ಮಾತು

 

ಮಾತು..

ಮಾತು ಹೇಗಿರಬೇಕು???

 

ಮನುಷ್ಯನಿಗೆ ದೇವರು ಕೊಟ್ಟ ದೊಡ್ಡ ವರ..ಇದರಿಂದ ಯೋಚನೆ ಸಾಧ್ಯ. .ಹುಟ್ಟಿದಾಗ ಕೂಸು ” *ಅಮ್ಮ* “ಎಂಬ ಶಬ್ದದಿಂದ ಮಾತು ಆರಂಭಿಸುತ್ತದೆ..
ಅಮ್ಮ ನನಗೆ ಹಸಿವೆಯಾಗಿದೆ.ಹೀಗೆ ಮಾತು ಮೊದಲು ತಿಳಿಸಲು ಅಥವಾ ಹೇಳಲು ಬೇಕೇಬೇಕು.ನಂತರ ನಮ್ಮ ಪರಿಚಯಕ್ಕೆ ಬೇಕು..ನಮ್ಮ ಸಂಶಯ ನಿವಾರಣೆಗೆ ಕೇಳಲುಬೇಕು..
ತಿಳಿದದ್ದನ್ನು ಆಸಕ್ತರಿಗೆ ಹೇಳಲು ಬೇಕು.
*ಮಾತು ಬೆಳ್ಳಿ ಮೌನ ಬಂಗಾರ*
ನಿಜ ಆದರೂ ಮಾತು ಅವಶ್ಯವಿದ್ದಲ್ಲಿ ಆಡಲೇ ಬೇಕು.ಇನ್ನೂ ಮಾತು ಹೇಗಿರಬೇಕು ?ಅಂದರೆ ಮಾತು ಮನಮುಟ್ಟುವಂತೆ, ಯಾರಿಗೂ ನೋವಾಗದಂತೆ,
ಗರ್ವರಹಿತವಾಗಿರಬೇಕು.
ಮಾತಿಗೆ ಬೆಲೆ ಇಲ್ಲದ ಸ್ಥಾನದಲ್ಲಿ ಮಾತು ಬೇಡ..
*ಮಾತು ಬಲ್ಲವನಿಗೆ ಜಗಳವಿಲ್ಲ*.ಹೌದು
ಇತಿಮಿತಿ ಯಲ್ಲಿ ಮಾತಿದ್ದರೆ ಜಗಳವೆಲ್ಲಿ ಬರುವದು?
ತಮ್ಮ ಜ್ಞಾನ ಯುತ ಪ್ರೇಮಯುತ ಮಾತಿನಿಂದಲೇ ಶ್ರೀ ಶಂಕರಾಚಾರ್ಯರು, ಶ್ರೀ ವಿವೇಕಾನಂದರು,ಶ್ರೀ ಸಮರ್ಥ ರಾಮದಾಸರು,ಶ್ರೀ ಅಟಲಜಿ ಜಗತ್ತೀನೆಲ್ಲಾ ಮನಸ್ಸುಗಳನ್ನು ಗೆದ್ದಿಲ್ಲವೇ?
ಇಲ್ಲಿಗೆ ನನ್ನ ಮಾತು ಮುಗಿಸುತ್ತೇನೆ…
ಧನ್ಯವಾದಗಳು…
ನಿಮ್ಮ

ವಿಜಯ.

Leave a Reply