Only logged in customers who have purchased this product may leave a review.

ಕಳಕೊಂಡದ್ದು ಬದುಕನ್ನಲ್ಲ ನಿನ್ನನ್ನಷ್ಟೇ!
$2.45 $2.21
ಕಳಕೊಂಡದ್ದು ಬದುಕನ್ನಲ್ಲ ನಿನ್ನನ್ನಷ್ಟೇ!:
ಭಡ್ತಿಯವರ ಪ್ರಕಾರ, ಈ ಜಗತ್ತಿನಲ್ಲಿ ಸಾಹಿತ್ಯದ ಅಭಿವ್ಯಕ್ತಿಗೆ ಅರ್ಹವಲ್ಲದ ವಿಚಾರಗಳೇ ಇಲ್ಲ. ಬಟ್ಟೆಯಂಗಡಿಯಲ್ಲಿ ನಿಲ್ಲಿಸಿರುವ ಗೊಂಬೆ, ಗೊಂಬೆಗೆ ತುತ್ತು ಉಣಿಸುತ್ತಿರುವ ಪುಟ್ಟ ಬಾಲೆ, ಮಳೆಯಲ್ಲಿ ನೆನದ ಪಕ್ಷಿಗಳು, ಹೊರಗಡೆ ಉಟಕ್ಕೆ ಹಸಿದ ವಿಟ, ಸಿನೆಮಾದ ಪೋಸ್ಟರ್ ಅಂಟಿಸುವ ಹುಡುಗ, ಗಾಂಧಿ ಬಜಾರನಲ್ಲಿ ಕಂಡ ಮುಖ… ಹೀಗೆ ಎಲ್ಲವೂ ಅವರ ಅಭಿವ್ಯಕ್ತಿಗೆ ವಸ್ತುಗಳಾಗಿಬಿಡುತ್ತವೆ. ಆದರೆ ಅವು ಒಂದು ಸರಕಾಗಿಯಷ್ಟೇ ಉಳಿಯದೆ, ಭಡ್ತಿಯವರ ಸೂಕ್ಷ್ಮ ಸಂವೇದನೆಯ ಪರಿಚಯವನ್ನು ನಮಗೆ ಸಮರ್ಥವಾಗಿ ಮಾಡಿಸುತ್ತವೆ. ಮತ್ತು ಪ್ರತಿಯೊಂದು ಲೇಖನದಿಂದಲೂ ಭಡ್ತಿಯವರ ಭಾಷೆಯ ಸೊಗಸನ್ನು ಮತ್ತು ಅಭಿವ್ಯಕ್ತಿಯ ವೈವಿಧ್ಯವನ್ನು ಎತ್ತಿ ತೋರಿಸಬಹುದು. ಇವು ಯಾವುದೇ ಪ್ರಕಾರದ ಹಂಗಿಲ್ಲದ ರಚನೆಗಳಿಂದು ನಾನು ಈ ಮೊದಲೇ ಹೇಳಿದೆ. ಅದನ್ನು ಈ ಕೃತಿಯ ಹೆಚ್ಚುಗಾರಿಕೆಯೆಂದೇ ತಿಳಿಯಬೇಕಲ್ಲವೇ ಅನ್ಯಥಾ ಅಲ್ಲ.
- Book Format: Paperback
- Category: Articles
- Language: Kannada
- Publisher: Sahitya Prakashana
Reviews
There are no reviews yet.