ಬುಧುವಾರ, 23 ನವೆಂಬರ್ 2016 ರಂದು ‘ಬೆಳಿಗ್ಗೆ’ 10.30ಕ್ಕೆ ಧಾರವಾಡದ ಮನೋಹರ ಗ್ರಂಥ ಮಾಲಾದ ಡಾ. ‘ಗಿರಿ’ಯವರ ‘ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ’ ಗ್ರಂಥದ ಲೋಕಾರ್ಪಣೆ ಸಮಾರಂಭ ಧಾರವಾಡದಲ್ಲಿ ನಡೆಯಲಿದೆ. ಖ್ಯಾತ ವಿದ್ವಾಂಸರೂ, ವಿಮರ್ಶಕರಾದ ಶ್ರೀ ಜಿ. ಎಚ್. ನಾಯಕ, ಡಾ. ಗಿರಡ್ಡಿ ಗೋವಿಂದರಾಜ, ಶ್ರೀ ಜಿ. ಪಿ. ಬಸವರಾಜು ಮತ್ತು ಶ್ರೀ ಪಂಡಿತಾರಾಧ್ಯರು ವೇದಿಕೆಯಲ್ಲಿದ್ದು ಗ್ರಂಥ ಲೋಕಾರ್ಪಣೆಯ ನಂತರ ಕೃತಿಯ ಬಗ್ಗೆ ಸಂವಾದವೊಂದನ್ನು ನಡೆಸಿಕೊಡಲಿದ್ದಾರೆ. ಕೃತಿಯ ಲೇಖಕರಾದ ಡಾ. ‘ಗಿರಿ’ಯವರು (ಡಾ. ಮಹಾಬಲಗಿರಿ ಎನ್. ಹೆಗಡೆ) ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.
ಬುಧುವಾರ, ಇದೆ ಸಮಾರಂಭದಲ್ಲಿ ‘ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ’ ಇ-ಪುಸ್ತಕ ಆವೃತ್ತಿ ಕೂಡ ಬಿಡುಗಡೆಯಾಗಲಿದೆ. ‘ಇ-ಪುಸ್ತಕ’ ಓದುಗರು ತಮ್ಮ ಮೊಬಾಯಿಲ್‍ನಲ್ಲಿ ವಿವಿಡ್ಲಿಪಿ ಅಂಡ್ರಾಯಿಡ ಅಪ್ಲಿಕೇಶನ್ ಇಳಿಸಿಕೊಂಡು ವಿಶೇಷ ರಿಯಾಯಿತಿ ದರದಲ್ಲಿ ಖರೀದಿಸಬಹುದು.
ಈ ಪುಸ್ತಕದ ಲೋಕಾರ್ಪಣೆ ಮತ್ತು ನಂತರದ ಸಂವಾದ ಕಾರ್ಯಕ್ರಮವನ್ನು ವಿಶ್ವದಾದ್ಯಂತವಿರುವ ಕನ್ನಡ ಸಾಹಿತ್ಯಾಸಕ್ತರು www.vividlipi.com ಜಾಲತಾಣದಲ್ಲಿ ನೇರಪ್ರಸಾರ ಮಾಡಲಾಗುತ್ತಿರುವದರಿಂದ ಅದರ ಸದುಪಯೋಗವನ್ನು ಪಡೆಯಬಹುದು. ವಿವಿಡ್ಲಿಪಿ ಅಂತರ್ಜಾಲದ ತಾಣದಲ್ಲಿ “ಲೈವ್ ಇವೆಂಟ್” ಕೊಂಡಿ (http://www.vividlipi.com/live-event) ಮುಖಾಂತರ ನೇರ ಪ್ರಸಾರ ವೀಕ್ಷಿಸಬಹುದು.
You must log in to post a comment.