ಕಾಗದದ ದೋಣಿಗಳು
120.00 108.00 Add to basket
Sale!

ಕಾಗದದ ದೋಣಿಗಳು

120.00 108.00

ಕಾಗದದ ದೋಣಿಗಳು:

ಪರಿಚಯವಾಗಿದ್ದ ದಾರಿಯಲ್ಲವೇ, ಸರಸರನೆ ಮುಂದೆ ಸಾಗಿದಾಳು. ದೇವಾಲಯದ ಹೆಬ್ಬಾಗಿಲು ದಾಟಿ ಅಶ್ವತ್ಥವೃಕ್ಷದ ನೆಡಲಲ್ಲಿ ಹಾದು ಚಿತ್ತಾರದ ಎತ್ತರದ ಗೋಪುರವನ್ನು ಕಣ್ಣೊಳಗೆ ತುಂಬಿಕೊಂಡು ಏಳು ಮೆಟ್ಟಲು ಏರಿ ಕಂಡ ಮುದ್ದು ಕಷ್ಣನ ಕಣ್ಣುಗಳ ಮೇಲೇ ನೋಟ ಕೀಲಿಸಿ ಇಂದು ಅವನಿಗೊಂದು ಮುತ್ತು ಕೊಟ್ಟುಬಿಡಲೇಬೇಕು ಅಂದುಕೊಳ್ಳುತ್ತಾ ಒಳಗಡಿಯಿಟ್ಟಳು. ಅವಳ ಬಲಗಾಲು ನೆಲವನ್ನು ಸೋಕಿತೋ ಇಲ್ಲವೋ, ಗಂಟೆಗಳೆಲ್ಲಾ ಒಮ್ಮೆಲೆ ಮೊಳಗತೊಡಗಿದವು. ರಿಂಗಣಗಳು ಒಂದಕ್ಕೊಂದು ಢಿಕ್ಕಿ ಹೊಡೆದು ಒಂದು ಇನ್ನೊಂದರ ಪ್ರತಿಧ್ವನಿಯಾಗಿ ಇನ್ನೊಂದು ಮಗದೊಂದರ ಕೂಗಾಗಿ ಆಲಯದ ಉದ್ದಗಲಕ್ಕೂ ಗುಡುಗಾಡಿ ಅವಳೆದೆಯನ್ನು ಧಿಮಿಧಿಮಿಗುಟ್ಟಿಸಿದವು. ಅವಳು ಕಾಲು ಹಿಂತೆಗೆದು ಏಳೂ ಮೆಟ್ಟಲುಗಳನ್ನು ಹಾರುತ್ತಾ ಕೆಳಗಿಳಿದಳು. ಶ್ವೇತವಾಸನಧಾರಿ ವೃದ್ಧನ ಮುಂದೆ ನಿಂತಳು, ಏದುಸಿರು ಹಾಕುತ್ತಾ. ಅವನ ಕಣ್ಣುಗಳಲ್ಲಿದ್ದ ದಿಗಿಲು ನಿನ್ನೆಗಿಂತಲೂ ನೂರ್ಮಡಿಯಾಗಿತ್ತು. ನಡುಗುವ ದನಿಯಲ್ಲಿ ಪ್ರತ್ನಿಸಿದ: “ಮಗುವನ್ನು ಯಾಕೆ ಬಿಟ್ಟುಬಂದೆ?”

  • Book Format: Paperback
  • Author: Premshekar
  • Language: Kannada
  • Publisher: Sahitya Prakashana
  • Category: Articles

Reviews

There are no reviews yet.

Only logged in customers who have purchased this product may leave a review.