ಯಕ್ಷಲೋಕದ ಶತಕ ಧ್ವಜಕದ್ರಿಯ ಶರತ್

ಯಕ್ಷಗಾನದಲ್ಲಿ ‘ಶತಕ ಧ್ವಜ’ ಎಂಬ ಬಿರುದು ಪಡೆದಿರುವ ಕುಡ್ಲದ ಶರತ್ ಕುಮಾರ್ ಕದ್ರಿ ಅವರಿಗೆ ಯಕ್ಷಗಾನದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಆಸಕ್ತಿ. ದ್ರೋಣ ಪಾತ್ರಧಾರಿಯಾಗಿ ಯಕ್ಷಲೋಕ ಪ್ರವೇಶಿಸಿದ ಇವರು ಹಿಂತಿರುಗಿ ನೋಡಲೇ ಇಲ್ಲ. ರಾಜವೇಷಧಾರಿಯಾಗಿ ಅರ್ಜುನ, ದೇವೇಂದ್ರ, ಪಂಚಜನ್ಯ, ವಾತಾಪಿ-ಇಲ್ವಲ, ಮುರಾಸುರ… ಹೀಗೆ ಹಲವಾರು ಪಾತ್ರ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಜನಾರ್ದನ ಕದ್ರಿ ಹಾಗೂ ತಿಲೋತ್ತಮ ಕದ್ರಿ ದಂಪತಿಯ ಪುತ್ರ. ಮಂಗಳೂರಿನ ಕೋಡಿಕ್ಕಲ್‍ನ ವಿವೇಕನಂದ ನಗರದಲ್ಲಿ ವಾಸವಾಗಿದ್ದಾರೆ. ಎಂಜಿನಿಯರಿಂಗ್‌ನಲ್ಲಿ ರ‍್ಯಾಂಕ್‌ ಪಡೆದಿದ್ದರೂ ಯಕ್ಷಗಾನ ಕಲೆಯನ್ನು ಬಿಡಲಿಲ್ಲ. ಇವರದ್ದು ಬಹುಮುಖ ಪ್ರತಿಭೆ. ತಬಲ ವಾದವನ್ನು ಕೆಮ್ಮಣ್ಣರಾಮ್ ಭಟ್‍ರಿಂದ ಕಲಿತರು. ಮಾಂಬಾಡಿ ಸುಬ್ರಹ್ಮಣ್ಯ ಭಟ್‍ರವರಿಂದ ಭಾಗವತಿಕೆ ಮತ್ತು ಮದ್ದಳೆವಾದನದ ತರಬೇತಿಯನ್ನು ಪಡೆದರು. ಕದ್ರಿ ಪರಿಸರದ ಸುತ್ತಲಿನ ಆಸಕ್ತರಿಗೆ ಯಕ್ಷಗಾನ ತರಬೇತಿಗಳನ್ನು ನೀಡುತ್ತ ಬಂದಿದ್ದಾರೆ. ಇವರು ರಾಜ್ಯ ರಾಷ್ಟ್ರದಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ನೀಡಿದ್ದರಲ್ಲದ್ದೇ ಜೊತೆಗೆ ಯಕ್ಷಗಾನ ತರಬೇತಿಗಳನ್ನು ವಿವಿಧ ಶಾಲಾ ಕಾಲೇಜುಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ನೀಡುತ್ತ ಇದ್ದಾರೆ. ಜೊತೆಗೆ ನಾಟ್ಯ ತರಬೇತಿಗಳ್ನು ನೀಡುತ್ತಾರೆ.ಪ್ರಸ್ತುತ ಹವ್ಯಾಸಿ ಕಲಾವಿದನಾಗಿ, ಹವ್ಯಾಸಿ ಬಳಗ ಕದ್ರಿ ಮಂಗಳೂರು ಎಂಬ ಯಕ್ಷಗಾನ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇದರ ದಶಮಾನೋತ್ಸವದ ಕಾರ್ಯಕ್ರಮದಲ್ಲಿ 60 ವರ್ಷ ಮೇಲ್ಪಟ್ಟ 100 ಜನ ಯಕ್ಷಗಾನ ಹಿರಿಯ ಕಲಾವಿದರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಿದರು. ಇವರಿಗೆ 100ಕ್ಕೂ ಅಧಿಕ ಸನ್ಮಾನಗಳು 120 ಕ್ಕೂ ಹೆಚ್ಚು ಪ್ರಶಸ್ತಿಗಳು ದೊರಕಿವೆ. ಬಾಂಬೆ, ಮಸ್ಕತ್ ಯುರೋಪ್‍ಗಳಲ್ಲೂ ಅಭಿಮಾನಿಗಳಿದ್ದಾರೆ. ‘ಯಕ್ಷ ಕದಳಿ’ ಎಂಬ ಪುಸ್ತಕವನ್ನು ಕೂಡಾ ಬರೆದಿದ್ದಾರೆ. ವರ್ಷಕ್ಕೆ ಒಂದು ಬಾರಿ ದೆಹಲಿಯಲ್ಲಿ ಕಾರ್ಯಕ್ರಮವನ್ನು ನೀಡುತ್ತಾರೆ. ಪ್ರಸ್ತುತ ಹವ್ಯಾಸಿ ಕಲಾವಿದನಾಗಿ, ತಬಲ ವೃತ್ತಿಯನ್ನು ಮಾಡುತ್ತಾ ಇದ್ದಾರೆ. ಇವರಿಗೆ 2005ರಲ್ಲಿ ‘ಶತಕ ಧ್ವಜ’… ಹೀಗೆ ಹಲವಾರು ಬಿರುದುಗಳು ಸಿಕ್ಕಿವೆ.

courtsey:prajavani.net

https://www.prajavani.net/artculture/art/hundredth-flag-world-665818.html

Leave a Reply