ಹಲವು ಅಲೆಗಳನ್ನಾಡಿಸುತ್ತಾ ಲಲಿತವಾಗಿ, ಮಂಜುಳ ಮೆಲ್ಲುಲಿಯೊಂದಿಗೆ ಹರಿಯುವ ಕಿರುಝರಿಗೆ ಈ ಬರವಣಿಗೆಯನ್ನು ಹೋಲಿಸಬಹುದು. ಇದೊಂದು ಕಾವ್ಯಾಂತರಂಗದ ಆದ್ರ ಸಲ್ಲಾಪ. ನೋವು, ನಲಿವು, ಭಯ, ವಿಭ್ರಾಂತಿ, ಬದುಕುಳಿಯುವ ಹಠ, ಹೋರಾಟದ ದೃಢ ಸಂಕಲ್ಪ, ಹೊಸ ವೈಚಾರಿಕೆಯ ಹೊಂಚು, ದೃಢವಾದ ಸ್ತ್ರೀಪಾರಮ್ಯ, ಆದರೆ ಪುರುಷನ ಬಗ್ಗೆ ಪಾಪದ ಪ್ರಾಣಿಯೆಂಬ ಅನುಕಂಪೆ, ಕೆಲವೊಮ್ಮೆ ಸಿಡಿಸಿದಿ ಕನಲಿಕೆ, ಮತ್ತೆ ಔದಾಸೀನ್ಯದ ಬಳಲಿಕೆ, ಮಮತೆಯ ಮಿಡಿತ-ಅದೆಷ್ಟು ಬಗೆಯ ಭಾವಗಳ ರಿಂಗಣಗುಣಿತ ಈ ಬರವಣಿಗೆಯಲ್ಲಿ! ನಾದಾರ್ಥಗಳ ಬಿಸುಗೆ ಸಾಧಿಸಲೇಬೇಕೆಂಬ ಛಲದ ಪದ್ಯವಂತಿಕೆ, ವೈಚಾರಿಕತೆ ಮತ್ತು ವಾಸ್ತವದ ನಿಷ್ಟುರತೆಯನ್ನು ಎಷ್ಟು ಮಾತ್ರಕ್ಕೂ ಬಿಟ್ಟುಕೊಡಲಾರೆನೆಂಬ ಗದ್ಯದ ಘನತೆ! ಗದ್ಯ-ಪದ್ಯಗಳ ಬಿಸಿಬಿಸಿ ತಿಕ್ಕಾಟದ ಈ ಕಾವ್ಯತ್ಮಕವಾದ ಗದ್ಯಶಾರೀರೀ ಬರವಣಿಗೆಯನ್ನು ನಾನು ಹೊಸ ಕಾಲದ ಚಂಪು ಎಂದು ಕರೆಯಲು ಬಯಸಿತ್ತೇನೆ.

ಹದಿನೆಂಟಕ್ಕೂ ಸಿಗದ ಉತ್ತರ
Sale!
ಹದಿನೆಂಟಕ್ಕೂ ಸಿಗದ ಉತ್ತರ
$2.04 $1.84
ನಮಗೆ ಪರಿಚಿತವಾದ ಯಾವುದೇ ಸಾಹಿತ್ಯ ಪ್ರಕಾರಕ್ಕೆ ಈ ಬರವಣಿಗೆಯನ್ನೂ ತಳ್ಳಿ ಗೆದ್ದೆವು ಬಿಡಿ ಎಂದು ಕೈ ಝಾಡಿಸಿಕೊಂಡು ನಾವು ಮನೆಯ ದಾರಿ ಹಿಡಿಯುವಂತಿಲ್ಲ. ಇವನ್ನು ನಾನು ಸದ್ಯಕ್ಕೆ ಕವಿತಾಪ್ರಬಂಧಗಳೆಂದು ಕರೆಯುತ್ತೇನೆ. ಪ್ರತಿಯೊಂದು ಪ್ರಬಂಧಕ್ಕೂ ಬೇರೆ ಬೇರೆ ಹೆಸರಿದೆ. ಆದರೆ ಆ ಎಲ್ಲ ಬರವಣಿಗೆಯ ಹಿಂದೆ ಇರುವ ಉಸಿರಿನಲ್ಲಿ ಮಾತ್ರ ಒಂದೇ ಏಕ ಸೂತ್ರ! ಒಂದೇ ಕೇಂದ್ರ ಮಿಡಿತ.
- Book Format: Printbook
- Category: Articles
- Language: Kannada
- Publisher: Sahitya Prakashana
Only logged in customers who have purchased this product may leave a review.
Reviews
There are no reviews yet.