ನಾಟಕೋತ್ಸವ:  ವಿಶ್ವ ಕನ್ನಡ ನಾಟಕ ಸ್ಪರ್ಧೆ ೨೦೨೦

ನಾಟಕೋತ್ಸವ:  ವಿಶ್ವ ಕನ್ನಡ ನಾಟಕ ಸ್ಪರ್ಧೆ ೨೦೨೦

 

ನಾಟಕದ ವಿಡಿಯೋ ಅಪ್ಲೋಡ್ ಮಾಡುವ ಲಿಂಕ್:   https://www.dropbox.com/request/0cti74Q0FeBy7ARPk8fy

ಮಹಾನಗರದ ಹಿರಿಯ ರಂಗ ಸಂಸ್ಥೆ – ಅಭಿನಯ ಭಾರತಿಯು ಕಳೆದ ಮೂರು ದಶಕಗಳಿಂದ ಧಾರವಾಡದಲ್ಲಿ ಹವ್ಯಾಸಿ ರಂಗ ಭೂಮಿಯ ಅನೇಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ನಾಟಕೋತ್ಸವ, ವಿಚಾರ ಸಂಕಿರಣ, ರಂಗ ತರಬೇತಿ, ರಾಷ್ಟ್ರೀಯ ನಾಟಕೋತ್ಸವ, ನೀನಾಸಂ ತಿರುಗಾಟದ ನಾಟಕ ಪ್ರದರ್ಶನಗಳು, ವಿಶ್ವರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ರಂಗ ಪ್ರಶಸ್ತಿ ಸಮಾರಂಭಗಳನ್ನು ನಿಯಮಿತವಾಗಿ ನಡೆಸಿಕೊಂಡು ಬಂದಿದೆ.

ಕೋವಿಡ್-೧೯ ದಂತಹ ಜಾಗತಿಕ ಸಾಂಕ್ರಾಮಿಕ ರೋಗದಿಂದಾಗಿ ಜಗತ್ತಿನ ಎಲ್ಲ ದೇಶಗಳು ಆರ್ಥಿಕ, ಸಾಮಾಜಿಕ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹಿನ್ನಡೆ ಸಾಧಿಸಿವೆ. ಲಾಕ್ದೌನ್ ಪರಿಣಾಮವಾಗಿ ನಮ್ಮ ಕರ್ನಾಟಕ ರಾಜ್ಯದಲ್ಲಿಯೇ ಸುಮಾರು ೫೦೦೦ ಕ್ಕಿಂತ ಹೆಚ್ಚು ಕಲಾವಿದರು ನಿರುದ್ಯೋಗಿ ಗಳಾಗಿದ್ದಾರೆ, ಇದೇ ರೀತಿ ಜಾಗತಿಕ ಪರಿಸ್ಥಿತಿ ಹೇಗಿರಬಹುದು ಅಂಥ ಊಹಿಸಬಹುದು.

ಇಂತಹ ಪರಿಸ್ಥಿತಿಯಲ್ಲಿ ರಂಗಭೂಮಿಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಅಭಿನಯ ಭಾರತಿ ತನ್ನ 40ನೆಯ ವರ್ಷದ ಹುಟ್ಟು ಹಬ್ಬದ ನೆನಪಿಗಾಗಿ ಡಿಜಿಟಲ್ ನಾಟಕ ಸ್ಪರ್ಧೆ ಅನ್ನು ವಿಶ್ವದ ಎಲ್ಲ ಕಡೆ ಇರುವ ಕನ್ನಡ ರಂಗಾಸಕ್ತರಿಗೆ ಅಭಿನಯ ಭಾರತಿ ಡಿಜಿಟಲ್ ವಿಶ್ವ ಕನ್ನಡ ನಾಟಕ ಸ್ಪರ್ಧೆ ೨೦೨೦ ಅನ್ನು ಆಯೋಜಿಸಲಾಗಿದೆ.

