ಮರಡೂರ್‌ಗೆ ‘ಕಲಾಶೃಂಗ’ ಗೌರವ

ಮರಡೂರ್‌ಗೆ ‘ಕಲಾಶೃಂಗ’ ಗೌರವ

ಹಿಂದೂಸ್ತಾನಿ ಗಾಯಕ ಸೋಮನಾಥ್‌ ಮರಡೂರ್‌ ಅವರಿಗೆ ಶ್ರೀರಾಮ ಕಲಾ ವೇದಿಕೆ ‘ಕಲಾಶೃಂಗ‘ ಪ್ರಶಸ್ತಿ ನೀಡಿ ಗೌರವಿಸಿದೆ.

ಬೆಂಗಳೂರು: ಹಿಂದೂಸ್ತಾನಿ ಗಾಯಕ ಸೋಮನಾಥ್‌ ಮರಡೂರ್‌ ಅವರಿಗೆ ಶ್ರೀರಾಮ ಕಲಾ ವೇದಿಕೆ ‘ಕಲಾಶೃಂಗ‘ ಪ್ರಶಸ್ತಿ ನೀಡಿ ಗೌರವಿಸಿದೆ.

ನಗರದಲ್ಲಿ ಭಾನುವಾರ ನಡೆದ ನಾದನಮನ ಕಾರ್ಯಕ್ರಮದಲ್ಲಿ ಪ್ರಖ್ಯಾತ ಸರೋದ್‌ ವಾದಕ ರಾಜೀವ್‌ ತಾರಾನಾಥ್ ಹಾಗೂ ಸಾಹಿತಿ ಚಂದ್ರಶೇಖರ ಕಂಬಾರ ಪ್ರಶಸ್ತಿ ಪ್ರದಾನ ಮಾಡಿದರು.

‘ರಾಜ್ಯೋತ್ಸವ’ ಗೌರವಕ್ಕೆ ಪಾತ್ರರಾಗಿರುವ ಸೋಮನಾಥ್‌ ಅವರು ಹಾವೇರಿ ಜಿಲ್ಲೆಯ ಮರಡೂರಿನವರು. ಪುಟ್ಟರಾಜು ಗವಾಯಿಗಳಿಂದ ಅವರು ಸಂಗೀತ ಅಭ್ಯಾಸ ಮಾಡಿದ್ದಾರೆ.

‘ನಾನು ಕರ್ನಾಟಕ ಬಿಟ್ಟು ಮುಂಬೈನಲ್ಲಿ ವಾಸ ಮಾಡಲು ಬಯಸಿದ್ದೆ. ಆದರೆ, ಅಲ್ಲಿಯ ಹವಾಮಾನ ನನಗೆ ಒಗ್ಗಲಿಲ್ಲ. ಇದು ಒಳ್ಳೆಯದೇ ಆಯಿತು. ಈಗ ಧಾರವಾಡದಲ್ಲಿ ಅನೇಕ ಶಿಷ್ಯರನ್ನು ಬೆಳೆಸುತ್ತಿದ್ದೇನೆ’ ಎಂದು ಸೋಮನಾಥ್ ಹೇಳಿದರು. ‘ಸಂಗೀತ ವಿಶ್ವವಿದ್ಯಾಲಯಗಳು 100ಕ್ಕೆ ಇಂತಿಷ್ಟು ಅಂಕ ಕೊಡುತ್ತವೆ. ಇಂತಹ ಕಡೆ ಸಂಗೀತ ಕಲಿಕೆ ಹೇಗೆ ಸಾಧ್ಯ’ ಎಂದು ರಾಜೀವ್‌ ತಾರಾನಾಥ್‌ ಹೇಳಿದರು.

Courtesy : Prajavani.net

http://www.prajavani.net/news/article/2018/04/16/566222.html

Leave a Reply