ತುಮಕೂರು: ಹಿರಿಯ ಸಾಹಿತಿ ಕೆ.ಬಿ.ಸಿದ್ದಯ್ಯ(65) ಶುಕ್ರವಾರ ಬೆಳಗಿನ ಜಾವ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಇತ್ತೀಚಿನ ಹೆಬ್ಬೂರು ಹೋಬಳಿಯ ಸುಗ್ಗನಹಳ್ಳಿ-ಕೆಂಕೆರೆ ಬಳಿಯ ತಮ್ಮ ತೋಟಕ್ಕೆ ಹೋಗುವಾಗ ಅವರ ಕಾರು ಅಪಘಾತಕ್ಕೀಡಾಗಿತ್ತು. ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಸಿದ್ದಯ್ಯ ಅವರಿಗೆ ತೀವ್ರ ರಕ್ತಸ್ರಾವ ಆಗಿ ಶ್ವಾಸಕೋಶಕ್ಕೆ ಸೋಂಕು ತಗುಲಿತ್ತು. ಇದನ್ನೂ ಓದಿ: ದಲಿತ ಎಂಬುದು ದಾರಿ ತಪ್ಪಿಸುವ ಶಬ್ದ– ಕೆ.ಬಿ.ಸಿದ್ದಯ್ಯ ಸಿದ್ದಯ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸ್ನೇಹಿತರಾಗಿದ್ದರು. ಸಿದ್ದರಾಮಯ್ಯ ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.ಮಧ್ಯಾಹ್ನ ತುಮಕೂರಿಗೆ ಪಾರ್ಥಿವ ಶರೀರವನ್ನು ತರಲಾಗುವುದು. ಟೌನ್ ಹಾಲ್ ಬಳಿ ಸಾರ್ವಜನಿಕರ ಅಂತಿಮ ದರ್ಶನಕ್ಕಿಡಲಾಗುವುದು. ಸಂಜೆ ತೋಟದಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಸಿದ್ದಯ್ಯ ಅವರ ಆಪ್ತರು ತಿಳಿಸಿದ್ದಾರೆ.
courtsey:prajavani.net
https://www.prajavani.net/district/tumakuru/kb-siddaiah-dead-tumkur-sahiti-674734.html
You must log in to post a comment.