Your Cart

Need help? Call +91 9535015489

📖 Print books shipping available only in India. ✈ Flat rate shipping

ಮಕ್ಕಳಿಗೆ ಪ್ರೇರಣೆ – ಅಜೀಂ ಪ್ರೇಮ್‌ಜಿ

ದುಡಿಯಬೇಕು, ದುಡಿದು ಉಣ್ಣಬೇಕು ಎಂಬುದು ತಲೆಮಾರುಗಳಿಂದ ಬಂದಿರುವ ಮೌಲ್ಯ. ದುಡಿದಿದ್ದರಲ್ಲಿ ಒಂದಿಷ್ಟನ್ನು ಇಲ್ಲದವರಿಗೆ ದಾನವಾಗಿ ಕೊಡಬೇಕು ಎಂಬುದು ನಮ್ಮ ಪರಂಪರೆ ಕಲಿಸಿದ ಇನ್ನೊಂದು ಮೌಲ್ಯ. ಈ ಮೌಲ್ಯವನ್ನು ಪಾಲಿಸಿದವರ ಸಾಲಿನಲ್ಲಿ ಮಿನುಗುವ ನಕ್ಷತ್ರದಂತೆ ಕಾಣಿಸುವವರು ವಿಪ್ರೊ ಕಂಪನಿಯ ಮುಖ್ಯಸ್ಥ ಅಜೀಂ ಪ್ರೇಮ್‌ಜಿ. ಇವರು ಭಾರತದ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಮೀಸಲಿಟ್ಟ ಹಣದ ಒಟ್ಟು ಮೌಲ್ಯ 1.45 ಲಕ್ಷ ಕೋಟಿ! ಇಷ್ಟೊಂದು ಮೊತ್ತವನ್ನು ಇತರರಿಗಾಗಿ ಮೀಸಲಿಟ್ಟವರ ಭಾರತೀಯರ ಸಾಲಿನಲ್ಲಿ ಅಜೀಂ ಪ್ರೇಮ್‌ಜಿ ಅವರಿಗೆ ಅವರೇ ಸಾಟಿ! ‘ಶ್ರೀಮಂತನಾಗಿರುವುದು ನನಗೆ ಥ್ರಿಲ್ ಕೊಡುವ ಸಂಗತಿಯೇನೂ ಅಲ್ಲ’ ಎಂದು ಒಮ್ಮೆ ಹೇಳಿದ್ದ ಪ್ರೇಮ್‌ಜಿ ಅವರಿಗೆ ಕೊಡುವುದರಲ್ಲೇ ಹೆಚ್ಚು ಸುಖ. ‘ಹಣವಂತರು, ಹಣ ಇಲ್ಲದವರಿಗಾಗಿ ಒಂದಿಷ್ಟನ್ನು ದಾನವಾಗಿ ಕೊಡಬೇಕು’ ಎಂಬುದು ಅವರ ಬದುಕಿನ ಧ್ಯೇಯವೂ ಹೌದು.

courtsey:prajavani.net

https://www.prajavani.net/artculture/article-features/childrens-day-azim-premji-680441.ht

Leave a Reply