Only logged in customers who have purchased this product may leave a review.

ಭಾರತೀಯ ಶಾಂತಿಸೇನೆಯ ಶ್ರೀಲಂಕಾ ಅದ್ಯಾಯ
$1.63 $1.47
ಭಾರತೀಯ ಶಾಂತಿಸೇನೆಯ ಶ್ರೀಲಂಕಾ ಅದ್ಯಾಯ:
ಓದುಗರಿಗೆ, ಓದಲಿಚ್ಚಿಸುವರಿಗೆ, ಯುದ್ಧದ ಬಗ್ಗೆ ಒಂದಿಷ್ಟಾದರೂ ತಿಳಿದುಕೊಳ್ಳಬೇಕೆಂಬ ಉತ್ಸುಕರಿಗೆ ನಮ್ಮ ಸೈನಿಕ, ಸೈನಿಕ ಕಾರ್ಯ ವಿಧಾನಗಳನ್ನು ಓದುಗರೆದುರಿಗೆ ಇಡಲೆಂದು, ನಾನು ಶಾಂತಿ ಸೇನೆಯ ಔಪ್ನ ಕಮಾಂಡರ ಮತ್ತು ನಂತರ ಶಾಂತಿಸೇನೆ ಪ್ರವರ ಅಧಿಕಾರಿ ಎಂದು ನೋಡಿದನ್ನು, ಮಾಡಿದನ್ನು ನಾನು ಕಂಡಂತೆ, ತಿಳಿದುಕೊಂಡಂತೆ ಈ ೨೦ ವರ್ಷಗಳ ನಂತರ ನೆನಪಿಸಿಕೊಂಡು ಬರೆದಿದ್ದೇನೆ. ಶಾಂತಿ ಸೇನೆಯಲ್ಲಿ ನಾನು ಮೂರನೆ ನಂಬರಿನ ಅಧಿಕಾರಿಯೆಂದು ಪ್ರವೇಶಿಸಿ, ಎರಡನೆಯ ನಂಬರಿಗೇರಿ, ಎಷ್ಟೋ ಸಲ ಒಂದನೇ ನಂಬರಿನವನ ಕೆಲಸವನ್ನೂ ಕೈಕೊಳ್ಳಬೇಕಾಯಿತು. ನನ್ನ ೩೫ ವರ್ಷಗಳ ಸೇವಾಕಾಲದಲ್ಲಿ ಕಲಿತ, ಪ್ರಯೋಗಿಸಿದ, ಅನುಭವಿಸಿದ, ಓದಿಕೊಂಡು ಸರ್ವ ಸಾಮರ್ಥವನ್ನು ಈ ಯುದ್ಧದಲ್ಲಿ ನನ್ನ ಹುದ್ದೆ, ನನ್ನ ಸೈನಿಕರಿಗೆ ಕೊಟ್ಟೆ, ಏನೂ ಬಚ್ಚಿಡಲಿಲ್ಲ, ಉಳಿಸಿಡಲಿಲ್ಲ. ಸೈನಿಕನನ್ನು, ಸೇನೆಯನ್ನು, ಯುದ್ಧವನ್ನು ನಮ್ಮ ಜನತೆ, ಮುಖಂಡರು, ಬುದ್ಧಿಜೀವಿಗಳು ಅರಿಯಬೇಕು, ಅರಗಿಸಿಕೊಳ್ಳಲೂ ಪ್ರಯತ್ನಿಸಬೇಕು, ಮತ್ತು ಶಾಸ್ತ್ರಬಲಪ್ರಯೋಗವನ್ನು ಅಭ್ಯಸಿಸಬೇಕು ಎಂಬುದೇ ನನ್ನ ಈಗಿನ ಇಂಗಿತ. ಇದರಿಂದಲೇ ಅಲ್ಲವೇ ನಮ್ಮ ಸೈನಿಕರ ಜೀವಹಾನಿ, ಅಂಗಹಾನಿಗಳನ್ನು ಕನಿಷ್ಠ ಮೊತ್ತಕ್ಕಿಳಿಸುವುದು? ಯುದ್ಧದ ಮೂಲ ತತ್ವವೇ ಇದು: ಕನಿಷ್ಠ ಹಾನಿ; ಗರಿಷ್ಠ ಯಶ, ಶಾಂತಿಸೇನೆಯ ಸೈನಿಕರಿಗೆ ನನ್ನ ಸಹಸ್ರ ಸೆಲ್ಯೂಟ್. ಅವನಂತಹವನು ಅವನೇ; ಇನ್ನಾರಿಲ್ಲ! ನನ್ನೊಳಗೆಯೇ ಅವನ ಸ್ಮಾರಕ ಸ್ಥಾಪಿತವಾಗಿದೆ. ಅವನಿಗೇ ಇದು ಮುಡಿಪು.
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.