ಈ ಹೊತ್ತಿಗೆ – “ಸದಾನಂದ” ಕಾದಂಬರಿ

ಕೇಳಿರಿ ಚರ್ಚೆಯ ಧ್ವನಿ ಮುದ್ರಣ
ಈ ಹೊತ್ತಿಗೆ ತಂಡದ ಮಾರ್ಚ್ ತಿಂಗಳ ಚರ್ಚೆ

ಪುಸ್ತಕ: ಸದಾನಂದ
ಬರೆದವರು: ಎಂ ಕೆ ಇಂದಿರಾ
ದಿನಾಂಕ: 20 ಮಾರ್ಚ್ ೨೦೧೬

ಈ ಹೊತ್ತಿಗೆ -೪೩ರಲ್ಲಿ ನಡೆದ ‘ಸದಾನಂದ’ಕಾದಂಬರಿಯ ಮೇಲಿನ ಚರ್ಚೆ, ಸಂವಾದದಲ್ಲಿ ಭಾಗವಹಿಸಿದವರು – ಜಯಲಕ್ಷ್ಮೀ ಪಾಟೀಲ್, ಸರಳಾ ದ್ವಾರಕಾವಾಸ, ತೇಜಸ್ವಿನಿ ಹೆಗಡೆ, ಜಯಶ್ರೀ ದೇಶಪಾಂಡೆ, ವಿಶ್ವಾಸ್ ಚೆನ್ನಪಟ್ಟಣ, ವಿದ್ಯಾ ರಾವ್, ಉಮಾ ಶೇಖರ್, ಉಷಾ ರೈ, ಗೀತಾ ಬಿ.ಯು, ಮೀರಾ ಮತ್ತು ಸವಿತಾ ಗುರುಪ್ರಸಾದ್.

ಚರ್ಚೆಯ ವಿವರಗಳು:

ಸದಾನಂದ ಕಾದಂಬರಿ ಸುಖಾವಾಗಿ ಓದಿಸಿಕೊಂಡಿತು. ಈ ಕಾದಂಬರಿಯನ್ನು ಓದುವಾಗ ನನಗೆ ನಾನು ಚಿಕ್ಕವಳಿದ್ದಾಗ ಓದುತ್ತಿದ್ದ ಸಾಯಿಸುತೆ, ಉಷಾ ನವರತ್ನರಾಮ್ ಎಹ್.ಜಿ ರಾಧಾದೇವಿ, ತ್ರಿವೇಣಿ ಮುಂತಾದವರ ಕೃತಿಗಳನ್ನು ಓದುತ್ತಿದ್ದಾಗಿನ ಅನುಭವ. ಅದಕ್ಕೇ ಸುಖವಾಗಿ ಓದಿಸಿಕೊಂಡಿತು ಅಂದಿದ್ದು. ಇದೇ ಮೊದಲ ಸಲ ಈ ಕಾದಂಬರಿಯನ್ನು ಓದುತ್ತಿರುವುದರಿಂದ ಇಲ್ಲಿಯವರೆಗೆ ಈ ಕೃತಿಯ ಕುರಿತು ಕೇಳಿದಷ್ಟು ಪ್ರಭಾವ ನನ್ನ ಮೇಲಾಗಲಿಲ್ಲ. ಅಂದಿನ ಕಾಲಮಾನ ಮತ್ತು ಸಾಮಾಜಿಕ ಸ್ಥಿತಿಯಲ್ಲಿ ಈ ಕೃತಿ ಅದ್ಭುತ ಎನಿಸಿರಬಹುದು. ನನಗೆ ಇದು ಅದ್ಭುತವೆನಿಸದಿರಲು ಇದೇ ವಿಷಯವನ್ನು ಹಲವು ಬಗೆಯಲ್ಲಿ ಸಶಕ್ತವಾಗಿ ಬಿಂಬಿಸಿದ ಕೃತಿಗಳನ್ನು ಈಗಾಗಲೇ ಓದಿರುವ ಮತ್ತು ಮರುವಿವಾಹ ಈಗ ಅಂಥಾ ಸಮಸ್ಯೆ (ಇಲ್ಲವೇ ಇಲ್ಲ ಅಂತಿಲ್ಲ, ಆ ಸಮಸ್ಯೆ ಇದೆ, ಆದರೆ ಇಷ್ಟು ತೀವ್ರಮಯವಾಗಿಲ್ಲ) ಅಷ್ಟಿಲ್ಲ ಎನ್ನುವ ಕಾರಣಗಳಿಂದಿರಬಹುದೇನೋ, ಆ ರೇಂಜಲ್ಲಿ ಪ್ರಭಾವ ಬೀರಲಿಲ್ಲ. ಹಾಗಂತ ಇಷ್ಟವೇ ಆಗಲಿಲ್ಲ ಅಂತಲ್ಲ ಇಷ್ಟವಾಯಿತು, ಆದರೆ ಕಾಡಲಿಲ್ಲ… ಕಾದಂಬರಿಯಲ್ಲಿ ಮುಂದೆ ಘಟಿಸಲಿರುವ ಸಾಧ್ಯತೆಗಳನ್ನು ಮುಂಚೆಯೇ ಸೂಚಿಸುತ್ತಾ ಹೋಗುತ್ತಾರಾದ್ದರಿಂದ ಹೀಗೇ ಆಗಬಹುದು ಅನ್ನುವ ಅಂದಾಜ್ ಓದುಗನಿಗೆ ಮುಂಚೆಯೇ ಸಿಕ್ಕುಬಿಡುತ್ತದೆ……..

ಚರ್ಚೆಯ ಉಳಿದ ವಿವರಗಳನ್ನು ಈ-ಹೊತ್ತಿಗೆ ಫೇಸ್ಬುಕ್ ಪೋಸ್ಟ್ನಲ್ಲಿ ಓದಬಹುದು

https://www.facebook.com/permalink.php?story_fbid=534821280030599&id=137132543132810

Leave a Reply