Your Cart

Need help? Call +91 9535015489

📖 Print books shipping available only in India. ✈ Flat rate shipping

ಮುಕ್ಕಾಂ ಪೋಸ್ಟ್ ಬೊಂಬಿಲವಾಡಿ

ಜಗತ್ತನ್ನೇ ಗೆದ್ದು ಸರ್ವಾಧಿಕಾರಿಯಾಗುವ ಮಹತ್ವಕಾಂಕ್ಷಿಯಾಗಿದ್ದ ಅಡಾಲ್ಫಹಿಟ್ಲರ್,ಅಣುಬಾಂಬ್ ತಯಾರಿಸುವ ರಹಸ್ಯ ತಿಳಿದುಕೊಂಡು ಜಪಾನನಿಂದ

ತಿರುಗಿ ಬರುವಾಗ ದುರ್ದೈವದಿಂದ  ಭೂಸ್ಪರ್ಶ ಮಾಡುವ ಕಾಲ್ಪನಿಕ ಸ್ಥಳವೇ ”ಬೊಂಬಿಲವಾಡಿ”.ಮುಕ್ಕಾಂ ಪೋಸ್ಟ ಬೊಂಬಿಲವಾಡಿ, ಈ ಹಾಸ್ಯಪೂರಿತ

ನಾಟಕದಲ್ಲಿ,ಹಿಟ್ಲರ್,ಅಲ್ಲಿಯ ಆರಕ್ಷಕ ಠಾಣೆಯ ತಂತಿರಹಿತ ದೂರವಾಣಿಯನ್ನು ಬಳಸುವ ವಿಫಲ ಪ್ರಯತ್ನ ಮಾಡುವ ಸಂದರ್ಭದಲ್ಲಿ, ನಾಟಕ ಕಂಪನಿಗೆ

ರವಾನಿಸಲ್ಪಟ್ಟು, ಕಂಪನಿಯ ಮುಖ್ಯಸ್ಥನು ಹಿಟ್ಲರ್ ನನ್ನು ಬಚ್ಚಿಟ್ಟ ಆರೋಪಕ್ಕಾಗಿ ಆರಕ್ಷಕರು ಬಂಧಿಸುತ್ತಾರೆ.ಮುಖ್ಯಸ್ಥನನ್ನು ಬಿಡಿಸುವ ಸಲುವಾಗಿ

ತಂಡದ ಸದಸ್ಯರು ವಿವಿಧ ವೇಷಗಳಲ್ಲಿ ಪಡುವ ಪಾಡು ಹಾಗೂ ಸಫಲ ಪ್ರಯತ್ನ.ಇಂತಹದರಲ್ಲೇ ನುಸುಳುವ ನಾಟಕದ ಗೀಳಿನ ಆಂಗ್ಲ ಅಧಿಕಾರಿ ಹಾಗೂ ಆರಕ್ಷಕ ಪೇದೆಯ ಗೋಳು,ಜರ್ಮನಿಗೆ ತಿರುಗಿ ಹೋಗಲು ಹಿಟ್ಲರ್ ಪಡುವ ಪಾಡು, ಇವೆಲ್ಲವೂ ಹಾಸ್ಯಮಯವಾಗಿ ಮೂಡಿ ಬಂದಿವೆ.

೨೦೧೮ರಲ್ಲಿ ರಂಗಭೂಮಿ(ರಿ) ಉಡುಪಿ.ಇವರು ನಡೆಸಿದ ೩೯ನೇ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಈ ನಾಟಕ ಪ್ರಥಮ ಪುರಸ್ಕಾರವನ್ನು ಪಡೆದದಲ್ಲದೇ

೯ ವೈಯಕ್ತಿಕ ಬಹುಮಾನಗಳನ್ನು ಪಡೆದಿರುತ್ತದೆ.ಮೂಲ ನಾಟಕವು ಮರಾಠಿ ಭಾಷೆಯಲ್ಲಿದ್ದು, ೫೦೦ಕ್ಕೂ ಮಿಕ್ಕಿ ಪ್ರದರ್ಶನಗಳನ್ನು ಸಂಭ್ರಮಿಸಿದೆ.

ಕೆ.ಆರ್.ಓಂಕಾರ್ ಅವರ ನಿರ್ದೇಶನದಲ್ಲಿ,’ನೀನಾಸಂ ತಿರುಗಾಟ’ದಲ್ಲಿಯೂ ಸಹ ನೂರಾರು  ಪ್ರದರ್ಶನಗಳನ್ನು ಕಂಡಿದೆ.

ಈಗ “ಮುಕ್ಕಾಂ ಪೋಸ್ಟ ಬೊಂಬಿಲವಾಡಿ” ಈ ಹಾಸ್ಯರಸ ಭರಿತ ನಾಟಕ ನಿಮಗಾಗಿ,ರಂಗಶಂಕರದಲ್ಲಿ, ಫೆಬ್ರವರಿ ೯, ೨೦೨೦ರಂದು ಮತ್ತೊಮ್ಮೆ.

ನಾಟಕ ನೋಡಿ ಪ್ರೋತ್ಸಾಹಿಸಿ.

Leave a Reply