“ಸಾಬೂನಿನಲ್ಲಿ ಆಕರ್ಷಕ ಚಿತ್ತಾರ”,

ಕೋರಮಂಗಲದ ಸಂಜನಾ ಸಿಂಗ್‌ ಪದವಿ ವಿದ್ಯಾರ್ಥಿ. ಕಲಿಕೆಯ ಸಂದರ್ಭದಲ್ಲೇ ಸಾಬೂನು ತಯಾರಿಸುವ ಹವ್ಯಾಸವನ್ನು ಉದ್ಯಮವನ್ನಾಗಿಸಿಕೊಂಡಿದ್ದಾರೆ ‘ಹ್ಯಾಂಡ್‌ಮೇಡ್‌ ಸೋಪ್‌ ಬೈ ಸಂಜನಾ’ ಎಂಬ ಹೆಸರಿನಲ್ಲಿ ಸಾವಯವ, ಆಕರ್ಷಕ ವಿನ್ಯಾಸದ ಸಾಬೂನುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಮಕ್ಕಳಿಗೆ ಹಾಗೂ ಮಹಿಳೆಯರಿಗೆ ‘ಆರ್ಟಿಸನಲ್‌ ಸೋಪ್‌ ಮೇಕಿಂಗ್‌’ ಕಾರ್ಯಾಗಾರವನ್ನೂ ನಡೆಸುತ್ತಾರೆ.ಇವರು ತಯಾರಿಸಿದ ಸಾಬೂನುಗಳು ಕಣ್ಸೆಳೆಯುವುದು ವಿಭಿನ್ನ ವಿನ್ಯಾಸಗಳಿಂದ.ಬಣ್ಣ ಬಣ್ಣದ ಕಪ್‌ ಕೇಕ್‌ಗಳು, ಹೃದಯಾಕಾರದ ಸೋಪು, ಹಕ್ಕಿ, ಪ್ರಾಣಿಗಳು, ನಕ್ಷತ್ರ ಆಕೃತಿಗಳು.. ಹೀಗೆ ಸಾಬೂನಿನಲ್ಲಿವಿಭಿನ್ನ ವಿನ್ಯಾಸಗಳು ಅವರ ಕೈಚಳಕದಲ್ಲಿ ಮೂಡಿವೆ.ಗ್ರಾಹಕರನ್ನು ಬೇಗ ಆಕರ್ಷಿಸುವುದಕ್ಕಾಗಿ ಸಾಬೂನಿನಲ್ಲಿ ಬಗೆ ಬಗೆ ವಿನ್ಯಾಸಗಳನ್ನು ಮಾಡುತ್ತಾ ಹೋದರು. ಪ್ರತಿ ಬಾರಿ ಸೋಪು ಮಾಡುವಾಗಲೂ ಅವರ ಮನಸು ಹೊಸ ವಿನ್ಯಾಸದ ಬಗ್ಗೆ ಚಿಂತಿಸುತ್ತಿತ್ತು. ‘ಇದು ಗ್ರಾಹಕರಿಗೂ ಇಷ್ಟವಾಯಿತು. ಅದೇ ಪ್ರೇರಣೆ’ ಎನ್ನುತ್ತಾರೆ ಸಂಜನಾ.ನಿಂಬೆ, ಗುಲಾಬಿ ಜಲ, ಗ್ಲಿಸರಿನ್‌.. ಹೀಗೆ ಬೇರೆ ವಸ್ತುಗಳಿಂದ,ಮುಖ ಹಾಗೂ ಮೈ ಚರ್ಮದ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಬೇರೆ ಬೇರೆ ಬಗೆಯ ಸಾಬೂನುಗಳನ್ನು ಮಾಡುತ್ತಾರೆ. ಒಪ್ಪವಾಗಿಡುವ ವಸ್ತುಗಳಂತೆ ಕಾಣುವ ಇವುಗಳನ್ನು ಮೊದಲ ಬಾರಿಗೆ ನೋಡಿದಾಗ ಸಾಬೂನೇ? ಎಂದು ಅನುಮಾನವಾಗದ ‘ಈ ಸಾಬೂನುಗಳು ರಾಸಾಯನಿಕ ಮುಕ್ತವಾದವು. ಕೊಬ್ಬರಿ, ನಿಂಬೆ, ಅಲೊವೆರಾ, ಚಾಕೊಲೇಟ್‌… ಹೀಗೆ ಚರ್ಮಕ್ಕೆ ಹಿತಕರವಾದ ವಸ್ತುಗಳನ್ನೇ ಇದರಲ್ಲಿ ಬಳಸುತ್ತೇನೆ. 10–15 ಬಗೆಯ ಸಾಬೂನುಗಳನ್ನು ತಯಾರಿಸುತ್ತೇನೆ. ಇವು ಚರ್ಮರೋಗಕ್ಕೂ ಒಳ್ಳೆಯದು. ದೀರ್ಘಕಾಲದ ಬಾಳಿಕೆಗೆ ರಾಸಾಯನಿಕಗಳನ್ನು ಬಳಸಲ್ಲ’ ಎಂಬುದು ಅವರ ಮಾತು.ಪದವಿ ಓದುತ್ತಿರುವ ಸಂಜನಾಗೆ ಭವಿಷ್ಯದಲ್ಲಿಯೂ ಸಾಬೂನು ತಯಾರಿಕೆಯನ್ನೇ ಮುಂದುವರಿಸುವ ಆಸಕ್ತಿ ಇದೆ. ರಜೆಯಲ್ಲಿ, ವಾರಾಂತ್ಯಗಳಲ್ಲಿ ಕಾರ್ಯಾಗಾರವನ್ನು ನಡೆಸುತ್ತಾರೆ.
ಸಂಪರ್ಕಕ್ಕೆ: [email protected]

courtsey:prajavani.net

https://www.prajavani.net/artculture/art/hobby-sanjana-648402.html

Leave a Reply