ಅವರಿಂದ ಪುರಂದರ ದಾಸರ ಸಂಗೀತ ಕಾರ್ಯಕ್ರಮ

ಕಂಚಿನ ಕಂಠದ ಡಾ. ಅರ್ಚನಾ ಕುಲಕರ್ಣಿ ಅವರಿಂದ ಪುರಂದರ ದಾಸರ ಸಂಗೀತ ಕಾರ್ಯಕ್ರಮ ಹಿಂದೂಸ್ತಾನಿ ಮತ್ತು ಸುಗಮ ಸಂಗೀತ ಕಲಾವಿದೆ ಡಾ ಅರ್ಚನಾ ಕುಲಕರ್ಣಿ ಅವರು ಸಂಗೀತ ಕಲಿತಿದ್ದು ಶ್ರೀ. ಸ್ವಾಮಿ ಚಂದ್ರಶೇಖರ್ ಪುರಾಣಿಕ್ಮಠ್, ಶ್ರೀ. ಪಿ ಬಿ ಶ್ರೀನಿವಾಸ್ ಮತ್ತು ಇತರ ಸಂಗೀತ ಕಲಾವಿದರಿಂದ. ಇವರು ಆಲ್ ಇಂಡಿಯಾ ರೇಡಿಯೋ “A” ದರ್ಜೆಯ ಗಾಯಕಿ. ಡಾ. ಎಸ್ ಪಿ ಬಾಲಸುಬ್ರಮಣ್ಯಂ ಇವರನ್ನು “ಎದೆ ತುಂಬಿ ಹಾಡಿದೆನು” ಕಾರ್ಯಕ್ರಮದ ಮೊದಲ ಕೆಲವು ಕಂತಿನಲ್ಲಿ ಹಾಡಲು ಆಯ್ಕೆ ಮಾಡಿದ್ದರು. ಇವರ ಕಂಚಿನ ಕಂಠವನ್ನು ಖ್ಯಾತ ಗಾಯಕಿ ಎಸ್ ಜಾನಕೀ ಅವರ ಧ್ವನಿಗೆ ಹೋಲಿಸಿದ್ದಾರೆ. ಆಲಮ ಪ್ರಭು ಸುಪ್ರಭಾತ, TTD ನಾದ ನಿರಂಜನಮ್, ಮೈಸೂರು ದಸರಾ ಮುಂತಾದ ಕಾರ್ಯಕ್ರಮದಲ್ಲಿ ಸಂಗೀತ ಪ್ರದರ್ಶನ ನೀಡಿದ್ದಾರೆ. “ಸಂಗೀತ ವಿಶಾರದ”, “ವಸಿಷ್ಠಧಾಮ ಸಂಗೀತ ರತ್ನ” ಮುಂತಾದ ಪ್ರಶಸ್ತಿಗಳು ಇವರಿಗೆ ದೊರಕಿವೆ.

MAR 04 2021

Featured March 04, 2021 @ 4:30pm – 6:00pm IST

“ಸಖಿ ವೃಂದ’ ತಂಡದಿಂದ “ಪುರಂದರ ಗಾನಾಮೃತ” ಸುಮಧುರ ಸಂಗೀತ

“ಸಖಿ ವೃಂದ’ ತಂಡದಿಂದ “ಪುರಂದರ ಗಾನಾಮೃತ” ಸುಮಧುರ ಸಂಗೀತ Date: 04 Mar 2021 Time: 4.30 PM IST/ 11.00 AM GMT “ಸಖಿ ವೃಂದ” ತಂಡದ ಸಂಗೀತ ಸಖಿಯರು : ವಿದುಷಿ ಇಂದಿರಾ ಶರ್ಮ, ವಿದುಷಿ ವಿಶಾಲಾಕ್ಷಿ ವೈದ್ಯ, ಮಮತಾ ಮಂಜುನಾಥ್, ಮಾಲತಿ ಸತೀಶ್, ಲತಾ ಎಸ್ ರಾವ್, ಪೂರ್ಣಿಮಾ ಪ್ರಕಾಶ್.

MAR 05 2021

Featured March 05, 2021 @ 4:30pm – 6:30pm IST

ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರ ಉಪನ್ಯಾಸ ಮತ್ತು ಶ್ರೀ. ಪಿ ಎಸ್ ಕೃಷ್ಣಮೂರ್ತಿ ಅವರಿಂದ ಒಂದು ವಿಭಿನ್ನ ಸಂಗೀತ ನಾಟಕ

ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರ ಉಪನ್ಯಾಸ ಮತ್ತು ಶ್ರೀ. ಪಿ ಎಸ್ ಕೃಷ್ಣಮೂರ್ತಿ ಅವರಿಂದ ಒಂದು ವಿಭಿನ್ನ ಸಂಗೀತ ನಾಟಕ ನೇರ ಪ್ರಸಾರ ಯುಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ Live on YouTube and Facebook  Facebook Live: https://www.facebook.com/vividlipi/live Youtube Live: https://www.youtube.com/vividlipi/live Download VIVIDLIPI APP: www.vividlipi.com/app

MEET OUR PERFORMERS

Event Artists

0
Countries
0 +
Artists
0
Days

Photo Gallery

Download Our App Today!

Connect with us through our app platforms to read ebooks, listen to audiobooks and buy print books. Download now and try our free ebooks available on Android and iOS platforms.

Global Purandara Festival 2021 Sponsorship

Please fill out the details and one of our team members will get back to you asap.

Contact Info