ಭಾವ ತೀರವೇ ನಾನಾದಾಗ ಉಕ್ಕುವ ಭಾವದೆಲೆಗಳ ಉಬ್ಬರದ ರಭಸವನ್ನು ಬೇರಾರೂ ತಡೆದುಕೊಳ್ಳಲಾರರು ಎಂದೆನಿಸಿದ ಸಂದರ್ಭಗಳಲ್ಲಿ ಕವಯಿತ್ರಿಗೆ ಜೊತೆಯಾದ ಸಂಗಾತಿಗಳೇ ಕವಿತೆಗಳು.ಸುಮತಿ ಅವರ ಕವಿತಾ ಸಂಕಲನದಲ್ಲಿ ಪ್ರೀತಿ ಇದೆ, ನೀತಿ ಇದೆ ,ವಿರಹದ ಅಳಲಿನ ಜೊತೆಯೇ ತುಂಟತನದ ಬಿಳಲಿದೆ ಹಾಗೂ ಭಾವಸದ್ಭಾವಗಳ ಮಿಲನವಿದೆ. ಅನುರಾಗ,ಅರಿಕೆ, ಹೆಣ್ಣಾಲದ ಮರ,ಗೋಕುಲ,ರವಿತೇಜ ಮುಂತಾದ ಕವಿತೆಗಳು ಮನಕ್ಕೆ ಮುದ ನೀಡುತ್ತವೆ. ಒಂದು ಸಾಮಾನ್ಯ ಸಂದರ್ಭವನ್ನು ಕವಿತೆಯ ನೆಲೆಗೆ ಎತ್ತುವ ಶಕ್ತಿಯನ್ನು ಸುಮತಿ ಪಡೆದಿದ್ದಾರೆ. ಅವರ ಭಾಷೆಯಲ್ಲಿ ಹಿಂದಿನ ಮತ್ತು ಇಂದಿನ ಪದಗಳ ಹದವಾದ ಸಂಯೋಗವಿದೆ. ಈಚಿನ ದಿನಗಳಲ್ಲಿ ಅಪರೂಪವಾಗಿರುವ ಲಯ ಅವರ ಕವಿತೆಗಳಲ್ಲಿ ಎದ್ದು ಕಾಣುವಂತಿದೆ.
Reviews
There are no reviews yet.