ಭಯ!!!

ಕಲಿತು ಏನಾದ್ರು ಸಾಧಿಸಬೇಕು ಅನ್ನೋಛಲ ಬಡತನದಲ್ಲಿಯೆ ಒಳ್ಳೆ ಮಾರ್ಕ್ಸ್ ತಗೊಂಡು ಮೆರಿಟ್ ನಲ್ಲಿ ಇಂಜಿನಿಯರಿಂಗ್ ಮುಗಿಸಿ ಒಳ್ಳೆ ಜಾಬ್ ಕೂಡ ಸಿಕ್ತು. ಅಪ್ಪನಿಲ್ಲದ ಮನೆಗೆ ನನ್ನ ದುಡಿಮೆ ಸಹಾಯ ವಾಗಿತ್ತು ಅನ್ನೋ ಸಮಾಧಾನ.
ಇವತ್ತು ಆಫೀಸ್ ನಲ್ಲಿ ತುಂಬಾ ಕೆಲಸ ಲೇಟ್ ಆಗೋಯ್ತು. ನ್ಯೂಸ್ ನಲ್ಲಿ ಏನೇನೊ ಸುದ್ದಿ ನೋಡಿ ಮನಸ್ಸು ವ್ಯಾಕುಲ ಗೊಂಡಿತ್ತು. ಮನೆ ತುಂಬಾ ಸಂದಿ ಯಲ್ಲಿ ಇದ್ದುದರಿಂದ ಕ್ಯಾಬ್ ಬರೋಲ್ಲ ಮೇನ್ ರೋಡ್ ಗೆ ನಿಲ್ಲಿಸ್ತಾರೆ.ಒಳಗೆ ನಡ ಕೊಂಡೆ ಹೋಗ್ಬೇಕು. ಅಲ್ಲೊಂದು ಇಲ್ಲೊಂದು ಲೈಟ್…ಯಾರು ಇಲ್ಲ…ಮೈ ತುಂಬಾ ಬಟ್ಟೆ ಹಕ್ಕೊಂಡಿದಿನಿ ತಲೆಗೆ ಶಾಲು ಬೇರೆ! ಕಾಮುಕ ಕಣ್ಣಿಗೆ ಬಟ್ಟೆ ಇದ್ರೆನೂ.. ಬಿಟ್ರೆನೂ. ರಾತ್ರಿ ವೇಳೆ ಅಂದ್ರೆ ಎಲ್ಲೊ ಪಾರ್ಟಿ ಮುಗಿಸಿ,ಸುತ್ತಾಡಿ ಬರ್ತಿದಾಳೆ ಅನ್ನೋ ವಿಕೃತ ಮನಸುಗಳೇ… ಹೆದ್ರಕೊಂಡೆ ಬೇಗ ಬೇಗ ಹೆಜ್ಜೆ ಹಾಕ್ತಿದ್ದೆ..
ಅಷ್ಟರಲ್ಲಿ ಯಾರೋ ಹಿಂಬಾಲಿಸಿದಂತೆ ಭಾಸ…ಜೋರಾಗಿ ನಡಿಯೂಕ್ಕೆ ಶುರು ಮಾಡ್ದೆ…..ಆ ನೆರಳು ಕೂಡ ಅಷ್ಟೇ ವೇಗವಾಗಿ ಬರ್ತಿತ್ತು. ಎದುರುಗಡೆ ಕುಡಕ ಬೇರೆ ತೂರಾಡ್ತಾ ಬರ್ತಿದ್ದ..ಅಯ್ಯೋ ದೇವ್ರೇ…ಮೈ ಎಲ್ಲ ಬೆವತ ಅನುಭವ.ನನ್ನನ್ನ ಹಿಂಬಾಲಿಸುತ್ತಿರೋ ನೆರಳು ಇನ್ನು ಹತ್ತಿರ ಬಂದ ಅನುಭವ.
ಓಡೊಕ್ಕೆ ಶುರು ಮಾಡೋ ಅಷ್ಟರಲ್ಲಿ ಎಡವಿ ಬಿದ್ದು ಕಾಲು ಬೇರೆ ತಿರುಚಿ ವಿಪರೀತ ನೋವು..ಅಷ್ಟರಲ್ಲಿ ಆ ನೆರಳು ಹತ್ತಿರವೇ ಬಂದು ನಿಂತಿತ್ತು.ಕಿಟಾರನೆ ಕಿರುಚಿ ಕೈ ಲಿರೋ ಬ್ಯಾಗ್ ನಿಂದ ಹೊಡಿಯೋಕ್ಕೆ ಹೋದೆ
ಗಟ್ಟಿಯಾಗಿ ನನ್ನ ಕೈ ಹಿಡಿದ …ಮುಖ ತುಂಬಾ ಪರಿಚಯದ್ದು…..ಹೌದು ಪಕ್ಕದ ಮನೆ ಶೀನ
ಅಕ್ಕಾ!! ಯಾಕೆ ಏನಾಯ್ತು ?? ಅಮ್ಮ ನಿನ್ನ ಕರ್ಕೊಂಡ್ ಬರೋಕೆ ಹೇಳಿದ್ರು ತುಂಬಾ ರಾತ್ರಿಯಾಯ್ತು ಅಂತ…ಬಾ ಹೋಗೋಣ..ನಿಧಾನಕ್ಕೆ ನನ್ನ ಕೈ ಹಿಡಿದು ಎಬ್ಬಿಸಿ ಬ್ಯಾಗ್ ಹಿಡ್ಕೊಂಡು ಮನೆಗೆ ಕರ್ಕೊಂಡ್ ಬಂದಾ.
ಅಮ್ಮ ಬಾಗಿಲಿಗೆ ನಿಂತಿದ್ರು..ಮುಖದ ಮೇಲೆ ಕಾಳಜಿ ಹೆದರಿಕೆ ಎದ್ದು ಕಾಣುತ್ತಿತ್ತು.ಅವನ ಕೈ ಹಿಡಿದು ಶೀನ….thanks ಕಣೋ!!! ಕಣ್ಣಲ್ಲಿ ನೀರು ಜಿನುಗಿತ್ತು.

1 Comment

  1. ಓ. ಚೋಲೋ ಬರದಿರಿ.

Leave a Reply