ಕವಿವಿ ವರ್ಕಶಾಪ್ ಸುತ್ತ ಮುತ್ತ

ವಿಶಾಲವಾದ ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿ ಹತ್ತಾರು ಕಟ್ಟಡಗಳು, ವಿಭಾಗಗಳು ಎಲ್ಲೆಡೆ ಕಾಣಸಿಗುತ್ತವೆ. ನಿತ್ಯವೂ ಅವುಗಳ ಎದುರಲ್ಲೇ ಸಂಚರಿಸಿದರೂ, ಎಷ್ಟೋ ವಿಭಾಗಗಳು, ಕಟ್ಟಡಗಳು ಎಲ್ಲಿವೆ? ಏನು ಕಾರ್ಯ ಮಾಡುತ್ತವೆ? ಎಂಬುದರ ಬಗ್ಗೆ ಬಹಳಷ್ಟು ಜನರಿಗೆ ಅರಿವಿಲ್ಲ. ಅಂತಃ ಒಂದು ವಿಭಾಗದ ಪರಿಚಯಇಲ್ಲಿದೆ.
ಕವಿವಿ ಮುಖ್ಯಕಟ್ಟಡದ ಹಿಂಭಾಗ, ಪ್ರಾಣಿಶಾಸ್ತ್ರ ವಿಭಾಗದ ಪಕ್ಕದಲ್ಲಿ ವರ್ಕಶಾರ್ಪ ವಿಭಾಗವಿದೆ. ಬಹುತೇಕರು ಈ ವಿಭಾಗದಕುರಿತು ಮೊದಲೆಲ್ಲೂ ಕೇಳಿರಿವುದಕ್ಕೆ ಸಾಧ್ಯವಿಲ್ಲ. ವಿಜ್ಞಾನದ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಸಾಮಾನ್ಯವಾಗಿಇಲ್ಲಿ ಆಗಾಗ ಬಂದು ಹೋಗುತ್ತಾರೆ. ಕರ್ನಾಟಕ ವಿಶ್ವವಿದ್ಯಾಲಯದ ವೈಜ್ಞಾನಿಕಕಾರ್ಯಾಗಾರವೇ ಈ ವರ್ಕಶಾಪ್. ಹೆಮ್ಮೆಯ ವಿಷಯವೆನೆಂದರೆ, ಇಡೀಕರ್ನಾಟಕದಲ್ಲಿಯಾವ ವಿಶ್ವವಿದ್ಯಾಲಯದಲ್ಲೂ ಈ ರೀತಿ ವರ್ಕಶಾಪ್ ಕಾಣಸಿಗುವುದಿಲ್ಲ. ಸರಿಸುಮಾರು57 ವರ್ಷಗಳಿಂದ ವರ್ಕಶಾಪ್ ವಿಶ್ವವಿದ್ಯಾಲಯದಲ್ಲಿಕಾರ್ಯನಿರ್ವಹಿಸುತ್ತಿದೆ.
ಏನಿದು ವರ್ಕಶಾಪ್? ಏನಿದರ ಕೆಲಸ ಕಾರ್ಯಗಳು? ಬಹಳಷ್ಟು ಜನರಿಗೆ ಪ್ರಶ್ನೆ ಮೂಡುತಿರಬಹುದು. ಅದಕ್ಕೆಉತ್ತರಇಲ್ಲಿದೆ. ಕವಿವಿ ಮುಖ್ಯಕಟ್ಟಡದ ಮೇಲಿರುವಗಡಿಯಾರ ನಾವು ನೋಡಿದ್ದೇವೆ. ಅದರ ನಿರ್ವಹಣೆಕಾರ್ಯ ವರ್ಕಶಾಪ್‍ಅಧಿನದಲ್ಲಿ ಬರುತ್ತದೆ. ಗಡಿಯಾರದ ನಿತ್ಯವೂ ನಡೆಯುವುದಕ್ಕೆಕಾರಣ ಪ್ರತಿನಿತ್ಯ ವರ್ಕಶಾಪ್ ವಿಭಾಗದ ಸಿಬ್ಬಂದಿ ಅಲ್ಲಿ ಹೋಗಿ ಚಾವಿ ಕೊಡುತ್ತಾರೆ. 1962 ರಲ್ಲಿ ಆಗಿನ ಉಪಕುಲಪತಿಗಳಾದ ರ್ಯಾಂಗ್ಲರ್ ಡಿ.ಸಿ. ಪಾವಟೆಅವರುಇಂಗ್ಲೆಂಡ್‍ನಿಂದ ಈ ಟವರ್‍ಕ್ಲಾಕ್‍ನನ್ನುಆಮದು ಮಾಡಿಸಿಕೊಂಡಿದ್ದರು. ಬಾಂಬೆಯಟೈಮ್‍ಕಂಟ್ರೋಲ್ ಸಂಸ್ಥೆಯವರುಇದನ್ನು ಅಳವಡಿಸಿದ್ದರು.