“ಚೆಕಾವ್ ಟು ಶಾಂಪೇನ್”,

ನಾಟಕ: ಚೆಕಾವ್ ಟು ಶಾಂಪೇನ್ಲೇಖಕಿ: ಡಾ.ಹೇಮಾ ಪಟ್ಟಣಶೆಟ್ಟಿಪ್ರಕಾಶನ: ಅನನ್ಯ ಪ್ರಕಾಶನಪುಟ ಸಂಖ್ಯೆ: 100ಮೊಬೈಲ್: 94488 61604ರಷ್ಯಾದ ಖ್ಯಾತ ನಾಟಕಕಾರ, ಕಥೆಗಾರ ಮತ್ತು ಚಿಂತಕ ಆ್ಯಂಟನ್ ಪಾವ್ಲೋವಿಚ್ ಚೆಕಾವ್‌ನ ಜೀವನ ದೃಷ್ಟಿಯನ್ನು ರಂಗರೂಪದಲ್ಲಿ ಕಟ್ಟಿಕೊಟ್ಟಿದೆ ‘ಚೆಕಾವ್ ಟು ಶಾಂಪೇನ್’ ನಾಟಕ ಕೃತಿ. ಚೆಕಾವ್‌ನ ನಾಲ್ಕು ಕಥೆಗಳು, ‘ಸೀಗಲ್’ ನಾಟಕದ ಒಂದು ದೃಶ್ಯ ಮತ್ತು ರೇಮಂಡ್ ಕಾರ್ವರ್‌ನ ಕಥೆಯೊಂದನ್ನು ಆಧಾರವಾಗಿಟ್ಟುಕೊಂಡು ಲೇಖಕಿ ಡಾ.ಹೇಮಾ ಪಟ್ಟಣಶೆಟ್ಟಿ ಚೆಕಾವ್‌ನ ದಟ್ಟ ಜೀವಾನುಭವವನ್ನು ಕಟ್ಟಿಕೊಟ್ಟಿದ್ದಾರೆ.ತಿಳಿಹಾಸ್ಯ, ಲವಲವಿಕೆ, ವಿನೋದಗಳಿಂದ ಪ್ರಾರಂಭವಾಗುವ ಕೃತಿಯಲ್ಲಿ ಬದುಕಿನ ಕ್ಷುದ್ರತೆ, ಅನ್ಯಾಯ ಮತ್ತು ಜಿಗುಪ್ಸೆಯನ್ನು ತೀಕ್ಷ್ಣವಾಗಿ ವಿವೇಚಿಸುತ್ತಾ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ. ದುಡಿಮೆ ಮತ್ತು ಸಂಸ್ಕೃತಿಗಳು ಒಂದಾದಾಗ ಮಾತ್ರ ಸದೃಢ ದೇಶವನ್ನು ಕಟ್ಟಬಹುದು ಎಂದು ನಂಬಿದ್ದ ಚೆಕಾವ್‌, ಶಾಂಪೇನ್ ಪೇಯವನ್ನು ಬದುಕಿನ ಸಂಭ್ರಮ ಎಂದು ಪರಿಗಣಿಸಿದ್ದ ಬಗೆಯೂ ನಾಟಕದಲ್ಲಿದೆ. ಆಧುನಿಕ ಬದುಕಿನ ಸಂಕೀರ್ಣತೆ ಹಾಗೂ ಸ್ವಸ್ಥ ನಾಗರಿಕ ಸಮಾಜದ ಕನಸು–ಕಳಕಳಿಯನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಚೆಕಾವ್‌ನ ಬದುಕಿನ ವೈವಿಧ್ಯತೆಯನ್ನು ಈ ನಾಟಕ ಯಶಸ್ವಿಯಾಗಿ ರಂಗರೂಪಕ್ಕಿಳಿಸಿದೆ.

courtsey:prajavani.net

https://www.prajavani.net/artculture/book-review/book-review-641125.html

Leave a Reply