ಸಹಯೋಗ:
ಧಾರವಾಡ ಬಾಂಡ್ಸ್
ವಿವಿಡ್ಲಿಪಿ – ಇ-ಪುಸ್ತಕ ಮತ್ತು ತಾಂತ್ರಿಕ ಸಹಾಯ
ರೇಡಿಯೋ ಗಿರ್ಮಿಟ್ – ರೇಡಿಯೋ ಪಾರ್ಟ್ನರ್

ಕಾರ್ಯಕ್ರಮದ ವಿವರ ಮತ್ತು ನಿಬಂಧನೆ ಕೆಳಗಿನಂತಿವೆ :

೧. ನಾಟಕದ ವಿಷಯ ಇಪ್ಪತ್ತೈದು ನಿಮಿಷಕ್ಕಿಂತ ಹೆಚ್ಚಿರಬಾರದು(ಟೈಟಲ್ ಸಮಯ ಬಿಟ್ಟು)
೨. ನಾಟಕದಲ್ಲಿ ಕನಿಷ್ಠ ೨ ಪಾತ್ರಗಳು ಇರಲೇ ಬೇಕು
೩. ನಾಟಕ ಅಡೆ ತಡೆ ಇಲ್ಲದೆ ನೇರವಾಗಿ ಚಿತ್ರೀಕರಿಸಬೇಕು. (ಪ್ರತ್ಯಕ್ಷವಾಗಿ ಸ್ಟೇಜ್ ಮೇಲೆ ನಾಟಕ ನಡೆದಹಾಗೆ ಇರಬೇಕು)
೪. ನಾಟಕದ ಕಥಾವಸ್ತು ಯಾವದೂ ಆಗಿರಬಹುದಾಗಿದೆ
೫. ನಾವೀನ್ಯತೆಗೆ ಪ್ರಾಧಾನ್ಯ ನೀಡಲಾಗುವದು.
೬. ನಾಟಕ ಲೇಖಕರ ಅನುಮತಿ , ನಿರ್ದೇಶಕರ ಅನುಮತಿ ಪತ್ರ ಕಡ್ಡಾಯ ಅಲ್ಲದೆ ಈ ವೀಡಿಯೋ ಕ್ಲಿಪಿಂಗನ್ನು ಬೇರೆ ಯಾವದೇ ಸ್ಪರ್ಧೆಗೆ ಕಳುಹಿಸಿಲ್ಲ ಅನ್ನುವ ಬಗ್ಗೆ ಮುಚ್ಚಳಿಕೆ ಪತ್ರ ಅವಶ್ಯಕ
೭. ಇಲ್ಲಿಯವರಿಗೆ ಯು ಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿಲ್ಲ ಅನ್ನೋ ಮುಚ್ಚಳಿಕೆ ಪತ್ರ ಅವಶ್ಯಕ. (ಸ್ಪರ್ಧೆಯ ಫಲಿತಾಂಶದ ನಂತರ ಮಾಡಬಹುದಾಗಿದೆ)
೮. ಅಭಿನಯ ಭಾರತಿ ತನ್ನ ಫೇಸ್ಬುಕ್ ಮತ್ತು ಯು ಟ್ಯೂಬ್ ನಲ್ಲಿ ಮುಂದೆ ಇದನ್ನು ಪ್ರದರ್ಶನ ಮಾಡಬಹುದಾಗಿದೆ.
೯. ಫಲಿತಾಂಶದ ನಂತರ ಎಲ್ಲ ವಿವರ ಅಭಿನಯ ಭಾರತಿ ಫೇಸ್ಬುಕ್ ನಲ್ಲಿ ಮತ್ತು ವಾಟ್ಸಾಪ್ ಗ್ರೂಪಗಳಲ್ಲಿ ಹಾಕಲಾಗುವದು.