ಇದು ಸಂಪೂರ್ಣ ಹಸ್ತ ಚಾಲಿತವಾಗಿದ್ದು, ಖರೀದಿಸಿ ಐವತ್ತು ವರ್ಷಗಳ ಮೇಲಾದರೂಇನ್ನೂಚಾಲ್ತಿಯಲ್ಲಿರುವುದು ಆಗಿನ ಕಾಲದತಂತ್ರಜ್ಞಾನಗುಣಮಟ್ಟವನ್ನುತೋರಿಸುತ್ತದೆ. ಪ್ರತಿ 24 ಗಂಟೆಗಳಿಗೊಮ್ಮೆ ಅರ್ಥಾತ್ ದಿನಕ್ಕೊಮ್ಮೆ ವರ್ಕಶಾಪ್‍ನ ಸಿಬ್ಬಂದಿ ಮುಖ್ಯಕಟ್ಟಡದಎರಡನೇ ಮಹಡಿಯಿಂದ 15 ಅಡಿ ಎತ್ತರವಿರುವಟವರ್‍ಗೆ 344 ಮೆಟ್ಟಿಲು ಹತ್ತಿ, ಹೋಗಿ ಗಡಿಯಾರಕ್ಕೆ ಚಾವಿ ಕೊಟ್ಟು ಬರುತ್ತಾರೆ. ಒಮ್ಮೆ ಚಾವಿ ತಿರುಗಿಸಿ ಸಮಯ ಹೊಂದಿಸಿದರೆ, ಗಡಿಯಾರ 24 ಗಂಟೆಗಳ ಕಾಲ ಕೆಲಸ ಮಾಡುತ್ತದೆ.ಆಕರ್ಷಕ ಸಂಗತಿಎಂದರೆ,ಇಡೀಧಾರವಾಡದಲ್ಲಿ, ಎರಡನೇಅತಿಎತ್ತರದಟವರ್‍ಇದಾಗಿದೆ. (ಮೊದಲನೇದುಆಕಾಶವಾಣಿ ಸಿಗ್ನಲ್ ಟವರ್). ಇನ್ನೂಆಕರ್ಷಕ ಸಂಗತಿಯೆಂದರೆ, ಇದನ್ನು ಕೇವಲ ಒಂದು ಸಾವಿರರೂಪಾಯಿಜೊತೆಗೆಇಪ್ಪತ್ತು ವರ್ಷ ವಾರಂಟಿಯೊಂದಿಗೆಇಂಗ್ಲೆಂಡ್‍ನಿಂದಖರೀದಿಸಲಾಗಿತ್ತು.
ಟವರ್‍ಕ್ಲಾಕ್ ಪಕ್ಕದಲ್ಲೇ ಪಂಚಲೋಹದಗಂಟೆಯಿದೆ. 1962ರಲ್ಲಿ ಇಂಗ್ಲೆಂಡ್‍ನಿಂದ ಈ ಬೆಲ್‍ತರಿಸಲಾಗಿದ್ದು, 550 ಕೆ.ಜಿ. ತೂಕವಿದೆ. ಮುಂಚೆ ಇದನ್ನು ಬಳಸುವಾಗ, ಇದರ ಸದ್ದು, ಮೂರುಕಿಲೋಮಿಟರ್ ವ್ಯಾಪ್ತಿಯವರೆಗೂ ಕೇಳಿಸುತಿತ್ತು. ನಂತರ ತರಗತಿಗಳಿಗೆ ತೊಂದರೆಯಾಗುವಕಾರಣ ಈ ಬೆಲ್‍ಕಾರ್ಯ ಸ್ಥಗಿತಗೊಳಿಸಲಾಗಿದೆ.
ಇದಲ್ಲದೇ ವರ್ಕಶಾಪ್ ವಿಭಾಗದಲ್ಲಿ 1965ರಲ್ಲಿಅಮೇರಿಕಾದಿಂದಆಮದು ಮಾಡಿಕೊಂಡಎರಡು ಮೂರು ಮೆಷಿನ್‍ಗಳಿವೆ. ಸ್ನೇಹದ ಸಂಕೇತವಾಗಿ ಆಗಿನ ಅಮೇರಿಕಾ ಸರ್ಕಾರ ಭಾರತೀಯರಿಗೆ ಈ ಮೆಷಿನ್‍ಗಳನ್ನು ನೀಡಿದ್ದಾರೆ ಎಂಬ ಉಲ್ಲೇಖಈ ರೀತಿಇದೆ : : The equipment is presented by the government of United States of America as an expression of friendship and goodwill by the people by United States towards the people of India.
