ಮಕ್ಕಳ ಪದ – ವ್ಯಾಕರಣ ಕಲಿಯೋಣ

ಬಾರೇ ಗೆಳತಿ ಬಾರೇ ಗೆಳತಿ ಕನ್ನಡ ವ್ಯಾಕರಣ ಕಲಿಯೋಣ ಕನ್ನಡದ ಸ್ವರ ಸಂಧಿಗಳು ಹೇಗಿವೆ ಎಂದು ತಿಳಿಯೋಣ ಕನ್ನಡ ಸ್ವರ ಸಂಧಿಗಳಲ್ಲಿ ಇರುವವು ಮೂರು ಬಗೆಗಳು ಲೋಪ, ಆಗಮ, ಆದೇಶ ಎಂಬ ಮೂರು ಸಂಧಿಗಳು ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವಪದದ ಕೊನೆ ಸ್ವರವು ಲೋಪವಾಗುವಾಗಅದುವೇ ನೋಡು ಲೋಪಸಂಧಿ ಮೊದಲನೇ ಕನ್ನಡ ಸ್ವರ ಸಂಧಿ ನೋಡಲ್ಲಿ, ಹಾಡಲ್ಲಿ, ಕೇಳಲ್ಲಿ, ಹೇಳಲ್ಲಿ ಉದಾಹರಣೆಗಳ ತಿಳಿಯಿಲ್ಲಿ ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಉತ್ತರ ಪದದಿ ಮೊದಲ ಅಕ್ಷರ ಹೊಸದಾಗಿ ಬರುವಾಗ ಅದುವೇ ನೋಡು ಆಗಮಸಂಧಿ ಎರಡನೇ ಕನ್ನಡ ಸ್ವರ ಸಂಧಿ ಮನೆಯನ್ನು, ಶಾಲೆಯನ್ನು, ನೆಲವನ್ನು, ಹೊಲವನ್ನು ಉದಾಹರಣೆಗಳ ಕಲಿಯಿನ್ನು ಸ್ವರದ ಮುಂದೆ ಸ್ವರವು ಬಂ ಸಂಧಿಯಾಗುವಾಗ ಉತ್ತರ ಪದದಿ ಕ, ತ, ಪಗಳಿಗೆ ಗ, ದ, ಬ ಬರುವಾಗ ಅದುವೇ ನೋಡು ಆದೇಶ ಸಂಧಿ ಮೂರನೇ ಕನ್ನಡ ಸ್ವರ ಸಂಧಿ ಹಳೆಗನ್ನಡ, ಹೊಸಗನ್ನಡ, ಬೆಟ್ಟದಾವರೆ, ಕಂಬನಿ ಉದಾಹರಣೆಗಳ ತಿಳಿ ಬಾ ನೀ ಬಾರೇ ಗೆಳತಿ ಬಾರೇ ಗೆಳತಿ ಕನ್ನಡ ವ್ಯಾಕರಣ ಕಲಿಯೋಣ ಕನ್ನಡ ಸ್ವರ ಸಂಧಿಗಳ ಕಲಿತು ನಲಿಯುತ ಕುಣಿ ಕುಣಿದಾಡೋಣ.

author-ಶರಣು ಜಿ. ಚಟ್ಟಿ

courtsey:prajavani.net

https://www.prajavani.net/artculture/poetry/makkala-kavana-vyakarana-666479.html

Leave a Reply