ಪುರಂದರ ತ್ಯಾಗರಾಜ ಕನಕದಾಸರ ಆರಾಧನಾ ಮಹೋತ್ಸವ ವೈಭವ

ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ ವತಿಯಿಂದ ಪುರಂದರ–ತ್ಯಾಗರಾಜರ–ಕನಕದಾಸರ ಆರಾಧನಾ ಮಹೋತ್ಸವ, ಶ್ರೀ ವ್ಯಾಸ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ಶ್ರೀ ಗುರು ರಾಘವೇಂದ್ರ ಸಂಸ್ಮರಣ ಪ್ರಶಸ್ತಿ ಹಾಗೂ ಹಿರಿಯ ಸಾಹಿತಿ ಬೆಳಗೆರೆ ಮಹಾಲಕ್ಷ್ಮಮ್ಮ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರುವರಿ 26 ರಿಂದ 29ರವರೆಗೆ ನಡೆಯಲಿದೆ. ಫೆ. 26ರಂದು ಬುಧವಾರ ವಿದ್ಯಾಸಾಗರ ಮಾಧವ ತೀರ್ಥರು ಹಾಗೂ ವಿದ್ಯಾಸಿಂಧು ಮಾಧವ ತೀರ್ಥರ ಸಾನ್ನಿಧ್ಯದಲ್ಲಿ ಪುರಂದರದಾಸರ ಆರಾಧನಾ ಮಹೋತ್ಸವ ನಡೆಯಲಿದೆ. ಸಂಜೆ 5ಕ್ಕೆ ಕಮಲಾ ಶ್ರೀನಿವಾಸ್‌ ಮತ್ತು ತಂಡದವರಿಂದ ದಾಸಾಮೃತ ಸಂಗೀತ ಕಾರ್ಯಕ್ರಮ, ಸಂಜೆ 6.45ಕ್ಕೆ ರಾಗಿಗುಡ್ಡ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನದ ಸ್ಥಾಪಕ ಶ್ರೀನಿವಾಸ್‌ ಅವರಿಗೆ ‘ವ್ಯಾಸ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ನಿವೃತ್ತ ನ್ಯಾಯಮೂರ್ತಿ ವೆಂಕಟಾಚಲಯ್ಯ ಮತ್ತು ಹಿರಿಯ ಕಲಾವಿದ ಡಾ. ಆರ್‌.ಕೆ ಪದ್ಮನಾಭ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಂ.ವಿ. ಗುರುರಾಜ್ ಹಾಗೂ ಜಿ.ಎಸ್‌. ಪ್ರಕಾಶ್ ಅವರಿಗೆ ವಿಶೇಷ ಗೌರವ ಸನ್ಮಾನವಿದೆ. ಫೆ. 27 ರಂದು ಗುರುವಾರ ಸಂಜೆ 5.30ಕ್ಕೆ ಶ್ರೀ ಕನಕದಾಸರ ಆರಾಧನಾ ಮಹೋತ್ಸವ ನಡೆಯಲಿದೆ. ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್‌, ಪತ್ರಕರ್ತರಾದ ಡಾ. ಕೂಡ್ಲಿ ಗುರುರಾಜ್, ರವಿ ಹೆಗಡೆ, ಸುದರ್ಶನ್ ಚನ್ನಂಗಿಹಳ್ಳಿ ಅವರಿಗೆ ‘ಶ್ರೀ ಗುರುರಾಘವೇಂದ್ರ ಸಂಸ್ಮರಣಾ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಮುಖ್ಯ ಅತಿಥಿಗಳಾಗಿ ಹಿರಿಯ ಗಾಯಕ ಡಾ. ಆರ್‌.ಕೆ. ಪದ್ಮನಾಭ, ಡಾ. ಗರುಡಾಚಾರ್, ಡಾ.ಎನ್.