೧. ಪ್ರಥಮ ಬಹುಮಾನ : ರೂ. ೯೦೦೦ + ರೂ ೧೦೦೦/- ಉಚಿತ ಪುಸ್ತಕ + ಸರ್ಟಿಫಿಕೇಟ್
೨. ದ್ವಿತೀಯ ಬಹುಮಾನ : ರೂ ೬೦೦೦ + ರೂ ೮೦೦/- ಉಚಿತ ಪುಸ್ತಕ + ಸರ್ಟಿಫಿಕೇಟ್
೩. ತೃತೀಯ ಬಹುಮಾನ : ರೂ ೩೦೦೦ + ರೂ ೫೦೦/- ಉಚಿತ ಪುಸ್ತಕ + ಸರ್ಟಿಫಿಕೇಟ್
೪. ೩ ಸಮಾಧಾನಕರ ಬಹುಮಾನಗಳು : ರೂ ೧೦೦೦ + ರೂ ೨೫೦/- ಉಚಿತ ಪುಸ್ತಕ + ಸರ್ಟಿಫಿಕೇಟ್
೫. ಭಾಗವಹಿಸುವ ಎಲ್ಲ ತಂಡಗಳಿಗೆ ಉಚಿತ ಕಾಣಿಕೆ, ಉಚಿತ ಇ-ಬುಕ್ಸ್ ಮತ್ತು ಸರ್ಟಿಫಿಕೆಡ್ ನೀಡಲಾಗುವದು.
೬. ಉತ್ತಮ ನಟ : ರೂ ೧೫೦೦ + ಉಚಿತ ಇ-ಬುಕ್ಸ್ + ಸರ್ಟಿಫಿಕೇಟ್
೭. ಉತ್ತಮ ನಟಿ : ರೂ ೧೫೦೦ + ಉಚಿತ ಇ-ಬುಕ್ಸ್ + ಸರ್ಟಿಫಿಕೇಟ್
೮. ಉತ್ತಮ ನಿರ್ದೇಶಕ : ರೂ ೧೫೦೦ + ಉಚಿತ ಇ-ಬುಕ್ಸ್ + ಸರ್ಟಿಫಿಕೇಟ್

ಪ್ರಥಮ ನಾಟಕಕ್ಕೆ ಕನಿಷ್ಠ ೮೫ ಗುಣಗಳು ದ್ವಿತೀಯಕ್ಕೆ ಕನಿಷ್ಠ ೭೦ ಗುಣಗಳು ತೃತೀಯ ನಾಟಕ ಕ್ಕೆ ೬೦ ಗುಣಗಳು ಮತ್ತು ಸಮಾಧಾನಕರ ನಾಟಕಕ್ಕೆ ಕ್ಕೆ ಕನಿಷ್ಠ ೪೫ ಗುಣಗಳು ಪಡೆಯಬೇಕು. ನಿರ್ಣಾಯಕ ಮಂಡಳಿಯ ನಿರ್ಧಾರ ಅಂತಿಮ. ಅವಕಾಶ ಮತ್ತು ಸರ್ಕಾರ್‍ದ ಪರವಾನಿಗೆ ಇದ್ದಲ್ಲಿ ಮಾರ್ಚ್ ೨೭ ವಿಶ್ವ ರಂಗಭೂಮಿ ದಿನ ಬಹುಮಾನಿತ ವಿಡಿಯೋ ಪ್ರದರ್ಶನ ಧಾರವಾಡದಲ್ಲಿ ಜರುಗಿಸಲಾಗುವದು. ಪ್ರವೇಶ ಧನ ಒಂದು ನಾಟಕಕ್ಕೆ ಕೇವಲ ರೂ ೧೦೦/- ಮಾತ್ರ.

ಅಭಿನಯಭಾರತಿಯ ವಿಶ್ವಸ್ಥ ಮಂಡಳಿಯ ಸದಸ್ಯರು ಅವರ ಕುಟುಂಬದವರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುವದಿಲ್ಲ.

ಹೆಚ್ಚಿನ ವಿವರಗಳಿಗಾಗಿ ಆಸಕ್ತರು ಶ್ರೀ ಅರವಿಂದ ಕುಲಕರ್ಣಿ – ೮೦೭೩೪ ೭೯೩೯೪ (80734 79394) ಅವರನ್ನು ಸಂಪರ್ಕಿಸಬೇಕು.

ಧನ್ಯವಾದಗಳು.

ಶ್ರೀ ಸಮೀರ ಜೋಶಿ
ಸಂಚಾಲಕರು, ಅಭಿನಯ ಭಾರತಿ, ಧಾರವಾಡ
ಮೊಬೈಲ್ : ೯೮೪೫೪ ೪೭೦೦೨ (98454 47002)

 

ನಾಟಕದ ವಿಡಿಯೋ ಅಪ್ಲೋಡ್ ಮಾಡುವ ಲಿಂಕ್:   https://www.dropbox.com/request/0cti74Q0FeBy7ARPk8fy

Shopping cart close