ಪುಸ್ತಕ ವಿಮರ್ಶೆ -“ನಾನೂಂದ್ರೆ ನಂಗಿಷ್ಟ”

ಪುಸ್ತಕ ವಿಮರ್ಶೆ -“ನಾನೂಂದ್ರೆ ನಂಗಿಷ್ಟ”
ಮೂರು ವಾರಗಳಲ್ಲಿ ಬದುಕಿನ ದೃಷ್ಟಿಕೋನವನ್ನೇ ಬದಲಿಸಬಹುದು ಎಂದು ಖಂಡಿತವಾಗಿ ಹೇಳಬಹುದಾದರೆ ಈ ಪುಸ್ತಕದ 21 ಲೇಖನಗಳನ್ನು ಓದಲೇಬೇಕು. ಪ್ರತಿ ಲೇಖನವೂ ವ್ಯಕ್ತಿತ್ವವಿಕಸನಕ್ಕೆ, ನಮ್ಮಾತ್ಮದ ದೈವಿಕ ಗುಣ ಬೆಳೆಸಲು ಶಕ್ತವಾಗಿದೆ. ಈ ಸಂಕಲನದ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗಿರುವುದರಿಂದ ಓದುವಾಗಲೆಲ್ಲ ಮರು ಓದು ಎಂದೆನಿಸದೇ ಇರದು. ಆದರೆ, ಪ್ರತಿ ಓದಿನಲ್ಲಿಯೂ ಹೊಸತೊಂದು ಹೊಳಹನ್ನು ಕೊಡುವ, ಹೊಸತೊಂದು ನೋಟವನ್ನೇ ತೋರುವ ಲೇಖನವಿದು. ಆಪ್ತ ಸಮಾಲೋಚಕರಾಗಿರುವ ಅವರ ಗುಣ, ಲೇಖನಗಳಲ್ಲಿಯೂ ಸ್ಫುರಿಸಿದೆ. ಕೆಲವೊಮ್ಮೆ ಬೇಡವೆನ್ನುವುದೂ ಅದೆಷ್ಟು ಮುಖ್ಯ, ಬೇಡವಾದುದನ್ನು ಡಿಲೀಟ್‌ ಮಾಡುವುದು ಅದೆಷ್ಟು ಸರಳ ಹಾಗೂ ಸುಲಭ ಎಂಬುದನ್ನು ಇಲ್ಲಿಯ ಲೇಖನಗಳನ್ನು ಓದಿದಾಗಲೇ ಮನದಟ್ಟಾಗುತ್ತದೆ. ಇಷ್ಟಕ್ಕೂ ಧಾವಂತದ ಬದುಕಿನಲ್ಲಿ, ಹಿರಿಯರೊಟ್ಟಿಗೆ ಪಟ್ಟಾಂಗ ಹೊಡೆಯುವುದನ್ನೇ ಮರೆತಿರುವ ನಾವು, ಜೀವನಾನುಭವವನ್ನು ಹೀರುವಲ್ಲಿ ಸೋಲುತ್ತಿದ್ದೇವೆ. ಆ ನಷ್ಟ ತುಂಬಿಕೊಡುವ ಗುಣ ಈ ಪುಸ್ತಕಕ್ಕೆ ಇದೆ. ಒಂದೇ ಗುಕ್ಕಿನಲ್ಲಿ ಓದಿ ಮುಗಿಸುವ ಗುಣವಿದ್ದರೂ ಓದಬಾರದು. ದಿನಕ್ಕೆ ಒಂದೇ ಓದಬೇಕು. ಓದಿದ್ದನ್ನು, ಅರಗಿಸಿಕೊಳ್ಳಬೇಕು. ಅರಗಿಸಿಕೊಂಡಿದ್ದನ್ನು ಅನುಸರಿಸಲಾರಂಭಿಸಬೇಕು. ಆಗ ನಾವೆಂದರೆ ಖಂಡಿತವಾಗಿಯೂ ನಮಗಿಷ್ಟವಾಗಲು ಆರಂಭಿಸುತ್ತೇವೆ. ಜೀವನ ಪ್ರೀತಿ ನಮ್ಮೊಳಗೆ ಅವಿರ್ಭವಿಸಿ, ನಮ್ಮ ಒಳಹೊರಗನ್ನೂ ಆವರಿಸಿಕೊಳ್ಳುತ್ತದೆ. ಮನೆಯ ಕಪಾಟಿನಲ್ಲಿರಲೇಬೇಕಾದ ಪುಸ್ತಕ. ಆಗಾಗ ಓದುತ್ತಿದ್ದರೆ ಕವಾಟದೊಳಗಿನ ದೂಳನ್ನೂ ಕೊಡವಬಹುದು.
ನಾನೂಂದ್ರೆ ನಂಗಿಷ್ಟ:
ಡಿ.ಎಂ. ಹೆಗಡೆ
ವಿವೇಕಯುಗ ಪ್ರಕಾಶನ
ಪುಟ: 168
ಬೆಲೆ:180

courtesy:prajavani.net

https://www.prajavani.net/artculture/book-review/book-review-dmghegde-615158.html

Leave a Reply