“ಯಾವ ನಾನು?”,

“ನನ್ನ ಮಾತು ಇಲ್ಲಿ ಯಾರಿಗೂಅರ್ಥವಾಗುವುದಿಲ್ಲ.ನನ್ನ ಮಾತು ಇಲ್ಲಿ ಯಾರಿಗೂಅರ್ಥವಾಗುವುದಿಲ್ಲ.ಬಹುಶಃ ಬೆಳೆದ ಜಾಗದಿಂದ ಹೊರಹಾಕಿ,‘ಬೇರೆಲ್ಲೋ ಬದುಕುತ್ತಾರೆ ಬಿಡು’ ಎಂದುನಿಮ್ಮ ಬೇರುಗಳನ್ನು ಕತ್ತರಿಸಿದ ಅವರಉದ್ಧಟತನದ ಬಗ್ಗೆ ನಿಮಗೆ ಅರಿವಿಲ್ಲ.ನೀವೀಗ ಯೋಚಿಸುತ್ತಿರಬಹುದುಇಲ್ಲಿ ನೀರು ಕುಡಿಯುವುದಕ್ಕೆ ನನ್ನ ಹಕ್ಕಾದರೂ ಏನು?ಈ ನೆಲವನ್ನೇ ಮನೆಯೆಂದುಕೊಂಡರೂ‘ನೀನು ಇಲ್ಲಿಯವನಲ್ಲ’ ಎಂದು ಸಾರಿ ಹೇಳುವದೇಶದವರನ್ನು ಮನುಷ್ಯರೆನ್ನಲು ಹೇಗೆ ಸಾಧ್ಯ?ಸಹಪಾಠಿಗಳು ಪರದೇಸಿ ಎಂದು ಕರೆದಾಗಅವರಾಡುವ ಮಾತು ನನಗೂ ತಿಳಿಯುತ್ತದೆ”,
ನನ್ನ ಮಾತು ಇಲ್ಲಿ ಯಾರಿಗೂಅರ್ಥವಾಗುವುದಿಲ್ಲ.ಬಹುಶಃ ಬೆಳೆದ ಜಾಗದಿಂದ ಹೊರಹಾಕಿ,‘ಬೇರೆಲ್ಲೋ ಬದುಕುತ್ತಾರೆ ಬಿಡು’ ಎಂದುrನಿಮ್ಮ ಬೇರುಗಳನ್ನು ಕತ್ತರಿಸಿದ ಅವರಉದ್ಧಟತನದ ಬಗ್ಗೆ ನಿಮಗೆ ಅರಿವಿಲ್ಲ.rನೀವೀಗ ಯೋಚಿಸುತ್ತಿರಬಹುದುಇಲ್ಲಿ ನೀರು ಕುಡಿಯುವುದಕ್ಕೆ ನನ್ನ ಹಕ್ಕಾದರೂ ಏನು?ಈ ನೆಲವನ್ನೇ ಮನೆಯೆಂದುಕೊಂಡರೂ‘ನೀನು ಇಲ್ಲಿಯವನಲ್ಲ’ ಎಂದು ಸಾರಿ ಹೇಳುವದೇಶದವರನ್ನು ಮನುಷ್ಯರೆನ್ನಲು ಹೇಗೆ ಸಾಧ್ಯ?ಸಹಪಾಠಿಗಳು ಪರದೇಸಿ ಎಂದು ಕರೆದಾಗಅವರಾಡುವ ಮಾತು ನನಗೂ ತಿಳಿಯುತ್ತದೆಎಂದೇಕೆ ಅವರಿಗೆ ತಿಳಿಯುವುದಿಲ್ಲ?ಹಸಿವು ಎಲ್ಲರಿಗೂ ಒಂದೇ ಅಲ್ಲವೇ?ನನ್ನ ಕಾಲುಗಳು ಅವರಿಗಷ್ಟೇ ಗೊತ್ತಿರುವದಾರಿಗಳಲ್ಲಿ ಸಂಚರಿಸದೇ ಇರಬಹುದು.ಆದರೇನು? ಇಷ್ಟು ವರುಷ ಇದೇ ನೆಲದಲ್ಲಿನನ್ನ ಕನಸುಗಳ ಬಿತ್ತಿದ್ದೇನೆ.ಕೆಲವೊಮ್ಮೆ ಈ ಕಾಂಕ್ರೀಟ್ ಗೋಡೆಗಳಲ್ಲಿ ಹುದುಗಿ‘ಇನ್ನೂ ಬದುಕಿದ್ದೇನೆ’ ಎಂದು ಕಿರುಚಬೇಕೆನಿಸುತ್ತದೆ.ಆದರೇನು? ನನ್ನ ದೇಹ ಒಂದೇ ನೆಲದ ಹೂವಲ್ಲಯಾರ ಭೂಮಿ ಅಥವಾ ಯಾವ ಆಕಾಶ ನನ್ನದು?ಯಾವ ಸಮುದ್ರ ಅಥವಾ ಗಾಳಿ ನನ್ನದು?ನಾನು ಒಬ್ಬನೋ ಅಥವಾ ಹಲವೋ?ಬೆರೆತುಹೋಗದ ಜಗತ್ತುಗಳ ಬೆಸೆದಿರುವಸೇತುವೆ ನಾನೆಂದು ತಿಳಿಯಲುಖುಷಿ ಮತ್ತು ದುಃಖ ಏಕಕಾಲಕ್ಕೆ ಆಗುತ್ತದೆ.ಕಂಬಳಿಯ ಕೆಳಗೆ ದೂಡಿದ ಹಲವಾರು ದೂಳಿನಕಣಗಳಲ್ಲಿ ನಾನೂ ಒಬ್ಬನೆಂದು,ತಂದೆ ತಾಯಿಗಳಿಂದ ದೂರವಾದ ಮಕ್ಕಳಲ್ಲಿನಾನೂ ಒಬ್ಬನೆಂದು ನನಗೆ ತಿಳಿದಿದೆ.ನನ್ನದೇ ಹಲವುಗಳಲ್ಲಿ ಯಾವುದನ್ನಾರಿಸಿಕೊಂಡುನಾನಾಗಬೇಕೆಂದು ತಿಳಿಯುತ್ತಿಲ್ಲ

courtsey:prajavani.net

https://www.prajavani.net/639604.html