ಈ-ಹೊತ್ತಿಗೆ – “ಸೂರ್ಯನ ಕೊಡೆ – ಕಥಾ ಸಂಕಲನ”

ಕೇಳಿರಿ ಚರ್ಚೆಯ ಧ್ವನಿ ಮುದ್ರಣ

ಈ-ಹೊತ್ತಿಗೆ
೨೧ – ೦೨ – ೨೦೧೬
ಈ-ಹೊತ್ತಿಗೆ ಮೂರನೇ ವರುಷದಿಂದ ನಾಲ್ಕನೆಯ ವರುಷಕ್ಕೆ ಹೆಜ್ಜೆ ಇಟ್ಟಿದೆ, ನಾಲ್ಕನೆಯ ವರುಷದ ಹುಟ್ಟುಹಬ್ಬದ ಸಂಭ್ರಮ.
ಈ ತಿಂಗಳ ಚರ್ಚಿಸಿದ ಪುಸ್ತಕ – ಕುಂ. ವೀರಭದ್ರಪ್ಪ ಅವರ “ಸೂರ್ಯನ ಕೊಡೆ – ಕಥಾ ಸಂಕಲನ”

ಕಥಾ ಸಂಕಲನದ ಕಥೆಗಳು:
ವಿಲೋಮ, ಸೂರ್ಯನ ಕೊಡೆ, ಅಪಸ್ಮಾರ, ಸೊಳ್ಳೆ, ಶಾನವಾಸಪುರ, ಪುನರಪಿ, ಕರೆ, ಮರ್ಕಟೋಪಖ್ಯಾನ, ಒಂದು ಪ್ರಶ್ನೆಯ ಕಥೆ, ಎಂಜಲೆಲೆ ಯಲ್ಲಮ್ತಾಯಿಯ ಜಳಕ ವೃತ್ತಾಂತವು, ಆಸರೆ, ಹೇನುಗಳು ಮತ್ತು ಹೂವು ತರುವ ಮನೆಗೆ

ಭಾಗವಹಿಸಿದವರು – ಗೀತಾ ಬಿ.ಯು, ಜಯಲಕ್ಷ್ಮೀ ಪಾಟೀಲ್, ಸರಳಾ ದ್ವಾರಕವಾಸ್, ತೇಜಸ್ವಿನಿ ಹೆಗಡೆ, ವಿಶ್ವಾಸ್, ಉಮಾ ಶೇಖರ್, ಉಷಾ ರೈ, ಶಮ್ಮಿ ಮತ್ತು ಮಾಲಿನಿ ಗುರುಪ್ರಸನ್ನ.

ಪ್ರಮುಖಾಂಶಗಳು –
ಈ-ಹೊತ್ತಿಗೆ ಮುದ್ರಿತ ಚರ್ಚೆ ಕೇಳಿ ಕೆಳಗಿನ ವಿವರ ಬರೆದದ್ದು.

೧. ಈ ಕಥಾ ಸಂಕಲನ ರಾಜಕೀಯ ಅಥವಾ ಪ್ರಸ್ತುತ ವಿಷಯಗಳ ಸಂಕೀರ್ಣತೆ ಒಳಗೊಂಡು, ಒಂದು ಅಣಕು ಅಥವಾ ವಿಡಂಬನೆ ಅನ್ನಬಹುದು. ಕಥೆಗಾರರು ಇಲ್ಲಿ ಪ್ರಾಣಿಗಳನ್ನು ಪ್ರತಿಮಾ ರೂಪವಾಗಿ ಬಳಿಸಿದ್ದಾರೆ, ಇದು ಒಂದು ರೀತಿಯ ವಿಡಂಬನೆ ಶೈಲಿ ಇರಬಹುದು.

೨. ಇವರ ಕಥೆಗಳು ಸಮಾಜದ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ ಆದರೆ ಅದರ ಪರಿಹಾರದ ಉತ್ತರ ತೋರಿಸುವಲ್ಲಿ ಶಕ್ಯವಾಗಿಲ್ಲ. ಈ ವಿಷಯ ಸುತ್ತ ನಡೆದ ಚರ್ಚೆ ಎಲ್ಲರೂ ಈ ದ್ವನಿ ಮುದ್ರಣದಲ್ಲಿ ಕೇಳಬಹುದು, ಕೆಲವರ ಅಭಿಪ್ರಾಯ ಉತ್ತರ ತೋರಿಸುವಲ್ಲಿ ವಿಫಲವಾಗಿದೆ….ಇನ್ನು ಕೆಲವರ ಅಭಿಪ್ರಾಯ ಲೇಖಕ ಸಮಸ್ಯೆಯ ಉತ್ತರ ಸೂಚಿಸಬಾರದು ಏಕೆಂದರೆ ಒಬ್ಬರ ನಿಲವಿಗೆ ಆಧಾರಿತ ಆದ ಉತ್ತರ ಆಗುತ್ತದೆ

