ಈಗಿದು ಪಾಶ್ಚಿಮಾತ್ಯದಲ್ಲೂ ಪ್ರಸಾರ ಪಡೆಯುತ್ತಿದ್ದು, ವೈಜ್ಞಾನಿಕ ವಿಧಾನವೆಂದು ಕೂಡ ಪ್ರತೀತಿ ಪಡೆದಿದೆ. ಸೋಜಿಗ ಮತ್ತು ಸಂತೋಷದ ಸಂಗತಿಯೆಂದರೆ, ಇಂದು ಪಾಶ್ಚಿಮಾತ್ಯ ದೇಶಗಳು ಇದನ್ನು ಒಪ್ಪಿಕೊಳ್ಳುತ್ತ ಅನುಸರಿಸುತ್ತಲಿವೆ, ವಿಶ್ಚಾಸದ ಆಚರಣೆಯಿಂದ. ಆದರೆ ನಮ್ಮ ದೇಶದಲ್ಲಿ ಇದಕ್ಕೆ ಕಡೆಗಣನೆಯಾಗುತ್ತಲಿದೆ.
ಧ್ಯಾನದ ಬಗೆಗಿರುವ ಒಂದು ಸಂಶಯವನ್ನು ನಿವಾರಿಸಲು ಇಷ್ಟಪಡುತ್ತೇನೆ: ‘ಧ್ಯಾನ ಬೇರೆಯೇ, ಅದು ಯೋಗವಲ್ಲ’, ಎಂಬುದು ಕೆಲವರ ವಿಚಾರ. ಅದು ಸತ್ಯವಲ್ಲ. ಧ್ಯಾನ ಎಂದೂ ಯೋಗವೇ, ಯೋಗದ ಒಂದು ಭಾಗವೇ, ಆದ್ದರಿಂದ ಧ್ಯಾನದ ಮಾತು ಬಂದಾಗಲ್ಲೆಲ್ಲ ಅಲ್ಲಿ ಯೋಗವಿರುತ್ತದೆ. ಮತ್ತು ಯೋಗದ ಮಾತು ಬಂದಾಗಲ್ಲೆಲ್ಲ ಅಲ್ಲಿ ದ್ಯಾನವಿರುತ್ತದೆ. ಆದ್ದರಿಂದ ಈ ಸಂಯುಕ್ತಕ್ಕೆ ಹೆಸರು “ಧ್ಯಾನ-ಯೋಗ”. ಇಂತಹ ಧ್ಯಾನಯೋಗದ ಬಗ್ಗೆ ಹಲವು ಮಹಾನುಭಾವರ ಅಧಿಕೃತ ಹೇಳಿಕೆ ನೀಡುವ, ನಿಲುವಿನ ಸತ್ಯಸಂಧತೆಯನ್ನು ಹಂಚಿಕೊಳ್ಳೋಣ.
Reviews
There are no reviews yet.