Only logged in customers who have purchased this product may leave a review.

ದೊಕ್ಲಾಮ್ ಬಿಕ್ಕಟ್ಟು
$2.72 $2.45
ದೊಕ್ಲಾಮ್ ಬಿಕ್ಕಟ್ಟು:
ಹಿಂದೂ ಮಹಾಸಾಗರದಲ್ಲಿ ಭಾರತದ ವಿರುದ್ಧ ಚೀನಾ ಸ್ಥಾಪಿಸಿರುವ ಸೇನಾನೆಲೆಗಳ ‘ಮುತ್ತಿನ ಹಾರ’ದ (ನಾನದನ್ನು ‘ಕುಟುಕು ಕೊಂಡಿಗಳ ಹಾರ’ ಎಂದು ಹೆಸರಿಸಿದ್ದೇನೆ) ಸುತ್ತಲೂ ಬಲಿಷ್ಟ ‘ಹೂಹಾರ’ವನ್ನು ನಿರ್ಮಿಸಿ ಆ ದೇಶದ ಕೈಗಳನ್ನು ಕಟ್ಟಿಹಾಕಿರುವ ಪ್ರಧಾನಿ ನರೇಂದ್ರ ಮೋದಿ ಸಹಜವಾಗಿಯೇ ಅಧ್ಯಕ್ಷ ಷಿ ಜಿನ್ಟಿಂಗ್ ರ ಕಣ್ಣು ಕೆಂಪಗಾಗಿಸಿದ್ದಾರೆ. ಮೋದಿವವರ ಹುಮ್ಮಸ್ಸನ್ನು ತಗ್ಗಿಸಿ, ಅವರು ಚೀನಾದ ಯೋಜನೆಗಳಿಗೆಲ್ಲಾ ಕಲ್ಲು ಹಾಕದಂತೆ ಎಚ್ಚರಿಸಲು ಜಿನ್ ಪಿಂಗ್ ಎರಡು ಹಂತದ ಯೋಜನೆಯನ್ನು ರೂಪಿಸಿದರು. ಮೊದಲನೇಯ ಹಂತದಲ್ಲಿ ಭಾರತವನ್ನು ದಕ್ಷಿಣ ಏಷಿಯಾದ ಎಲ್ಲೆಯೊಳಗೇ ಕಟ್ಟಿಹಾಕುವ ತನ್ನ ಲಗಾಯ್ತಿನ ತಂತ್ರದಂತೆ ಪಾಕಿಸ್ತಾನವನ್ನು ಭಾರತದ ವಿರುದ್ಧ ಚೂ ಬಿಟ್ಟರು. ಅದರಂತೆ ಪಾಕಿಸ್ತಾನ ಗಡಿತಂಟೇ ಆರಂಭಿಸಿತೇನೋ ನಿಜ. ಆದರೆ ಮೋದಿಯವರ ಭಾರತದ ಉಗ್ರ ಪ್ರತಿಕ್ರಿಯೆ ತೋರಿದ್ದರಿಂದ ಪಾಕಿಸ್ತಾನ ತಣ್ಣಗಾಗಿ ಹೋಗಿದಿ. ಪರಿಣಾಮವಾಗಿ ಜಿನ್ ಪಿಂಗ್ ತಮ್ಮ ಯೋಜನೆಯ ಎರಡನೇ ಹಂತವನ್ನು ಜಾರಿಗೊಳಿಸುವ ಒತ್ತಡಕೊಳ್ಳಗಾಗಿದ್ದಾರೆ. ಅದೆಂದರೆ ಭಾರತವನ್ನು ನೇರವಾಗಿ ಹೆದರಿಸುವುದು. ಪ್ರಸಕ್ತ ದೊಕ್ಲಾಮ್ ಬಿಕ್ಕಟ್ಟಿನ ಮೂಲ ಇದು. ಈ ಪ್ರಕರಣ ಎತ್ತಿ ತೋರಿತ್ತಿರುವುದು ಚೀನೀಯರ ಚಾಣಾಕ್ಷತೆಗಿಂತಲೂ ಮೋದಿಯವರ ನಡೆಗಳಿಂದಾಗಿ ಅಧ್ಯಕ್ಷ ಜಿನ್ ಪಿಂಗ್ ಅವರಲುಂಟಾಗಿರುವ ಹತಾಷೆಯನ್ನು…..
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.