ಚಾಣಕ್ಯ ನೀತಿ ಸೂತ್ರಗಳು- ಇಂದಿನ ಪ್ರಸ್ತುತಿ:
ಆಚಾರ್ಯ ಚಾಣಕ್ಯ ಒಬ್ಬ ಮಹಾಪುರುಷ. ನಮ್ಮ ದೇಶ ಕಂಡ ಮಹಾ ರಾಜಶಾಸ್ತ್ರ ದಾರ್ಶನಿಕರಲ್ಲಿ ಅಗ್ರಗಣ್ಯ. ತಕ್ಷಶಿಲೆಯಲ್ಲಿ ಭೋದಿಸಿ, ನವನಂದರ ನಿಗ್ರಹ ಮಾಡಿ, ದುರುಳ ಸಾಂಮ್ರಾಜ್ಯವನ್ನು ಅಳಿಸಿ,ಶಿಷ್ಯನಾದ ಚಂದ್ರಗುಪ್ತ ಮೌರ್ಯನಿಗೆ ಪಟ್ಟ ಗಟ್ಟಿ, ಮಂತ್ರಿ ಪದವಿಯನ್ನೊಲ್ಲದೆ, ಅದ್ಯಾಪಕನಾಗಿಯೇ ಮರಳಿದ ಮಹಾತ್ಯಾಗೀ ತಪಸ್ವೀ, ಚುರುಕು ರಾಜಕಾರಣಿ. ಬಿಡದೆ ಹಟದಿಂದ ಸತ್ಕಾರ್ಯಗಜನ್ನು ಸಾಧಿಸುವ ಛಲ, ಧರ್ಮ ಶ್ರದ್ಧೆ, ಸನಾತನ ಶ್ರೇಷ್ಠ ಚಿಂತನೆಯಲ್ಲಿ ಆಳದ ಪರಿಶ್ರಮ, ವಿಶ್ವಾಸ, ಇಂಥ ಗುಣಗಳಿಂದ ಇಂದಿಗೂ ಆದರ್ಶಪ್ರಾಯನಾದ ಈ ಮಹಾನುಭಾವ, ವನಿಷ್ಠ, ಜಮದಗ್ನಿ, ಪರಶುರಾಮ, ಅಗಸ್ತ್ಯರ ಸಾಲಿನಲ್ಲಿ ನಿಲ್ಲಬಲ್ಲ ಐತಿಹಾಸಿಕ ವ್ಯಕ್ತಿ. ಚಾಣಕ್ಯನ ಕಾಲದಲ್ಲೇ ಕೂಟಯುಕ್ತಿ, ಮೋಸದ ರಾಜಕಾರಣ – ತಲೆಯೆತ್ತಿ ಮೆರೆಯುತ್ತಿತ್ತು…..
ಇಲ್ಲಿ ಒಟ್ಟು 8 ಅಧ್ಯಾಯಗಳಿವೆ. ಸೂತ್ರಗಳ ಸಂಖ್ಯೆ ಬೇರೆ ಬೇರೆಯಾಗಿ ಒಟ್ಟು 562 ಎಂದು ಒಂದು ಗಣನೆ. ಅದೇ ಇಲ್ಲಿ ಉಪಯುಕ್ತವಾಗಿವೆ.
ನನ್ನ ಈ ರೀತಿಯಲ್ಲಿ ಮೂಲವನ್ನು ಕೊಟ್ಟು, ಭಾಷಾಂತರ ಸೇರಿಸಿ, ಇಂದಿಗೆ ಹೊಂದುವಂತೆ, ಪ್ರಸ್ತುತಿ ತೋರಿಸಲು ಟೀಕೆಯನ್ನು ಬರೆದಿದ್ದೇನೆ. ಇದರಲ್ಲಿ ನನಗೆ ಯಾವ ಪಕ್ಷಪಾತವೂ ಇಲ್ಲ. ನಾನು ಯಾವ ರಾಜಕೀಯ ಪಕ್ಷಕ್ಕೂ ಸೇರಿದವನಲ್ಲ. ನಾನು ಧರ್ಮ ಪಕ್ಷಪಾತಿ, ರಾಷ್ಟ್ರೀಹಿತ ಪಕ್ಷಪಾತಿ, ಶ್ರೀಕೃಷ್ಣ, ಚಾಣಕ್ಯರ ರೀತಿಯನ್ನು ಮನಸಾರೆ ಮೆಚ್ಚಿ, ನಮ್ಮನ್ನು ಉದ್ಧರಿಸಬಲ್ಲ ಈ ಸೂತ್ರಗಳು, ಅರ್ಥಶಾಸ್ತ್ರದ ತಿರುಳು ಎಂಬುದನ್ನು ಮನಗುಂಡಿದ್ದೇನೆ…..
Reviews
There are no reviews yet.