ಪ್ರಾಪ್ತಿ ಲೇ: ಓ.ಆರ್.ಪ್ರಕಾಶ್ ಪ್ರ: ಬೆನಕ ಬುಕ್ಸ್ ಬ್ಯಾಂಕ್ ಮೊ: 73384 37666 ಕಾದಂಬರಿ ಹೀಗೆ ನಡೆಯಬೇಕು ಎಂದು ನಿಶ್ಚಯಿಸಿದಾಗ ಕೆಲವು ಪಾತ್ರಗಳಿಗೆ ಸ್ವಯಂದೃಷ್ಟಿ ಇರುವುದಿಲ್ಲ. ಈ ಸ್ವಯಂದೃಷ್ಟಿಯಿಲ್ಲದ ಪಾತ್ರಗಳು ಪ್ರಾಪ್ತಿ ಕಾದಂಬರಿಯಲ್ಲಿ ಹಲವಿವೆ. ಕೆಲವೊಮ್ಮೆ ಲೇಖಕರು ಈ ಪಾತ್ರಗಳನ್ನು ಮಾಹಿತಿ ನೀಡುವುದಕ್ಕಾಗಿ ಇರುವಂತೆ ನಿರೂಪಿಸುವುದು ಈ ಕಾದಂಬರಿಯ ಮಿತಿ. ಕ್ರೀಡೆಯ ಕೆಲ ನಿಯಾಮಾವಳಿಗಳು, ಗರ್ಭಧಾರಣೆ, ದತ್ತಕ ಪ್ರಕ್ರಿಯೆ, ದತ್ತಕ ತೆಗೆದುಕೊಳ್ಳುವ ಕ್ರಮ, ಜೀನ್ಸ್ನ ಎಲ್ಲ ಗುಣ ಸ್ವಭಾವಗಳ ಭರಪೂರ ಮಾಹಿತಿಯನ್ನು ಕಾದಂಬರಿಯ ಕಥಾ ಎಳೆಯನ್ನಾಗಿಸಿದ್ದಾರೆ. ಇಲ್ಲಿ ಗಮನ ಸೆಳೆಯುವುದು ಕಾದಂಬರಿಕಾರ ಓ.ಆರ್.ಪ್ರಕಾಶ ಅವರ ನಿರೂಪಣಾ ಶೈಲಿ. ಒಂದೇ ಗುಟುಕಿಗೆ ಓದಿ ಮುಗಿಸುವಷ್ಟು ಕಥೆಯಲ್ಲಿ ವೇಗವಿದೆ. ಎಲ್ಲ ಪಾತ್ರಗಳು ಜೀವಂತಿಕೆಯಲ್ಲಿ ಮೈತಳೆದಿದ್ದು, ಬರುವಷ್ಟೇ ವೇಗದಲ್ಲಿ ನಿರ್ಗಮನಗೊಳ್ಳುವುದು ಈ ಕಾದಂಬರಿಯ ವೈಶಿಷ್ಯ
courtsey:prajavani.net
https://www.prajavani.net/artculture/book-review/prapthi-653972.html
You must log in to post a comment.