Sumathi Krishnamoorthy

Sumathi Krishnamoorthy

ಸುಮತಿ ಕೃಷ್ಣಮೂರ್ತಿ ಪ್ರಸ್ತುತ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ನಿವಾಸಿ. ತಾಂತ್ರಿಕ ಶಿಕ್ಷಣದಲ್ಲಿ ಡಿಪ್ಲೊಮಾ ಪಡೆದಿದ್ದಾರೆ .
ಕನ್ನಡ ವ್ಯಾಕರಣ ತಿಳಿಯದ ಕೇವಲ ಭಾವಗಳ ಯಾನದಲ್ಲಿ ಸಂಚರಿಸುವ ಹವ್ಯಾಸಿ ಕವಯಿತ್ರಿ. ಕನ್ನಡ ಅಕ್ಷರಗಳ ಬೃಹತ್ ಪ್ರೇಮಿ.
ಓದು ಇವರ ನಿರಂತರ ಹಸಿವು.
ಆಗಾಗ್ಗೆ ಒಂದಷ್ಟು ಸ್ಥಳೀಯ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದು ಇತ್ತೀಚಿನ ಕೆಲವು ಕವಿತೆಗಳು YouTube channel ನಲ್ಲಿ ಹಾಡಾಗಿ ಹರಿದಿವೆ.
ಇತ್ತೀಚೆಗಷ್ಟೇ ಪ್ರಥಮ ಕವನ ಸಂಕಲನ ಹೆಣ್ಣಾಲದ ಮರ ಹಿರಿಯ ಸಾಹಿತಿ HSV ಅವರು ಲೋಕಾರ್ಪಣೆ ಮಾಡಿದ್ದು, ಮುನ್ನುಡಿಯನ್ನು ಸಹ ಅವರೇ ಬರೆದಿದ್ದಾರೆ. ಶ್ರೀಯುತ ಸತ್ಯೇಶ್ ಬೆಳ್ಳೂರು ಅವರು ಬೆನ್ನುಡಿ ಬರೆದು ಹಾರೈಸಿದ್ದಾರೆ.
ನೆಮ್ಮದಿಗಾಗಿ ಅಷ್ಟೇ ಬರೆಯುತ್ತಿದ್ದ ಇವರ ಕವಿತೆಗಳು ಈಗೀಗ ಜನ ಪ್ರೀತಿಯನ್ನೂ ಗಳಿಸಿಕೊಳ್ಳುತ್ತಿವೆ.

Books By Sumathi Krishnamoorthy