Your Cart

Need help? Call +91 9535015489

📖 Print books shipping available only in India. ✈ Flat rate shipping

ಕನ್ನಡದಲ್ಲಿ ‘ಭಾರತ ಸಂವಿಧಾನ’ ಕೃತಿ ಬಿಡುಗಡೆ

ಖ್ಯಾತ ವಕೀಲ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್.ದ್ವಾರಕಾನಾಥ್ ಅವರು ಸಂಗ್ರಹಿಸಿ, ಸಂಪಾದಿಸಿ ಮತ್ತು ಪರಿಷ್ಕರಣೆಗೊಳಿಸಿದ ‘ಭಾರತ ಸಂವಿಧಾನ’ ಕೃತಿ ಫೆ.20ರಂದು ಲೋಕಾರ್ಪಣೆಗೊಳ್ಳಲಿದೆ. ಈ ಕೃತಿಯಲ್ಲಿ ಸಂವಿಧಾನದೊಂದಿಗೆ ಸಂವಿಧಾನಕ್ಕೆ ಸಂಬಂಧಪಟ್ಟ ಐತಿಹಾಸಿಕ ದಾಖಲೆಗಳನ್ನು ಅಡಕಗೊಳಿಸಲಾಗಿದೆ. ಸಂವಿಧಾನದ ಮೂಲ ಪ್ರತಿಯನ್ನು ಕೈ ಬರಹದಲ್ಲೇ (ಕ್ಯಾಲಿಗ್ರಫಿ) ಬರೆದ ಅಂದಿನ ಖ್ಯಾತ ಕ್ಯಾಲಿಗ್ರಫಿ ಕಲಾವಿದ ಪ್ರೇಮ್ ಬಿಹಾರಿ ನರೇನ್ ರೈಸಾದ (ಸಕ್ಸೇನ್) ರಚಿಸಿದ ಮಾದರಿಯಿದೆ. ಕೃತಿಗೆ ಅಂದವಾದ ಗೆರೆ ಚಿತ್ರಗಳನ್ನು ಬರೆದ ಶಾಂತಿನಿಕೇತನದ ಪ್ರಖ್ಯಾತ ಕಲಾವಿದ ನಂದಲಾಲ್ ಬೋಸ್ ಅವರ ಚಿತ್ರಗಳನ್ನು ಮರುಮುದ್ರಿಸಲಾಗಿದೆ.ಸಂವಿಧಾನಕ್ಕೆ ಸಂಬಂಧಪಟ್ಟ ಅನೇಕ ವಿಶೇಷ ಚಿತ್ರಗಳನ್ನು ನೀಡಲಾಗಿದೆ. ಖ್ಯಾತ ಕಲಾವಿದ ಎಂ.ಎಸ್.ಮೂರ್ತಿ ಬಾಬಾಸಾಹೇಬರ ವ್ಯಕ್ತಿಚಿತ್ರ ರಚಿಸಿದ್ದಾರೆ. ಸಂವಿಧಾನಕ್ಕೆ ಸಹಿ ಮಾಡಿದ ಅಂದಿನ ಲೋಕಸಭಾ ಸದಸ್ಯರೆಲ್ಲರ ಸಹಿಗಳೊಂದಿಗೆ ಅವರ ಒಟ್ಟಾರೆ ಚಿತ್ರಗಳನ್ನು ನೀಡಲಾಗಿದೆ. ಈ ಕೃತಿಯನ್ನು ಫೆ.20, ಗುರುವಾರ ವಿಶ್ವ ಸಾಮಾಜಿಕ ನ್ಯಾಯದ ದಿನದಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮ ವಿವರ: ಅಧ್ಯಕ್ಷತೆ– ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ. ಮುಖ್ಯ ಅತಿಥಿ– ಲೋಕಾಯುಕ್ತ ಜಸ್ಟಿಸ್ ವಿಶ್ವನಾಥ ಶೆಟ್ಟಿ, ಉಪಮುಖ್ಯಮಂತ್ರಿ ಮತ್ತು ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ, ಕಾನೂನು ಸಚಿವ ಮಾಧುಸ್ವಾಮಿ, ಶಾಸಕ ಎನ್.ಮಹೇಶ್‌. ಉಪಸ್ಥಿತಿ– ಡಾ. ಸಿ.ಎಸ್.ದ್ವಾರಕಾನಾಥ್. ಸ್ಥಳ: ಬಾಂಕ್ವೆಟ್ ಹಾಲ್, ವಿಧಾನಸೌಧ, ಫೆ. 20, ಸಂಜೆ 6. ಕನ್ನಡದಲ್ಲಿ ಭಾರತ ಸಂವಿಧಾನ (ಐತಿಹಾಸಿಕ ದಾಖಲಾತಿಗಳೊಂದಿಗೆ) ಪುಸ್ತಕ ಬಿಡುಗಡೆ: ಲೋಕಾರ್ಪಣೆ– ಬಿ.ಎಸ್. ಯಡಿಯೂರಪ್ಪ, ಅಧ್ಯಕ್ಷತೆ– ವಿಶ್ವೇಶ್ವರ ಹೆಗಡೆ ಕಾಗೇರಿ, ಅತಿಥಿಗಳು– ಜಸ್ಟಿಸ್ ವಿಶ್ವನಾಥ ಶೆಟ್ಟಿ, ಗೋವಿಂದ ಕಾರಜೋಳ, ಮಾಧುಸ್ವಾಮಿ, ಎನ್. ಮಹೇಶ್, ಉಪಸ್ಥಿತಿ– ಡಾ. ಸಿ.ಎಸ್. ದ್ವಾರಕನಾಥ್,

courtsey:prajavani.net

https://www.prajavani.net/artculture/article-features/iindian-constitution-in-kannada-book-released-in-706536.html

Leave a Reply