ಎಲ್ಲರಿಗೂ ಬೇಕಾದ ಅಂಬೇಡ್ಕರ್
150.00 135.00 Add to basket
Sale!

ಎಲ್ಲರಿಗೂ ಬೇಕಾದ ಅಂಬೇಡ್ಕರ್

150.00 135.00

ಎಲ್ಲರಿಗೂ ಬೇಕಾದ ಅಂಬೇಡ್ಕರ್:

ಡಾ।। ಭೀಮರಾವ್ ಅಂಬೇಡ್ಕರ್ ಖಂಡಿತಕ್ಕೂ ಯಾವದೋ ಒಂದ್ದು ವರ್ಗಕ್ಕೆ ಸೇರಿದವರಲ್ಲ. ಅಂಬೇಡ್ಕರ್ ಈ ದೇಶದ ಆಸ್ತಿ. ಈ ದೇಶ ಕಂಡ ಅಪ್ರತಿಮ ಚಿಂತಕ. ಆದರೆ ಕಾಲಾನಂತರದಲ್ಲಿ
ಅಂಬೇಡ್ಕರ್ ಅವರನ್ನು ಒಂದು ವರ್ಗಕ್ಕೆ ಸೀಮಿತ ಮಾಡಿ ಅವರ ವ್ಯಕ್ತಿತ್ವವನ್ನು ಕುಬ್ಜವಾಗಿ ಮಾಡುವ ತಪ್ಪು ಕೆಲಸ ನಡೆಯಿತು. ಮುಖ್ಯವಾಗಿ ಅಂಬೇಡ್ಕರ್ ಓರ್ವ ರಾಷ್ಟವಾದಿಯಾಗಿದ್ದರು. ಅದೇ ಕರಣಕ್ಕೋಸ್ಕರವೇ ಅಥವಾ ರಾಷ್ಟ್ರಿಯ ಅಸ್ಮಿತೆಯನ್ನು ಕಾಯ್ದುಕೊಳ್ಳುಲು ಈ ದೇಶದ ಸಂಸೃತಿ ಸೊಗಡನ್ನು ಕಾಪಿಟ್ಟುಕೊಂಡು ಹೋಗಬೇಕೆಂಬುದನ್ನು ಬಲವಾಗಿ ಪ್ರತಿಪಾದನೆ ಮಾಡಿದ್ದರು. ಕಾರಣಾಂತರದಿಂದ ಈ ಸತ್ಯ ಹೊರಬರಗೊಡಲಿಲ್ಲ. ಅದು ಅಂಬೇಡ್ಕರ್ ವ್ಯಕ್ತಿತ್ವಕ್ಕೆ ಮಾಡುವ ಅಪಚಾರವಲ್ಲದೆ ಮತ್ತೇನೂ ಅಲ್ಲ. ಅಂಬೇಡ್ಕರ್ ಅವರು ಈ ದೇಶದ ಇತಿಹಾಸ ಮತ್ತು ಸಂಸೃತಿಯ ಜ್ಞಾನ ಮಾತ್ರವಲ್ಲ. ಆ ನಿಟ್ಟಿನಲ್ಲಿ ಜಾಗತಿಕವಾಗಿ ತೌಲನಿಕಅಧ್ಯಯನ ಮಾಡಿ ತಿಳಿವಳಿಕೆ ಹೊಂದಿದ್ದರು. ಎಲ್ಲದಕ್ಕಿಂತ ಮುಖ್ಯವಾಗಿ ಅಂಬೇಡ್ಕರ್ ಅವರೊಬ್ಬ ನಿಷ್ಟುರವಾದಿಯಾಗಿದ್ದರು.ಹೀಗಾಗಿ ಅವರು ನೆಹರೂ ಮತ್ತು ನೆಹರೂ ಹಿಡಿತದಲ್ಲಿದ್ದ ಕಾಂಗ್ರೆಸ್ ಪಕ್ಷದ ಒತ್ತಡ, ಅಪವಾದಗಳಿಗೆ ಎಂದೂ ಬಾಗಿರಲಿಲ್ಲ. ಅಂಬೇಡ್ಕರ್ ಅವರನ್ನು ಅರಗಿಸಿಕೊಳ್ಳಲು ಆಗುವುದಿಲ್ಲ ಎಂಬ ಕಾರಣಕ್ಕೋ ಏನೋ ಒಂದು ಹಂತದಲ್ಲಿ ಅಂಬೇಡ್ಕರ್ ಅವರ ಹತ್ಯಾಯತ್ನವೊ ನಡೆದುಹೋಗುತ್ತದೆ. ಈ ಎಲ್ಲ ವಿಷಯಗಳ ಕುರಿತು ಕನ್ನಡದಲ್ಲಿ ಇದೇ ಮೊದಲಬಾರಿಗೆ ಪುಸ್ತಕವೊಂದನ್ನು ಡಾ।। ಜಿ. ಬಿ. ಹರೀಶ್ ಅವರು ಹೊರತರುತ್ತಿದ್ದಾರೆ. ‘ಎಲ್ಲರಿಗೂ ಬೇಕಾದ ಅಂಬೇಡ್ಕರ್’ ಇದೊಂದು ಪುಸ್ತಕ ಎನ್ನುವುದಕ್ಕಿಂತ ಹೆಚ್ಚಾಗಿ ಇತಿಹಾಸ, ಸಂಸೃತಿ ಆಸಕ್ತರ ಪಾಲಿಗೊಂದು ಸಂಗ್ರಹ ಹೊತ್ತಿಗೆ ಆಗಲಿದೆ ಎಂಬುದೇ ಸರಿಯಾದ ಮಾತಾದೀತು.

  • Book Format: Paperback
  • Author: Dr. G. B. Harisha
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.