Availability: In Stock

ಗಾಂಧಿಯನ್ನು ನಿಜವಾಗಿ ಕೊಂದವರು ಯಾರು?

SKU: gandhiyannu-nijavagi-kondavaru-yaaru-ebook

Original price was: $1.80.Current price is: $1.08.

ಗಾಂಧಿಯನ್ನು ನಿಜವಾಗಿ ಕೊಂದವರು  ಯಾರು?

ನಾನು ರಾಜಕಾರಣಿಯೂ ಅಲ್ಲ. ರಾಜಕಾರಣ ವಿಶ್ಲೇಷಣೆಯು ನನ್ನ ಪ್ರಧಾನ ಕ್ಷೇತ್ರವೂ ಅಲ್ಲ. ಸಾಹಿತ್ಯದ ಅಧ್ಯಯನ, ಅದರ ಪ್ರಯೋಜನವನ್ನು ಸಾರ್ವಜನಿಕರಿಗೆ ರಾಷ್ಟ್ರೀಯ ಹಿತದೃಷ್ಟಿಯಿಂದ ಬಡಿಸುವ ಕಾಯಕ, ನಿರಂತರ ಚಿಂತನ-ಋಷಿಮುನಿಗಳ ಪ್ರಾಚೀನ ಪರಂಪರೆಯಲ್ಲಿ ಬಂದ ಲೋಕ ಸಂಗ್ರಹ ವಿಚಾರಗಳ, ಭಾವನೆಗಳ, ಅಧ್ಯಾತ್ಮಶಕ್ತಿಯ ಜಾಗೃತಿಗಳ ಕಾಯಕವನ್ನು ನನಗೆ ಸಾಧ್ಯವಾದ ಮಟ್ಟಿಗೆ ಮಾಡಿಕೊಂಡು ಲೋಕಕ್ಕೆ ಸ್ಪಂದಿಸುವ ಒಬ್ಬ ನಿವೃತ್ತ ಪ್ರಾಧ್ಯಾಪಕ. ಇದೆಲ್ಲ ನಿಮಗೆ ಗೊತ್ತೇ ಇದ್ದೂ ನಾನಿಲ್ಲಿ ನೆನಪಿಸುವ ಅಗತ್ಯ ಏಕೆ ಇದೆ? ಎಂದು ಹೇಳಲೇ ಬೇಕಾಗಿದೆ.
ಅನೇಕ ಮುಗ್ಧ ಭಾರತೀಯರಂತೆ ನಾನೂ ಮ|| ಗಾಂಧಿಯವರನ್ನು ಮೆಚ್ಚಿಕೊಂಡ ಕಾಲ ಇತ್ತು. ‘ಗಾಂಧಿ, ನೆಹ್ರೂ’ ಎಂದೊಡನೆ `ಜೈ ಎನ್ನುವ ಬಾಲ್ಯ ಇತ್ತು. ೧೯೫೦ರ ಸುಮಾರಿಗೆ ನೆಹ್ರೂ ಭ್ರಮೆ ಬಿಡಲಾರಂಭಿಸಿತ್ತು. ಈ `ನೆಹ್ರೂ’ ಮೂಲ ಯಾವುದು? `ಇವರು ನಿಜ ರಾಷ್ಟ್ರ ಭಕ್ತರೇ? ಸ್ವತಂತ್ರ ಚಿಂತಕರೇ? ತ್ಯಾಗಶೀಲರೇ? ಶೀಲವುಳ್ಳ, ವಿಶ್ವಸನೀಯ ನಾಯಕರೇ?’ ಎಂದು ಪ್ರಶ್ನೆ ಕೇಳಿಕೊಳ್ಳುತ್ತಾ ಹೋದಂತೆ, ಓದು ವ್ಯಾಪ್ತಿ, ಚಿಂತನ, ಚರ್ಚೆ, ಸಮಾಲೋಚನೆಗಳು ನಡೆಯುತ್ತಾ ಬಂದಂತೆ, `ಇವರು ಗಾಂಧಿ ಪ್ರಭಾವದ ದುರ್ಬಳಕೆಯ ಮಹಾಸ್ವಾರ್ಥಿ, ಎಷ್ಟೂ ಭಾರತೀಯತೆಯ ಪರಿಚಯವಿಲ್ಲದ ಢೋಂಗೀ ರಾಜಕಾರಣಿ’ ಎಂಬುದಕ್ಕೆ ಅವರದೇ ನಡೆವಳಿಕೆಗಳು, ರಾಷ್ಟ್ರಾವನತಿ, ತಪ್ಪು ಹೆಜ್ಜೆಗಳು ಪ್ರಮಾಣೀಕರಿಸುತ್ತಾ  ಬಂದವು. ಘಾತಕತನ, ಸಾಕ್ಷಿಗಳ ಕುಕ್ಕುವ ಬೆಳಕಿನಲ್ಲಿ ದೇವರೆಂದು ಭಾವಿಸಿದ್ದವನಿಗೆ ದೆವ್ವದ ಸಾಕ್ಷಾತ್ಕಾರವಾಯ್ತು. ಆಗುತ್ತಲೇ ಇದೆ. ಈ ಬೆಳಕಿನಲ್ಲೇ `ಸುಭಾಷರ ಕಣ್ಮರೆ’ ಪುಸ್ತಕವನ್ನು ನಾನು ಬರೆದದ್ದು. ರಾಮಾಯಣ, ಮಹಾಭಾರತ, ಭಾಗವತಗಳ ಆಸುರೀ ಶಕ್ತಿಗಳು, ಅವುಗಳ ಶಕ್ತಿ, ಹಿಡಿತ, ಅವುಗಳ ಬೇರು, ವಿಷಫಲಗಳು ಈಗಣ ಭಾರತದಲ್ಲೂ ಕಾಣಲಾರಂಭಿಸಿ, ನಾನು ಕ್ಷೇತ್ರಾಂತರದಲ್ಲೂ ದುಷ್ಟ ಪಾತ್ರಗಳ ಪರಿಚಯಕ್ಕೆ ಕೈ ಹಾಕುವ ಕೆಲಸಕ್ಕೆ ಬಂದುದು ಆಕಸ್ಮಿಕವಾಗಿ ಕಂಡರೂ ದೈವಪ್ರೇರಣೆಯೂ ಕಾಣಲಾರಂಭಿಸಿದೆ.

Additional information

Category

Author

Publisher

Language

Kannada

Book Format

Ebook

Reviews

There are no reviews yet.

Only logged in customers who have purchased this product may leave a review.