“ಸಮಾಹಿತ” – ಇ-ಪತ್ರಿಕೆ

ಸಾಹಿತ್ಯದ ರಸದೌತಣ ನೀಡುವ ಪತ್ರಿಕೆಗಳು ಬೆರಳೆಣಿಕೆ ಇರುವ ಸಮಯದಲ್ಲಿ ಹೊಸದೊಂದು ಕಿರಣದಂತೆ “ಸಮಾಹಿತ” ಸಾಹಿತ್ಯಕ ಪತ್ರಿಕೆ ಇದೇ ವರುಷ ಪ್ರಾರಂಭವಾಯಿತು.

ಸಮಾಹಿತ ಮೊದಲನೆಯ ಪತ್ರಿಕೆಯ ಆಯ್ದ ಭಾಗವನ್ನು ತಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಇದರೊಂದಿಗೆ “ಸಮಾಹಿತ” ಪತ್ರಿಕೆ ಪ್ರಾರಂಭದಂದು, ಧಾರವಾಡ ಸಾಹಿತ್ಯ ಹಾಗು ಅಲ್ಲಿ ಪ್ರಾರಂಭವಾದ ಪತ್ರಿಕೆಗಳ ಪರಿಚಯದೊಂದಿಗೆ ರಾಘವೇಂದ್ರ ಪಾಟೀಲರು ‘ಸಮಾಹಿತ’ ಪತ್ರಿಕೆ ಪ್ರಾರಂಭದ ಬಗ್ಗೆ ಮಾತನಾಡಿದರು. ನೀವು ಅದನ್ನು ಇಲ್ಲಿ ಕೇಳಬಹುದು
ಇದು ೨೦೧೬ ಜನವರಿ ತಿಂಗಳ ೧೫ ರಂದು ಮುದ್ರಿತ ಮಾಡಿದ್ದು

ಸಮಾಹಿತ ಇ- ಪತ್ರಿಕೆ ನೀವು ವಿವಿಡ್ಲಿಪಿ ತಾಣದಲ್ಲಿ ಕೊಂಡುಕೊಳ್ಳಬಹುದು

ನಿಮಗಾಗಿ ಆಯ್ದ ಭಾಗ……
…….ವಾಣಿಜ್ಯ ಉದ್ದೇಶವಿಲ್ಲದ ಸಣ್ಣ ಪತ್ರಿಕೆಗಳನ್ನು ನಡೆಸುವವರೆಲ್ಲ ನನಗೆ ಡಾನ್ ಕ್ವಿಗ್ಜೋಟ್‍ನಂತೆ ತೋರುತ್ತಾರೆ. ಈ ಕ್ವಿಗ್ಜೋಟ್ ತನ್ನ ಬಂಟ ಸ್ಯಾಂಕೋ ಪಾಂಜಾನನ್ನು ಕಟ್ಟಿಕೊಂಡು, ರಟ್ಟಿನ ಕವಚವನ್ನು ಧರಿಸಿ, ಕಟ್ಟಿಗೆಯ ಭರ್ಚಿಯೊಂದನ್ನು ಹಿಡಿದು ಜಗತ್ತಿನಲ್ಲಿಯ ಕೆಡುಕನ್ನೆಲ್ಲ ನಿವಾರಿಸುತ್ತೇನೆ ಎಂದು ಹೊರಡುತ್ತಾನಲ್ಲ, ಹಾಗೆ, ಈ ಸಣ್ಣ ಪತ್ರಿಕೆಗಳನ್ನು ನಡೆಸುವವರು. ಇಂಥ ರೋಮ್ಯಾಂಟಿಕ್ ಮನೋಭಾವದವರಲ್ಲದವರು ಈ ಉಜ್ಜುಗಕ್ಕೆ ಇಳಿಯುವುದೇ ಇಲ್ಲ. ಡಾ. ಗಿರಡ್ಡಿಯವರು ನಿರಪೇಕ್ಷದ ಸಮಚಿತ್ತರಾದರೂ, ಕನಸುಗಾರಿಕೆಯನ್ನು ಕಳೆದುಕೊಳ್ಳದವರು; ರೋಮ್ಯಾಂಟಿಕ್ಕರ ಸಾತ್ವಿಕ ಆಶಯ, ನಿಲುವುಗಳನ್ನು ಮಾನ್ಯ ಮಾಡುತ್ತ ಅವುಗಳು ಕಾರ್ಯಗತಗೊಳ್ಳುವ ಕ್ರಿಯಾವಿನ್ಯಾಸದ ಬಗೆಗೆ ಚಿಂತಿಸುವವರು. ಅಂತಲೇ ರೋಮ್ಯಾಂಟಿಕ್ಕರಾದ ಉಳಿದೆಲ್ಲ ನಮಗೆ ಅವರ ನೇತೃತ್ವ. ಅದಕ್ಕೇ ಅವರು `ಸಮಾಹಿತ’ಕ್ಕೆ (ಸಂ+ಆಹಿತ= ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುವುದು) ಅವರು ಪ್ರಧಾನ ಸಂಪಾದಕರು. ಅವರೊಂದಿಗೆ ಇರುವ ಉಳಿದೆಲ್ಲ ನಾವೂ `ನಲ್’ ಪ್ರತಿಪಾದಕರು. ಯಾರೂ ಹೆಚ್ಚಿನವರಲ್ಲ, ಯಾರೂ ಕಡಿಮೆಯವರಲ್ಲ. ಎಲ್ಲರೂ ಡಾನ್ ಕ್ವಿಗ್ಜೋಟನ ಬಳಗದವರು; ನಳನಳಿಸುವ ಹೂವನ್ನು ಕೈಯಲ್ಲಿ ಹಿಡಿದು ಪರಸ್ಪರರಿಗೆ ಅರ್ಪಿಸುತ್ತ, ಎಲ್ಲರಿಗೂ ಸುಖವನ್ನೇ ತರುತ್ತೇವೆ ಎನ್ನುವ ಜನಸಮುದಾಯ ಇರುವ ಸಾಮಾಜಿಕ ಆವರಣವನ್ನು – `ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ; ಭತ್ತ ಗೋಧುವೆ ಹಣ್ಣು ಬಿಟ್ಟ ವೃಂದಾವನ, ಗುಡಿಗೋಪುರಗಳ ಬಂಗಾರ ಶಿಖರ’ – ಎನ್ನುವ ಆವರಣವನ್ನು ಕನಸುತ್ತ – ಅತ್ತ ಕಡೆಗೆ ಚಲಿಸುವ ಯಾವ ಎಲ್ಲ ಹಾದಿಗಳನ್ನು ಹುಡುಕುತ್ತ ನಡೆಯುವವರು!…………

Leave a Reply