Only logged in customers who have purchased this product may leave a review.

ಅನುಗಾಲವೂ ಚಿಂತೆ ಮನುಜಂಗೆ
$2.38 $2.15
ಅನುಗಾಲವೂ ಚಿಂತೆ ಮನುಜಂಗೆ:
ಆಧುನಿಕ ತಲೆಮಾರಿಯವರಿಗೆ ನಿತ್ಯವೂ ನರಕವೇ . ಯಾರಿಗೂ ಭೂತದ ಹಂಗಿಲ್ಲ, ವರ್ತಮಾನದಲ್ಲಿ ಪುರಸೊತ್ತಿಲ್ಲ. ಏಕೆಂದರೆ ಭವಿಷ್ಯದೇ ಚಿಂತೆ. ಮನಸೆಂಬುದು ಲಗಾಮಿಲ್ಲದ ಕುದುರೆ. ಹತೋಟಿ ತಪ್ಪಿದರೆ ಯಾರದೇ ಮನೆಯ ತೋಟವನ್ನು ನುಗ್ಗುತ್ತದೆ, ಇನ್ನೊಬ್ಬರ ವೈಯಕ್ತಿಕ ಬದುಕಿನಲ್ಲಿ ನುಸುಳುತ್ತದೆ. ಅವಾಸ್ತವಿಕ ಕನಸನ್ನು ಕಾಣಿಸಿ ಕೊನೆಗೆ ಒಂದು ಕಡೆ ಸುಸ್ತಾಗಿ ನಿಂತುಬಿಡುತ್ತದೆ. ಪ್ರತಿಯೊಬ್ಬರದ್ದೂ ಒಂದೊಂದು ಮಾನಸಿಕ ಸಾಮ್ರಾಜ್ಯ! ಯಾವುದೇ ಕೆಲಸ ಮಾಡುತ್ತ ಇನ್ನಾವುದೋ ಯೋಚನೆಯಲ್ಲಿರಿತ್ತರೆ. ಕೆಲಸಕ್ಕೂ ಯೋಚನೆಗೂ ಸಂಬಂಧವೇ ಇಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಗೂ ಕೂಡ ಮಕ್ಕಳ ಕ್ರಿಯಾಜ್ಞಾನವನ್ನು ಉದ್ದೀಪನಗೊಳಿಸುವ ಶಕ್ತಿ ಇಲ್ಲ. ಮಕ್ಕಳು ಮಕ್ಕಳಾಗಿದ್ದಾಗ, ಪ್ರಾಯಕ್ಕೆ ಬಂದಾಗ, ಮದುವೆಯಾದಮೇಲೆ, ಮಿಮ್ಮಕ್ಕಳಾದಮೇಲೆ ಅನ್ನುತ್ತ ಈ ತಲೆಮಾರಿನ ಪಾಲಕರು ನಿತ್ಯ ಆತಂಕಗಳಲ್ಲೇ ಬೆಂದು ಅಂತ್ಯದಲ್ಲಿ ತಮ್ಮ ಬದುಕಿನ ಸಾರ್ಥಕ್ಯದ ಪ್ರಶ್ನೆಯನ್ನು ಎದುರಿಸಲಿದ್ದಾರೆ. ಇಂದು ಮನುಷ್ಯ ಗುರುತಿಸಲ್ಪಡುವುದು, ಅಸ್ತಿತ್ವ ಕಟ್ಟಿಕೊಳ್ಳವುದು ದುಡ್ಡಿನಿಂದ. ದುಡ್ಡು ಜೀವನದ ಅನಿವಾರ್ಯ ಅಂಗ. ದುಡ್ಡು ಮಾಡಲು ಮಾತು ತಪ್ಪಬೇಕಾಗುತ್ತದೆ, ನೀತಿ ತಪ್ಪಬೇಕಾಗಿತ್ತದೆ, ಅಪ್ರಾಮಾಣಿಕರಾಗಬೇಕಾಗಿತ್ತದೆ, ಅನಾರೋಗ್ಯಕರ ಸ್ಪರ್ಧೆ ಮಾಡಬೇಕಾಗುತ್ತದೆ, ಇಂದಿನ ಬದುಕಿಗೆ ಭದ್ರತೆಯಿಲ್ಲ. ಎಷ್ಟು ಹೊತ್ತಿಗೆ ಏನಾಗಬಹಿದೆಂದು ಊಹಿಸಲು ಸಾಧ್ಯವಿಲ್ಲ. ವರ್ಷದಿಂದ ವರ್ಷಕ್ಕೆ ಹೊಸ ಹೊಸ ರೋಗಗಳ ಆಕ್ರಮಣ. ಇಂದಿನ ಔಷಧಗಳೂ ಹೊಸರೋಗವೊಂದನ್ನು ಸೃಷ್ಟಿಸಿಯೇ ಇದ್ದ ರೋಗವನ್ನು ಗುಣ ಮಾಡುತ್ತವೆ. ಹೀಗೆ ವರ್ತಮಾನದ ಬದುಕು ಚಿಂತೆಗಳಲ್ಲೇ ಸುಟ್ಟಿಕೊಂಡಿರುತ್ತದೆ. ಇದನ್ನೇ ‘ಅನುಗಾಲವೂ ಚಿಂತೆ ಮನುಜಂಗೆ’ ಎ೦ದು ದಾಸವಾಣಿಯಲ್ಲಿ ಹೇಳಿದ್ದು….
- Book Format: Paperback
- Category: Articles
- Language: Kannada
- Publisher: Sahitya Prakashana
Reviews
There are no reviews yet.