Need help? Call +91 9535015489

📖 Print books shipping available only in India. ✈ Flat rate shipping

“‘ಸೇಫ್‌ ಡ್ರೈವ್‌ ಸೇವ್‌ ಲೈಫ್‌’ ಅಂತರರಾಷ್ಟ್ರೀಯ ವ್ಯಂಗ್ಯಚಿತ್ರ ಪ್ರದರ್ಶನ”,

ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ಆಗಸ್ಟ್‌ 24 ರಿಂದ ಸೆಪ್ಟೆಂಬರ್‌ 7ರವರೆಗೆ ‘ಸೇಫ್‌ ಡ್ರೈವ್‌ ಸೇವ್‌ ಲೈಫ್‌’ ವಿಷಯದ ಮೇಲೆ ಅಂತರರಾಷ್ಟ್ರೀಯ ವ್ಯಂಗ್ಯಚಿತ್ರ ಪ್ರದರ್ಶನ ಏರ್ಪಡಿಸುತ್ತಿದೆ. ಸಾರಿಗೆ ನಿಯಮಗಳನ್ನು ಪಾಲಿಸುವಲ್ಲಿ ನಾವು ಪಶ್ಚಿಮದ ದೇಶಗಳಿಗಿಂತ ತುಂಬಾ ಹಿಂದಿದ್ದೇವೆ. ಇತ್ತೀಚೆಗೆ ಸಾರಿಗೆ ನಿಯಮಗಳ ಉಲ್ಲಂಘನೆ ಪ್ರಕರಣ ವಿಪರೀತವಾಗಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ‘ರಸ್ತೆ ನಿಯಮ’ಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನುಂಟು ಮಾಡುವ ಉದ್ದೇಶದಿಂದ ಜಮ್ಮು ಕಾಶ್ಮೀರದ ವ್ಯಂಗ್ಯಚಿತ್ರಕಾರ ಚಂದ್ರಶೇಖರ್, ಅಂತರರಾಷ್ಟ್ರೀಯ ವ್ಯಂಗ್ಯಚಿತ್ರಗಳ ಪ್ರದರ್ಶನ ನೀಡಲಿದ್ದಾರೆ. 36 ದೇಶಗಳ ಆಯ್ದ 76 ವ್ಯಂಗ್ಯಚಿತ್ರಗಳು ಈ ಪ್ರದರ್ಶನದಲ್ಲಿವೆ. ಜಮ್ಮು ಮತ್ತು ಬೆಂಗಳೂರಿನಲ್ಲಿ ಏಕಕಾಲಕ್ಕೆ ಈ ಪ್ರದರ್ಶನ ಏರ್ಪಡಿಸಲು ಮೊದಲು ಯೋಚಿಸಲಾಗಿತ್ತು. ಆದರೆ, ಬದಲಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಾತ್ರ ಏರ್ಪಡಿಸಲಾಗುತ್ತಿದೆ ಎಂದು ಸಂಘಟಕರು ಹೇಳಿದ್ದಾರೆ. ಪ್ರದರ್ಶನ: ‘ಸೇಫ್‌ ಡ್ರೈವ್‌ ಸೇವ್‌ ಲೈಫ್‌’ ಸ್ಥಳ : ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ನಂ.1 ಮಿಡ್ ಫೋರ್ಡ್‌ ಹೌಸ್, ಮಿಡ್ ಫೋರ್ಡ್ ಗಾರ್ಡನ್, ಟ್ರಿನಿಟಿ ವೃತ್ತ, ಎಂ.ಜಿ. ರಸ್ತೆ. ದಿನಾಂಕ: ಆ24, ಶನಿವಾರ ಬೆಳಿಗ್ಗೆ 11 ಗ್ಯಾಲರಿ ಸಮಯ: ಬೆಳಿಗ್ಗೆ 10ರಿಂದ ಸಂಜೆ 6ರವರೆಗೆಈ ಪ್ರದರ್ಶನವು ಸೆಪ್ಟೆಂಬರ್ 7ರವರೆಗೂ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.

courtsey:prajavani.net

https://www.prajavani.net/artculture/art/safe-drive-save-life-658504.html

Leave a Reply

This site uses Akismet to reduce spam. Learn how your comment data is processed.