ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ – ಸಂವಾದದ ಮುದ್ರಿತ ಭಾಗ

ಬುಧುವಾರ, 23 ನವೆಂಬರ್ 2016 ರಂದು ಧಾರವಾಡದ ಮನೋಹರ ಗ್ರಂಥ ಮಾಲಾದ ಡಾ. ‘ಗಿರಿ’ಯವರ ‘ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ’ ಗ್ರಂಥದ ಲೋಕಾರ್ಪಣೆ ಸಮಾರಂಭದ ಮುದ್ರಿತ ಭಾಗ. ಖ್ಯಾತ ವಿದ್ವಾಂಸರೂ, ವಿಮರ್ಶಕರಾದ ಶ್ರೀ ಜಿ. ಎಚ್. ನಾಯಕ, ಡಾ. ಗಿರಡ್ಡಿ ಗೋವಿಂದರಾಜ, ಶ್ರೀ ಜಿ. ಪಿ. ಬಸವರಾಜು ಮತ್ತು ಶ್ರೀ ಪಂಡಿತಾರಾಧ್ಯರು ವೇದಿಕೆಯಲ್ಲಿದ್ದು ಗ್ರಂಥ ಲೋಕಾರ್ಪಣೆಯ ನಂತರ ಕೃತಿಯ ಬಗ್ಗೆ ಸಂವಾದವೊಂದನ್ನು ನಡೆಸಿಕೊಟ್ಟಿದ್ದಾರೆ. ಕೃತಿಯ ಲೇಖಕರಾದ ಡಾ. ‘ಗಿರಿ’ಯವರು (ಡಾ. ಮಹಾಬಲಗಿರಿ ಎನ್. ಹೆಗಡೆ) ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಬುಧುವಾರ, ಇದೆ ಸಮಾರಂಭದಲ್ಲಿ ‘ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ’ ಇ-ಪುಸ್ತಕ ಆವೃತ್ತಿ ಕೂಡ ಬಿಡುಗಡೆಯಾಗಿದೆ. ‘ಇ-ಪುಸ್ತಕ’ ಓದುಗರು ತಮ್ಮ ಮೊಬಾಯಿಲ್‍ನಲ್ಲಿ ವಿವಿಡ್ಲಿಪಿ ಅಂಡ್ರಾಯಿಡ ಅಪ್ಲಿಕೇಶನ್ ಇಳಿಸಿಕೊಂಡು ವಿಶೇಷ ರಿಯಾಯಿತಿ ದರದಲ್ಲಿ ಖರೀದಿಸಬಹುದು.

ebook-release-of-sahityada-vaignanika-memahansa

Leave a Reply