‘ಬುದ್ಧಿಮಾಂದ್ಯ’ ಎನ್ನುವ ಹಣೆಪಟ್ಟಿಗೆ ಗುರಿಯಾದ ಮಕ್ಕಳ ಕುರಿತು ಅವರ ತಂದೆ–ತಾಯಿ, ಪಾಲಕರು ತಾಳಬೇಕಾದ ಮಾನವೀಯ ಧೋರಣೆ ಏನು ಎಂಬುದನ್ನು ವಿವರಿಸುವ ಪುಸ್ತಕ ಇದು. ಅಷ್ಟೇ ಅಲ್ಲ, ಮಾನವೀಯ ಧೋರಣೆಯ ಜೊತೆಯಲ್ಲೇ ಇಂತಹ ಮಕ್ಕಳ ವಿಚಾರವಾಗಿ ಬೆಳೆಸಿಕೊಳ್ಳಬೇಕಾದ ವಾಸ್ತವ ಆಲೋಚನಾ ಕ್ರಮ ಏನಿರಬೇಕು ಎಂಬುದನ್ನು ವಿವರಿಸುವ ಪ್ರಯತ್ನವನ್ನೂ ಈ ಪುಸ್ತಕದಲ್ಲಿ ಲೇಖಕರಾದ ಡಾ. ಸತೀಶ್ ರಾವ್ ಮತ್ತು ಎನ್.ಆರ್. ಹೆಗಡೆ ಮಾಡಿದ್ದಾರೆ. ಬುದ್ಧಿಮಾಂದ್ಯ ಸ್ಥಿತಿ ಅಂದರೆ ಏನು ಎಂಬುದನ್ನು ವೈಜ್ಞಾನಿಕವಾಗಿ ವಿವರಿಸುವ ಮೂಲಕ ಆರಂಭವಾಗುವ ಈ ಕೃತಿಯು, ಅಂತಹ ಮಕ್ಕಳಿಗೆ ಶಿಕ್ಷಣ ಹೇಗೆ ಕೊಡಿಸಬೇಕು ಎಂಬ ಅಧ್ಯಾಯದತ್ತ ಹೊರಳಿಕೊಳ್ಳುತ್ತದೆ. ಬುದ್ಧಿಮಾಂದ್ಯರಿಗೆ ಮದುವೆಯ ಹೊಣೆಗಾರಿಕೆಗಳನ್ನು ನಿಭಾಯಿಸಲು ಸಾಧ್ಯವೇ ಎನ್ನುವ ಪ್ರಶ್ನೆಯನ್ನೂ ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಬುದ್ಧಿಮಾಂದ್ಯ ಮಕ್ಕಳಿಗೆ ಸಮುದಾಯ ಹೇಗೆ ಬೆಂಬಲಕ್ಕೆ ನಿಲ್ಲಬಹುದು ಎನ್ನುವ ವಿಚಾರದಲ್ಲಿ ಕೆಲವು ಸಲಹೆಗಳು ಇದರಲ್ಲಿವೆ. ಹಾಗೆಯೇ, ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳೇನು, ಅವರಿಗಾಗಿ ಮಾಡಬೇಕಿರುವ ಹಣಕಾಸಿನ ಯೋಜನೆಗಳು ಏನೇನು ಎಂಬುದೂ ಇದರಲ್ಲಿ ಅಡಕವಾಗಿದೆ. ಬುದ್ಧಿಮಾಂದ್ಯರ ವಿಚಾರದಲ್ಲಿ ಸಹಾನುಭೂತಿ ಹೊಂದಿರುವವರಿಗೆ ಈ ಪುಸ್ತಕ ಒಂದು ಪ್ರವೇಶಿಕೆಯಂತೆ ಕೆಲಸ ಮಾಡಬಲ್ಲದು ಡಿಫರೆಂಟ್ಲಿ ಏಬಲ್ಡ್ ಚಿಲ್ಡ್ರನ್ ಲೇ: ಡಾ. ಸತೀಶ್ ರಾವ್, ಎನ್.ಆರ್. ಹೆಗಡೆ
courtsey:prajavani.net
https://www.prajavani.net/artculture/book-review/differently-abled-children-book-review-707206.html
You must log in to post a comment.