ವರ್ಕಶಾಪ್‍ನಲ್ಲಿ ಲಿಫ್ಟ್‍ಕಾರ್ಯ ನಿರ್ವಹಣೆ, ಕವಿವಿ ವಾಹನಗಳಾದ ಕುಲಪತಿ, ಕುಲಸಚಿವರ ಕಾರ್‍ಗಳು, ಪರೀಕ್ಷಾ ವಿಭಾಗದಟೆಂಪೊ, ಎರಡು ಟ್ರ್ಯಾಕ್ಟರ್‍ಗಳ ಸರ್ವಿಸಿಂಗ್, ವಿಜ್ಞಾನ ವಿದ್ಯಾರ್ಥಿಗಳ ಪ್ರಯೋಗಗಳಿಗೆ, ಪ್ರಯೋಗಾಲಯಕ್ಕೆ ಬೇಕಾದ ವೈಜ್ಞಾನಿಕ ಉಪಕರಣಗಳ ರಿಪೇರಿಗಳ ಸೇವೆಯನ್ನು ಈ ವರ್ಕಶಾಪ್‍ಒದಗಿಸುತ್ತದೆ. ಇದಲ್ಲದೆಡ್ರಿಲ್ಲಿಂಗ್, ವಿದ್ಯುತ್ ಕಾರ್ಯಗಳು, ರಿಪೇರಿ ಉಪಕರಣಗಳ ಶಾರ್ಪನಿಂಗ್, ಗ್ಯಾಸ್‍ಕಟ್ಟಿಂಗ್, ಶೇಪಿಂಗ್‍ಇತ್ಯಾದಿ ಕಾರ್ಯಗಳನ್ನು ಸಹ ಕೈಗೊಳ್ಳುತ್ತದೆ. ಇಲ್ಲಿರುವಗ್ರೈಡಿಂಗ ಮೆಷಿನ್ ಅತ್ಯಂತ ವಿಶೇಷವಾಗಿದೆ. ಒಮ್ಮೆಅದನ್ನು ಶುರು ಮಾಡಿದರೆ, ಒಂದು ನಿಮಿಷಕ್ಕೆ 2800 ಬಾರಿ ಸುತ್ತುತ್ತದೆ. ಮೆಷಿನ್ ಬಂದ ಮಾಡಿದ ಮೇಲು, ಅದರಚಕ್ರ ನಿಲ್ಲಲು ಬರೊಬ್ಬರಿ ಮೂರು ನಿಮಿಷ ಬೇಕು. ಕೇವಲ ಕವಿವಿ ವಿದ್ಯಾರ್ಥಿಗಳಲ್ಲದೇ, ಸಂಶೋಧಕರು,ಐಟಿಐ, ಎನ್‍ಟಿಟಿಎಫ್, ಡಿಪ್ಲೊಮಾ ವಿದ್ಯಾರ್ಥಿಗಳು ಆಗಾಗ ಇಲ್ಲಿ ಭೇಟಿಕೊಟ್ಟು ಪ್ರಾಯೋಗಿಕಕಲಿಕೆಯಜ್ಞಾನ ಪಡೆಯುತ್ತಾರೆ.
ಸದ್ಯ ವರ್ಕಶಾಪ್ ವಿಭಾಗದಲ್ಲಿಐದಾರು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಗಳಾದ ಗಿರೀಶಗೋಡಖಿ, ಬಡಿಗೇರ, ಎಮ್.ಎ. ಚೋಕಿದಾರ, ಟಿ.ಡಿ. ತಾಳಿಕೋಟಿ ಸೇರಿದಂತೆಇತರರು ಸಂಪೂರ್ಣ ವರ್ಕಶಾಪ್ ಕಾರ್ಯಗಳನ್ನು ಗಮನಿಸುತ್ತಾರೆ. ಇಡೀರಾಜ್ಯದಲ್ಲೇ ಈ ರೀತಿಯ ವೈಜ್ಞಾನಿಕ ವರ್ಕಶಾಪ್ ಕೇವಲ ಕರ್ನಾಟಕ ವಿಶ್ವವಿದ್ಯಾಲಯದಲ್ಲಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ.

ಚಿತ್ರಗಳು
1. ಕವಿವಿ ಕ್ಲಾಕ್‍ಟವರ್
2. ಕ್ಲಾಕ್‍ಟವರ್‍ನ ಒಳ ನೋಟ
3. 550 ಕೆಜಿಯ ಪಂಚಲೋಹದಗಂಟೆ
4. ಸಿಬ್ಬಂದಿಯ ಕಾರ್ಯ ವೈಖರಿ
5. ಅಮೇರಿಕಾ ಸರ್ಕಾರದಿಂದ ಪಡೆದ ಮೆಷಿನ್ ಮೇಲಿನ ಉಲ್ಲೇಖ

Leave a Reply