೩. ಓದುಗರು ಹಳೆಯ ಕಾಲದವರಾದರೆ, ಪ್ರಸ್ತುತ ರಾಜಕೀಯ ಸಾಹಿತ್ಯ ಅಭಿರುಚಿ ಇರದಿದ್ದರೆ ಈ ಪುಸ್ತಕ ಅವರನ್ನು ಹಿಡಿದಿಡುವುದು ಕಷ್ಟವಾಗಬಹುದು. ಒಬ್ಬ ಸದಸ್ಯರ ಅಭಿಪ್ರಾಯದಂತೆ ಇದು ನವಕಾಲಿನ ಕಲೆಯಂತಿದೆ, ಅರ್ಥಮಾಡಿಕೊಳ್ಳಲು ಪ್ರಯತ್ನ ಪಡಬೇಕು.

೪. ಕೆಲವರ ಅಭಿಪ್ರಾಯದಂತೆ ಬರಹಗಾರನ ಬೆಳೆದ ಪರಿಸರದ ಕಥೆ ಬೆಳೆದು ಬಂದ ರೀತಿಗೆ ಕಾರಣವಾಗಬಹುದು. ಇನ್ನು ಕೆಲವರ ಅಭಿಪ್ರಾಯದಂತೆ ಸಾಹಿತ್ಯ ಬರೆಯುವುದು ಅಥವಾ ಓದುವುದು ನಮ್ಮ ಪರಿಸರ ಅಥವಾ ಅನುಭವದ ಬೇಲಿ ದಾಟಿ ವಿವರಿಸುವದರಲ್ಲಿ ಅಥವಾ ಅರ್ಥ ಮಾಡಿಕೊಳ್ಳುವಲ್ಲಿ ಇರಬೇಕು.

೫. ಕಥೆಗಾರ ಸಿದ್ದಾಂತಕ್ಕೆ ಒಳಗಾಗಿ ಕಥೆ ಬರೆದರೆ ಅದು ಓದುಗರಿಗೆ ಬೇಸರ ತರಿಸಬಹುದು. ತುಂಬಾ ಸಿದ್ದಾಂತ ಆದರೆ ಕಥೆಗಾರ ಕಥೆ ಬರೆಯುವ ಕಲೆ ಕಳೆದುಕೊಳ್ಳುತ್ತಾನೆ, ಸಹಜತೆ ಹೋಗುತ್ತದೆ ….ಅಂದರೆ ಕಲೆ ಸಾವನಪ್ಪುತ್ತದ್ದೆ.

೬. (ಕಥೆ “ಎಂಜಲೆಲೆ ಯಲ್ಲಮ್ತಾಯಿಯ ಜಳಕ ವೃತ್ತಾಂತವು”) ಕಥೆಯ ಭಾಷೆಯು ಆ ಪ್ರಾಂತಿಯರಲ್ಲದ ಓದುಗರಿಗೆ ಓದಲು ಕಷ್ಟ ಕೊಡುವಂಥದ್ದು ಅದರೂ ಎಲ್ಲ ಓದುಗರು ಮೆಚ್ಚಿದ ಕಥೆ . ಒಂದು ಒಳ್ಳೆಯ ವಿಷಯ ಇದ್ದ ಕಥೆಯು ಓದುಗರನ್ನು ಹೇಗೆ ಹಿಡಿದಿಡುತ್ತದೆ ಎಂದರೆ ಕಷ್ಟ ಪಟ್ಟು ಗ್ರಾಮೀಣ ಭಾಷೆ ಅಥವಾ ಒಂದು ಸ್ಥಳೀಯ ಭಾಷೆ ಅರ್ಥ ಮಾಡಿಕೊಂಡು ಓದಿ ಖುಷಿ ಪಡುತ್ತಾರೆ.

ತೇಜಸ್ವಿನಿ ಹೆಗಡೆ ಅವರು ಚರ್ಚೆಯ ವಿವರಗಳನ್ನು ಈ-ಹೊತ್ತಿಗೆ ಫೇಸ್ಬುಕ್ ಪೋಸ್ಟ್ನಲ್ಲಿ ಸುಂದರವಾಗಿ ಮೂಡಿಸಿದ್ದಾರೆ.

https://www.facebook.com/permalink.php?story_fbid=525096047669789&id=137132543132810&substory_index=೦

Leave a Reply