Description

ಭಾರತದ ಹೆಸರಾಂತ ಸಾರ್ವಜನಿಕ ಚಿಂತಕರಲ್ಲಿ ಒಬ್ಬರಾದ  ಶಶಿ ತರೂರ್  ಜಗತ್ತಿನ ಅತ್ಯಂತ ಶ್ರೇಷ್ಠ ಮತ್ತು ಪ್ರಾಚೀನ ಧರ್ಮದ  ಬಗ್ಗೆ, ಬರೆದ ಪುಸ್ತಕ Why I am a Hindu? ನಾನೇಕೆ ಹಿಂದೂ?  ಹಿಂದೂ ಧರ್ಮದ ವಿಸ್ತಾರ, ಎತ್ತರ ಮತ್ತು ಅಗಾಧತೆಯನ್ನು ಅನೇಕ ಆಯಾಮಗಳ ಸೂಕ್ಷ್ಮ ಈ ಪುಸ್ತಕ ಸೆರೆ ಹಿಡಿದಿಡುತ್ತದೆ.  ಹಿಂದೂ ಧರ್ಮಕ್ಕೆ ಅನನ್ಯ  ಕಾಣಿಕೆ ನೀಡಿದ ಮಹಾನ್ ಚೇತನಗಳಾದ ಆದಿ ಶಂಕರ, ಪತಂಜಲಿ, ರಾಮಾನುಜ, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ ಮತ್ತು ಅನೇಕರ ಬಗ್ಗೆ ಈ ಪುಸ್ತಕ ಉಲ್ಲೇಖಿಸುತ್ತದೆ. ಪುರುಷಾರ್ಥಗಳು  ಮತ್ತು ಭಕ್ತಿಯ ನೆಲೆಯಲ್ಲಿ ನಿಂತಿರುವ ಹಿಂದೂಧರ್ಮದ ತಾತ್ವಿಕತೆಯನ್ನು, ಭಗವದ್ಗೀತೆಯ ಮತ್ತು ವಿವೇಕಾನಂದರು ಉಪದೇಶಿಸಿದ ಸರ್ವಧರ್ಮೀಯ ಒಗ್ಗೂಡುವಿಕೆಯ ಹಿಂದೂಧರ್ಮದ ಬಗ್ಗೆ ಮತ್ತು ಹಿಂದೂ  ಆಚರಣೆಗಳ ಬಗ್ಗೆ ಸಾಮಾನ್ಯ ಜನರು ನಂಬುವ ಸರಳ ಮತ್ತು ಸುಲಭವಾದ ಭಾಷೆಯಲ್ಲಿ ತರೂರ್ ವಿವರಿಸುತ್ತಾರೆ. ವರ್ತಮಾನ ಕಾಲದಲ್ಲಿ ಬಲಪಂಥೀಯ ಸಂಘಟನೆಗಳು ಮತ್ತು ಅದರ ಪರಿಚಾರಕರಿಂದ, ಧರ್ಮದ ಹೆಸರಿನಲ್ಲಿ ಸಂಭವಿಸಿದ ಹಿಂಸಾತ್ಮಕ ಘಟನೆಗಳನ್ನು, ಅದರ ಹಿಂದಿನ ಸಂಕೀರ್ಣ ಮತ್ತು ಅನೇಕ ಅಭಿವ್ಯಕ್ತಿಗಳನ್ನು ಅವರು ವಿಮರ್ಶೆಗೆ ಒಳಪಡಿಸುತ್ತಾರೆ. ‘ಹಿಂದುತ್ವ’ದ ಬಗ್ಗೆ ಆಳವಾಗಿ ವಿಶ್ಲೇಷಿಸಿ, ಅದರ ಗಮನಾರ್ಹ ಸೈದ್ಧಾಂತಿಕರಾದ ದೀನದಯಾಳ ಉಪಾಧ್ಯಾಯರ ಸಿದ್ಧಾಂತವನ್ನು ನಿಷ್ಪಕ್ಷವಾಗಿ ವಿವರಿಸುತ್ತಾರೆ. ಹಿಂದುತ್ವದ ತೀವ್ರವಾದೀ ಭಕ್ತರನ್ನು ನೇರವಾಗಿ ಟೀಕಿಸುತ್ತಲೇ ಭಾರತವನ್ನು ಜಗತ್ತಿನಲ್ಲೇ ಶ್ರೇಷ್ಠವೆಂದು ಗುರುತಿಸಿರುವ ವಿಭಿನ್ನ, ವಿಶಿಷ್ಟ ಸಂಸ್ಕೃತಿಯನ್ನು ಧಾರ್ಮಿಕ ಮತಾಂಧವಾದ ಸರ್ವನಾಶ ಮಾಡುತ್ತದೆ ಎನ್ನುವುದರ ಬಗ್ಗೆ ದ್ವಂದ್ವಾತೀತ ಧ್ವನಿಯಿಂದ  ಖಂಡಿಸುತ್ತಾರೆ. ಆದರೆ, ಭಾರತ ಬಹುಮುಖೀ ಮತ್ತು ಧರ್ಮನಿರ್ಲಿಪ್ತ  ರಾಷ್ಟ್ರವಾಗಿ  ಉಳಿದುಕೊಂಡಿರುವುದೂ,  ಹಿಂದೂ ಧರ್ಮದಿಂದಲೇ ಎಂದೂ  ಅವರು  ದಾಖಲಿಸುತ್ತಾರೆ.

ವರ್ತಮಾನ ಮತ್ತು ಭವಿಷ್ಯದ ಕಾಲಗಳಲ್ಲೂ ಸಂವಾದ ಮತ್ತು ಚರ್ಚೆಗಳಿಗೆ ಒಳಗಾಗುವ Why I am a Hindu ? ನಾನೇಕೆ ಹಿಂದೂ? ಹಿಂದೂಧರ್ಮದ  ಚಾರಿತ್ರಕತೆ, ವರ್ತಮಾನತೆ  ಮತ್ತು ಭವಿಷ್ಯದ ಬಗ್ಗೆ ರಚಿತವಾದ ಸೃಜನಶೀಲ ಶ್ರೇಷ್ಠ ಕೃತಿ.

Additional information

Book Format

Printbook

Author

Language

Kannada

Publisher

Year Published

2023

Translator

K.E Radhakrishna

Category

Reviews

There are no reviews yet.

Only logged in customers who have purchased this product may leave a review.