ತಿಳಿ ಭಾಷೆಯ ಸಂವಾದ

ಕರ್ನಾಟಕದ ಕರಾವಳಿಯ ಮರವಂತೆಯಲ್ಲಿ ಹುಟ್ಟಿ, ಬೆಳೆದು ಈಗ ಇಂಗ್ಲೆಂಡಿನಲ್ಲಿ ನೆಲೆಸಿರುವ ಬರಹಗಾರ ಯೋಗೀಂದ್ರ ಮರವಂತೆ. ಅವರು ಪ್ರಜಾವಾಣಿ ಸೇರಿ ನಾಡಿನ ಪತ್ರಿಕೆಗಳಿಗೆ ಬರೆದ ಬರಹಗಳ ಸಂಕಲನ ‘ಲಂಡನ್ ಡೈರಿ – ಅನಿವಾಸಿಯ ಪುಟಗಳು’ ಪುಸ್ತಕ. ಲೇಖಕರಲ್ಲಿ ಪತ್ರಕರ್ತನ ಮನಸ್ಸೊಂದು ಇದೆ ಎಂಬುದಕ್ಕೆ ಉದಾಹರಣೆ, ‘ಪಂಚತಂತ್ರವಾದ ಪ್ರಜಾತಂತ್ರ’ ಬರಹ. ಇದು ಬ್ರೆಕ್ಸಿಟ್‌ಗಾಗಿ ನಡೆದ ಜನಮತ ಗಣನೆಯ ಮುಂಚಿನ ಹಾಗೂ ಆಚಿನ ವಿದ್ಯಮಾನಗಳನ್ನು ಸಂಕಲಿಸುವ ಯತ್ನ. ಇದರಲ್ಲಿ ಇಂಗ್ಲೆಂಡಿನ ಪ್ರಜಾತಂತ್ರದ ಹಿರಿಮೆಯ ವರ್ಣನೆ ಇದೆ. ಅಲ್ಲಿ ರಾಜಕಾರಣಿಗಳು ರಾಜಕಾರಣವನ್ನೂ ಎಷ್ಟು ವೃತ್ತಿಪರರವಾಗಿ ಸ್ವೀಕರಿಸಿರುತ್ತಾರೆ ಎಂಬುದರ ವಿವರಣೆ ಇದೆ. ಲೇಖಕರು ಇಂಗ್ಲೆಂಡಿನ ರಾಜಕಾರಣವನ್ನು ಭಾರತದ ರಾಜಕಾರಣದ ಜೊತೆ ಸಮೀಕರಿಸುವ ಯತ್ನ ನಡೆಸದಿದ್ದರೂ, ಓದುಗನಲ್ಲಿ ‘ಅಲ್ಲಿ ಅಷ್ಟು ಚೆನ್ನಾಗಿರುವುದು, ನಮ್ಮಲ್ಲಿ ಏಕೆ ಹೀಗೆ’ ಎಂಬ ಪ್ರಶ್ನೆಯನ್ನು ಮೂಡಿಸುವಷ್ಟು ಶಕ್ತವಾಗಿದೆ. ತಿಳಿಮನಸ್ಸಿನಲ್ಲಿ ಬರಹಗಾರನೊಬ್ಬ ಅಷ್ಟೇ ತಿಳಿಯಾದ ಭಾಷೆಯಲ್ಲಿ ನಡೆಸಿದ ಸಂವಾದಗಳಂತೆ ಇವೆ ಇಲ್ಲಿನ ಬರಹಗಳು.

courtsey:prajavani.net

https://www.prajavani.net/artculture/book-review/samvada-book-reveav-668129.html

Leave a Reply