ಕವಿತೆ- ಎದೆಯ ಸೀಳಿದರೆ

ನಿಜ ನಿಮ್ಮೆದೆಯ ಸೀಳಿದರೆ ಪುತಪುತನೆ ಹೊಮ್ಮುವುವು ತಮಾನಗಳಿಂದ ಹುಗಿದಿಟ್ಟ ಬಣ್ಣ ಬಣ್ಣದ ಅಕ್ಷರ ಯಾರೂ ತಿಳಿಯಬಾರದೆಂದು ನಿಮ್ಮೊಳಗೆ ನೀವೇ ಆಡಿಕೊಂಡಿರಿ ತಿಳಿವ ತಿಳಿಯದೇ ನಾವು ಮೂಕರಾದಾಗ ನಿಮ್ಮದೇ ಸನ್ನೆಯಲಿ ಮಕ್ಕಾರು ಮಾಡಿದಿರಿ ನಿಮ್ಮ ಒಂದೊಂದು ಹೂಂಕಾರಕ್ಕೂ ಬಾಜಾ ಬಜಂತ್ರಿ ಚೆಂಡೆ ಮದ್ದಳೆ ಅಬ್ಬರ ಆಗಾಗ ನೂರು ನೂರು ದಿಗಿಣ ಭಕ್ತಗಣ ಮೇಳ ತನ್ಮಯದಿ ಭಜಿಸುವಾಗ ನಿಮ್ಮೆದೆಯ ಅಕ್ಕರವ ನೀವು ಉಚ್ಚರಿಸಿದಿರೋ ಬಿಟ್ಟಿರೋ ಅಂತೂ ತುಟಿಯ ಅಲುಗಿಸಿದಿರಿ ಹೊಸಿಲಾಚೆ ಗುಡಿಯಾಚೆ ಊರಾಚೆ ನಿಂತ ನಾವು ನೀವು ತುಟಿ ಅಲುಗಿಸಿದ್ದನ್ನೇ ಕರುಣೆಯೆಂದರಿತಿದ್ದೆವು ಎದೆಯಿಂದ ಹೊರಬಿದ್ದ ಅಕ್ಕರಗಳಿಗೆ ರೂಪ ರಸ ಗಂಧ ನೀಡಿ ಹೊನ್ನ ಸಂದೂಕದಲಿ ಕಾಪಿಟ್ಟು ತಲೆಮಾರುಗಳಿಗೆ ನೀಡಿದಿರಿ ನೀವು ಅಂದದ್ದು ಅಪ್ಪಂತ ಮಾತು ನಮ್ಮೆದೆಯ ಸೀಳಿದರೆ ಒಂದೇ ಒಂದು ಅಕ್ಕರವಿಲ್ಲ ಎಲ್ಲ ಕಲಸು ಮೇಲೋಗರಗೊಳಿಸುವ ಬ್ರಹ್ಮ ವಿದ್ಯೆಯು ಇಲ್ಲ ಶಬ್ದ ಅರ್ಥ ಸಂಕೇತಗಳ ಕಗ್ಗ ಹೊಸೆದವರಲ್ಲ ಎಲ್ಲರೊಡನೊಂದಾಗಿ ಎಲ್ಲರಿಗೆ ದನಿಯಾಗಿ ಎದೆಯೊಳಗೆ ಹಾಡ ಹೊತ್ತವರು ನಮ್ಮೆದೆಯ ಸೀಳಿದರೆ ಹೊಮ್ಮುವುದು ಹಾಲಾಹಲವಲ್ಲ ಹಾಲು ಜೇನಿನಂತಿರುವ ಹಾಡು.

author- ಪಿ.ಬಿ. ಪ್ರಸನ್ನ

courtsey:prajavani.net

https://www.prajavani.net/artculture/poetry/p-b-prasanna-poem-700085.html

Leave a Reply