ಸಂತೋಷ್‌ ಹೆಗ್ಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ ಭಾಗವಹಿಸಲಿದ್ದಾರೆ. ಧರಣಿ ಕಶ್ಯಪ್ ಮತ್ತು ತಂಡದಿಂದ ‘ಮಂಡೋದರಿ ಕಲ್ಯಾಣ’ ನಾಟಕ ರೂಪಕ, ಕೂಚಿಪುಡಿ ನಾಟಕ ಹಾಗೂ ಭರತನಾಟ್ಯ ಪ್ರದರ್ಶವಿದೆ. ಫೆ. 28ರಂದು ಶುಕ್ರವಾರ ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ ನಡೆಯಲಿದೆ.ಸಂಜೆ 5.30ಕ್ಕೆ ಮೃದಂಗ ವಾದಕ ಸಿ. ಚೆಲುವರಾಜು ಅವರಿಗೆ ‘ಕನಕ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಿ.ಎನ್ ಚಂದ್ರಶೇಖರ್‌ ಅವರ ಪಿಟೀಲು, ಸಿ. ಚೆಲುವರಾಜು ಅವರ ಮೃದಂಗ, ಎನ್.ಗುರುಮೂರ್ತಿ ಅವರ ಘಟ ವಾದನದೊಂದಿಗೆ ಆರ್‌. ಚಂದ್ರಿಕಾ ಅವರಿಂದ ‘ತ್ಯಾಗವೈಭವಂ’ ಸಂಗೀತ ಕಾರ್ಯಕ್ರಮ ನಡೆಯಲಿದೆ. ಫೆ. 29ರಂದು ಶನಿವಾರ ಸಂಜೆ 5.30ಕ್ಕೆ ಹಿರಿಯ ಸಾಹಿತಿ ಎಸ್. ಬೆಳಗೆರೆ ಮಹಾಲಕ್ಷ್ಮಮ್ಮ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದೆ. ದಿವಂಗತ ಬೆಳೆಗೆರೆ ಪದ್ಮಾಕ್ಷಮ್ಮ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಅವರ ಪುತ್ರ ಬೆಳಗೆರೆ ಮುರಳೀಧರ ಶಾಸ್ತ್ರಿ ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಯೋಗರಾಜ್‌ ಶಾಸ್ತ್ರಿ ಹಾಗೂ ಹಿರಿಯ ಗಾಯಕ ಆರ್.ಕೆ ಪದ್ಮನಾಭ ಅಧ್ಯಕ್ಷತೆ ವಹಿಸಲಿದ್ದಾರೆ. ಅಕ್ಷತಾ ಉಪಾಧ್ಯಾಯ ಅವರಿಂದ ಬೆಳಗೆರೆ ಮಹಾಲಕ್ಷ್ಮಮ್ಮ ಅವರು ರಚಿಸಿದ ಪದ್ಯಗಳ ಗಾಯನ ಕಾರ್ಯಕ್ರಮವಿದೆ. ಪುರುಷೋತ್ತಮ್‌ ಅವರು ಕೀರ್ಬೋಡ್‌, ಅನಂತರಾಜ್‌ ಅವರು ತಬಲಾ ನುಡಿಸಲಿದ್ದಾರೆ. ಕೆ.ಎನ್. ಉಷಾದೇವಿ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದು ಪ್ರತಿಷ್ಠಾನದ ಗೌರಿ ನಾಗರಾಜ್‌, ನಾಗರಾಜ್‌ ಮತ್ತು ವೀಣಾ ಸುರೇಶ್‌ ತಿಳಿಸಿದ್ದಾರೆ. ಸ್ಥಳ: ರಾಗೀಗುಡ್ಡದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನ, ಸಾಂಸ್ಕೃತಿಕ ಮಂದಿರ, 9ನೇ ಬ್ಲಾಕ್, ಜಯನಗರ.

author – ಹರವು ಸ್ಫೂರ್ತಿ

courtsey:prajavani.net

https://www.prajavani.net/artculture/music/music-707970.html

Leave a Reply